2019ರ ಐಪಿಎಲ್‌ಗೆ ಬರಲಿದೆ ಮತ್ತೊಂದು ಹೊಸ ತಂಡ! ತoಡದ ಹೆಸರು ನೋಡಿ.

0
2709
2018ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಕಮ್ ಬ್ಯಾಕ್ ಸೇರಿದಂತೆ 8 ತಂಡಗಳು ಹೋರಾಟ ನಡೆಸಿತ್ತು. ಇದೀಗ 2019ರ ಐಪಿಎಲ್ ಟೂರ್ನಿಗೆ ಹೊಸ ತಂಡ ಸೇರಿಕೊಳ್ಳುತ್ತಾ? ಆ ತಂಡ ಯಾವುದು? ಇಲ್ಲಿದೆ ವಿವರ.2019ರ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಗಳು ತಯಾರಿ ಆರಂಭಿಸಿದೆ. ಆರ್‌ಸಿಬಿ ಹೊಸ ಕೋಚ್ ಹಾಗೂ ಸಪೂರ್ಟ್ ಸ್ಟಾಪ್ ನೇಮಕ ಮಾಡಿದರೆ, ಇತರ ತಂಡಗಳು ಕೆಲ ಬದಲಾವಣೆ ಮಾಡಿದೆ.
12ನೇ ಆವೃತ್ತಿ ಐಪಿಎಲ್ ಟೂರ್ನಿ ಸಿದ್ಧತೆ ನಡವೆಯೂ ಹೊಸ ತಂಡವೊಂದು ಚುಟುಕು ಟೂರ್ನಿ ಸೇರಿಕೊಳ್ಳಲು ತಯಾರಿ ಆರಂಭಿಸಿದೆ. ಹೌದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜಮ್ಮ ಮತ್ತು ಕಾಶ್ಮೀರ ತಂಡ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.

ಮುಂದಿನ ಐಪಿಎಲ್ ಟೂರ್ನಿಗೆ ಜಮ್ಮ ಮತ್ತು ಕಾಶ್ಮೀರ ತಂಡವನ್ನ ಸೇರಿಕೊಳ್ಳೋ ಕುರಿತು ಐಪಿಎಲ್ ಚೇರ್ಮಮೆನ್ ರಾಜೀವ್ ಶುಕ್ಲಾ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಗರ್ವನರ್ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ತಂಡವನ್ನ ಐಪಿಎಲ್ ಟೂರ್ನಿಗೆ ಸೇರಿಸಿಕೊಳ್ಳೋ ಮೂಲಕ ಶ್ರೀನಗರದಲ್ಲಿ ಐಪಿಎಲ್ ಟೂರ್ನಿಯ ಕೆಲ ಪಂದ್ಯ ಆಯೋಜಿಸುವ ಕುರಿತು ಶುಕ್ಲಾ ಜೊತೆ ಮಾತುಕತೆ ನಡೆಸಿದ್ದೇನೆ. ಈ ಕುರಿತು ಶೀಘ್ರದಲ್ಲೇ ಐಪಿಎಲ್ ಮ್ಯಾನೇಜ್ಮೆಂಟ್ ನಿರ್ಧಾರ ಕೈಗೊಳ್ಳೋ ಭರವಸೆ ಇದೆ ಎಂದು ಸತ್ಯಪಾಲ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಿಂದ ಈಗಾಗಲೇ ಮೂವರು ಕ್ರಿಕೆಟಿಗರು ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದಾರೆ. ಆರ್‌ಸಿಬಿ ಹಾಗೂ ಟೀಂ ಇಂಡಿಯಾಗೂ ಆಯ್ಕೆಯಾಗಿದ್ದ ಪರ್ವೇಜ್ ರಸೂಲ್, ಕಳೆದ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾದದ ಮನ್ಜೂರ್ ಅಹಮ್ಮದ್ ದಾರ್ ಹಾಗೂ ಜಮ್ಮ ಮತ್ತು ಕಾಶ್ಮೀರ ಮೂಲದ ಮಿಥುನ್ ಮನ್ಹಾಸ್ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದಾರೆ.

LEAVE A REPLY

Please enter your comment!
Please enter your name here