ಮಹಮ್ಮದ್ ಶಮಿ ಮುಸಲ್ಮಾನ,ಹೀಗಾಗಿ ಉತ್ತಮ ಆಟ ಆಡಿದ್ದಾರೆ ಎಂದ ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರ ಯಾರು ಗೊತ್ತೇ

0
147

ಟೀಂ ಇಂಡಿಯಾ ಪ್ರತಿನಿಧಿಸೋ ಪ್ರತಿಯೊಬ್ಬ ಕ್ರಿಕೆಟಿಗರು ಎಲ್ಲಾ ಭಾರತೀಯರ ಹೆಮ್ಮೆ.ಇಲ್ಲಿ ಯಾರೂ ಕೂಡ ಧರ್ಮ,ಜಾತಿ ನೋಡುವುದಿಲ್ಲ.ಎದುರಾಳಿ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕು ಅನ್ನೋ ಹಂಬಲ ಇಟ್ಟುಕೊಂಡಿರುತ್ತಾರೆ.ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್,ಟೀಂಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಸಲ್ಮಾನ,ಹೀಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ.ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿತ್ತು.ಇದರ ಬೆನ್ನಲ್ಲೇ ಹಲವು ಕ್ರಿಕೆಟಿಗರು ಟೀಂ ಇಂಡಿಯಾ ವಿರುದ್ಧ ಹರಿಹಾಯ್ದಿದ್ದರು.ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಕೂಡ ಭಾರತದ ಪ್ರದರ್ಶನವನ್ನು ಪ್ರಶ್ನಿಸಿದ್ದಾರೆ.ಇಷ್ಟೇ ಅಲ್ಲ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿ ತಮ್ಮ ಜಬಾಬ್ದಾರಿ ನಿರ್ವಹಿಸಿದ್ದಾರೆ.ಶಮಿ ಒರ್ವ ಮುಸಲ್ಮಾನ,ಹೀಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.ಮುಸಲ್ಮಾನ ಶ್ರೇಷ್ಠ ಬೌಲಿಂಗ್ ದಾಳಿ ಸಂಘಟಿಸಿರುವುದು ಹೆಮ್ಮೆ ಎಂದಿದ್ದಾರೆ.ಕ್ರಿಕೆಟ್‌ನಲ್ಲಿ ಧರ್ಮವನ್ನು ಎಳೆದುತಂದ ಅಬ್ದುಲ್ ರಜಾಕ್ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.ಸ್ವತ ಪಾಕಿಸ್ತಾನ ಅಭಿಮಾನಿಗಳು ಕೂಡ ರಜಾಕ್ ಹೇಳಿಕೆಯನ್ನು ಟೀಕಿಸಿದ್ದಾರೆ.ಇತ್ತೀಚೆಗಷ್ಟೇ ಅಬ್ದುಲ್ ರಜಾಕ್,ಹಾರ್ದಿಕ್ ಪಾಂಡ್ಯಾಗೆ ಕೋಚ್ ಆಗೋ ಹಂಬಲ ವ್ಯಕ್ತಪಡಿಸಿ ಸುದ್ದಿಯಾಗಿದ್ದರು.

ರೋಹಿತ್ ಶರ್ಮ ದಾಖಲೆ:

ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಹೊಸ ದಾಖಲೆಗಳನ್ನು ಬರೆದಿದ್ದಾರೆ.ಬಾಂಗ್ಲಾ ಬೌಲರುಗಳನ್ನು ಮನಸೊ ಇಚ್ಛೆ ದಂಡಿಸಿ ಹಿಟ್​ ಮ್ಯಾನ್ ವಿಶ್ವಕಪ್​ನಲ್ಲಿಂದು ಮತ್ತೊಂದು ಶತಕ ಸಿಡಿಸಿದ್ದರು.ಈ ಮೂಲಕ ಭಾರತದ ಪರ ವರ್ಲ್ಡ್​ಕಪ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರನೆಂಬ ದಾಖಲೆ ಸೃಷ್ಟಿಸಿದರು.ಇನ್ನು ಇದೇ ಪಂದ್ಯದಲ್ಲಿ 5 ಭರ್ಜರಿ ಸಿಕ್ಸರ್​ ಸಿಡಿಸಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ.ಸಿಕ್ಸರ್ ಸುರಿಮಳೆ ಮೂಲಕ ಇದೀಗ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮೊದಲ ಮೂರು ಸಿಕ್ಸರ್ ಎತ್ತುವುದರೊಂದಿಗೆ ಟೀಂ ಇಂಡಿಯಾದ ಮಾಜಿ ನಾಯಕ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದ ರೋಹಿತ್ ಮತ್ತೆರೆಡು ಭರ್ಜರಿ ಹೊಡೆತದೊಂದಿಗೆ ಹೊಸ ದಾಖಲೆ ಬರೆದರು.ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಟೀಂಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.ಹಾಗೆಯೇ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವದ 4ನೇ ಆಟಗಾರನೆಂಬ ದಾಖಲೆಯನ್ನು ಹಿಟ್​ಮ್ಯಾನ್ ಸೃಷ್ಟಿಸಿದ್ದಾರೆ.ಏಕದಿನ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ 228 ಸಿಕ್ಸ್​ ಸಿಡಿಸಿದರೆ,ರೋಹಿತ್ ಶರ್ಮಾ 230 ಸಿಕ್ಸರ್ ಬಾರಿಸಿ ಮಾಜಿ ನಾಯಕನ ದಾಖಲೆ ಮುರಿದಿದರು.207 ಇನ್ನಿಂಗ್ಸ್‌ನಲ್ಲಿ 230 ಸಿಕ್ಸರ್ ಸಿಡಿಸುವ ಮೂಲಕ ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಎಂಬ ಪಟ್ಟವನ್ನು ತಮ್ಮ ಹೆಸರಿಗೆ ಬರೆದುಕೊಂಡರು.

LEAVE A REPLY

Please enter your comment!
Please enter your name here