ಭಾರತದ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಈ ವ್ಯಕ್ತಿ ಪಾಕಿಸ್ತಾನ ತಂಡಕ್ಕೆ ಏನ್ ಮಾಡಿದ್ದಾನೆ ಗೊತ್ತೇ ನೋಡಿ ಇಲ್ಲಿ

0
233

ಕೆಲವೊಮ್ಮೆ ತಾವು ಇಷ್ಟ ಪಡುವ ತಂಡಗಳು ಸೋತರೆ ಅಭಿಮಾನಿಗಳು ಯಾವ್ ರೀತಿ ರೊಚ್ಚಿಗೇಳುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ,ಕಳೆದ ಭಾನುವಾರ ಕ್ರಿಕೆಟ್ ಜಗತ್ತಿನಲ್ಲೇ ಅತ್ಯಂತ ಘನತೆಯ ಕ್ರಿಕೆಟ್ ಪಂದ್ಯ ನಡೆದಿತ್ತು ಅದು ಭಾರತ ಮತ್ತು ನಮ್ಮ ಶತ್ರು ದೇಶವಾದ ಪಾಕಿಸ್ತಾನದ ಮಧ್ಯ.ಇಡೀ ಜಗತ್ತೇ ಈ ಬಲಿಷ್ಠ ಪಂದ್ಯಕ್ಕೆ ಸಾಕ್ಷಿಯಾಗಿತ್ತು ಹಾಗೆಯೇ ನಮ್ಮ ಭಾರತ ತಂಡವು ಪಾಕಿಸ್ತಾನ ದೇಶವನ್ನು ಸೋಲಿಸಿ ಸದಾ ಬೀಗುವಂತೆ ಈ ಸಲವೂ ಕೂಡಾ ಬೀಗಿ ನಿಂತು ನಾವು ನಿಮಗಿಂತ ಯಾವಾಗಲೂ ಎಲ್ಲದರಲ್ಲೂ ಬಲಿಷ್ಠ ಎಂದು ತೋರಿಸಿದೆ.

ಈ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಮತ್ತು ಅವರ ಅಭಿಮಾನಿಗಳು ತೀರಾ ಕಂಗೆಟ್ಟು ರೋಸಿ ಹೋಗಿದ್ದಾರೆ,ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟ್ರೊಲ್ ಗಾಲ ಸುರಿಮಳೆನೇ ಸುರಿದಿವೆ ಪಾಕಿಸ್ತಾನದ ವಿರುದ್ಧ.ತಮ್ಮ ಶತ್ರು ದೇಶದ ವಿರುದ್ಧ ಹೀನಾಯವಾಗಿ ಸೋತಿದ್ದಕ್ಕೆ ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲಾಗದಂತ ವಿಷಯವಾಗಿದೆ,ಈಗ ಅಸಲಿ ಸುದ್ದಿ ಏನೆಂದರೆ ಪಾಕಿಸ್ತಾನ ಪದೇ ಪದೇ ಸೋಲುತ್ತಿರುವುದರಿಂದ ಬೇಸತ್ತಿರುವ ಅಭಿಮಾನಿಯೊಬ್ಬ ಇಂತಹ ಕೆಲಸ ಮಾಡಿದ್ದಾನೆ ಗೊತ್ತೇ ನೋಡಿರಿ.

ಅಭಿಮಾನಿಯೊಬ್ಬ ಪಾಕಿಸ್ತಾನದ ತಂಡದ ಮತ್ತು ತಂಡವನ್ನು ಆಯ್ಕೆ ಮಾಡುವ ಸಮಿತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ,ಪಾಕಿಸ್ತಾನ ತಂಡವನ್ನು ಕ್ರಿಕೆಟ್ ಇಂದಲೇ ವಜಾ ಮಾಡುವಂತೆ ಕೋರಿ ಪಿಐಎಲ್ ಅನ್ನು ಕೋರ್ಟ್ ಅಲ್ಲಿ ಸಲ್ಲಿಸಿದ್ದಾರೆ.ಇದಕ್ಕೆ ಸ್ಪಂದಿಸಿರುವ ಗುಜ್ರನ ವಾಲಾ ಸಿವಿಲ್ ಕೋರ್ಟ್ ವಿಚಾರಣೆಗೆ ಸಿದ್ದರಾಗಿದ್ದಾರೆ,ಕೋರ್ಟ್ ಕೂಡಾ ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೆ ಕೋರ್ಟ್ ಅಲ್ಲಿ ಹಾಜರಾಗುವಂತೆ ಸೂಚಿಸಿದ್ದಾರೆ.ಮೊನ್ನೆ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಬರೋಬ್ಬರಿ 89ರನ್ನುಗಳಿಂದ ಸೋಲನ್ನು ಅನುಭವಿಸಿತ್ತು.

LEAVE A REPLY

Please enter your comment!
Please enter your name here