ಕ್ರಿಕೆಟ್ ಇಂದ ನಿವೃತ್ತಿ ಘೋಷಿಸಿದ ಮತ್ತೊಬ್ಬ ಭಾರತದ ಖ್ಯಾತ ಆಟಗಾರ,ನಿವೃತ್ತಿ ಕೊಡಲು ಕಾರಣ ಏನ್ ಗೊತ್ತೇ ನೋಡಿರಿ

0
194

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದಾರೆ.ವಿಶ್ವ ಕಪ್ ಕ್ರಿಕೆಟ್ ತಂಡದಲ್ಲಿ ಗಾಯಗೊಂಡ ವಿಜಯ್ ಶಂಕರ್ ಬದಲಿಗೆ ಮಯಾಂಕ್ ಅಗರ್ ವಾಲ್ ಅವರಿಗೆ ಸ್ಥಾನ ನೀಡಿರುವ ಆಯ್ಕೆದಾರರ ಸಮಿತಿ ವಿರುದ್ಧ ರಾಯುಡು ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.ಅಂಬಟಿ ರಾಯುಡು ವಿಶ್ವಕಪ್ ಆಟಗಾರರ ಸ್ಟಾಂಡ್ಬೈ ಪಟ್ಟಿಯಲ್ಲಿದ್ದರು.ಆದರೆ ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡ ನಂತರ ರಿಷಬ್ ಪಂತ್ ಹಾಗೂ ಅಗರ್ ವಾಲ್ ಅವರನ್ನು ಬದಲಿ ಆಟಗಾರರಾಗಿ ಆಯ್ಕೆದಾರರು ಆಯ್ಕೆ ಮಾಡಿರುವುದರಿಂದ ಲಂಡನ್ ಗೆ ಟಿಕೆಟ್ ಪಡೆಯುವಲ್ಲಿ ಅಂಬಟಿ ರಾಯುಡು ವಿಫಲರಾಗಿದ್ದಾರೆ.ಅಂಬಟಿ ರಾಯುಡು 55 ಏಕದಿನ ಪಂದ್ಯಗಳಲ್ಲಿ ಮೂರು ಶತಕ,10 ಅರ್ಧಶತಕದೊಂದಿಗೆ 47.05 ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ.ಆರು ಟಿ20 ಪಂದ್ಯಗಳಲ್ಲಿ 42 ರನ್ ಕಲೆಹಾಕಿದ್ದಾರೆ.ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಾನ ಅವಕಾಶ ಪಡೆಯುವಲ್ಲಿ ರಾಯುಡು ವಿಫಲರಾಗಿದ್ದಾರೆ.

2013 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಂಬಟಿ ರಾಯುಡು ಈ ವರ್ಷ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿದ್ದರು.ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಗಮನ ನೀಡುವ ನಿಟ್ಟಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಳೆದ ವರ್ಷ ರಾಯುಡು ನಿವೃತ್ತಿ ಘೋಷಿಸಿದ್ದರು.17 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 97 ಪಂದ್ಯಗಳಲ್ಲಿ 6151 ರನ್ ಗಳನ್ನು ರಾಯುಡು ಗಳಿಸಿದ್ದಾರೆ.ಐಪಿಎಲ್ ಟೂರ್ನಿಯಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ಪರವಾಗಿ ಉತ್ತಮ ಪ್ರದರ್ಶನ ತೋರಿದ ರಾಯುಡು,ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ನಂಬರ್ ನಾಲ್ಕರ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಳ್ಳಬೇಕಿತ್ತು.ಆದಾಗ್ಯೂ ಸ್ಟಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದರೂ ಅವಕಾಶ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಅಂಬಟಿ ರಾಯುಡು ಅವರಿಗೆ ಸದ್ಯ 33 ವರ್ಷ.ಭಾರತದ ಪರ 55 ಏಕದಿನ ಪಂದ್ಯಗಳನ್ನು ಆಡಿರುವ ಅವರು 47.05 ಸರಾಸರಿಯಲ್ಲಿ 1694 ರನ್‌ಗಳನ್ನು ಗಳಿಸಿದ್ದಾರೆ.ಅಲ್ಲದೆ 6 ಟಿ20 ಪಂದ್ಯಗಳನ್ನೂ ಅವರು ಆಡಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಗಳನ್ನು ಅವರು ಆಡಿಲ್ಲ.ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸದಸ್ಯರು.ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಅಂಬಟಿ ರಾಯುಡು ಅವರಿಗೆ ಆಯ್ಕೆ ಸಮಿತಿ ಆಘಾತ ನೀಡಿತ್ತು.ಅವರ ಬದಲಿಗೆ ತಮಿಳುನಾಡಿನ ವಿಜಯ್‌ ಶಂಕರ್‌ ಅವರನ್ನು ಸಮಿತಿ ಆಯ್ಕೆ ಮಾಡಿಕೊಂಡಿತ್ತು.ಇದೇ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ರಾಯುಡು,ವಿಶ್ವಕಪ್‌ನಲ್ಲಿ ಭಾರತದ ಆಟ ವೀಕ್ಷಿಸಲು ತ್ರಿಡಿ ಕನ್ನಡಕವನ್ನು ಕಾಯ್ದಿರಿಸಿದ್ದೇನೆ ಎಂದಿದ್ದರು.ಆದರೆ ರಾಯುಡು ಅವರನ್ನು ಆಯ್ಕೆ ಮಾಡಿಕೊಳ್ಳದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಅಂಬಟಿ ರಾಯುಡು ಅವರಿಗೆ ಈಗಾಗಲೇ ಹಲವು ಅವಕಾಶ ನೀಡಿದ್ದೇವೆ.ವಿಜಯಶಂಕರ್‌ ಮೂರೂ ಮಾದರಿಗಳಲ್ಲಿ ಸಮರ್ಥ ಆಟಗಾರ ಎನಿಸಿಕೊಂಡಿದ್ದಾರೆ.ಕಠಿಣ ಪರಿಸ್ಥಿತಿಯಲ್ಲಿ ಬೌಲಿಂಗ್‌ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಅವರು ಉತ್ತಮ ಸಾಮರ್ಥ್ಯ ತೋರಬಲ್ಲರು ಎಂದಿದ್ದರು.

LEAVE A REPLY

Please enter your comment!
Please enter your name here