ರೆಬೆಲ್ ಸ್ಟಾರ್ ಅಂಬರೀಷ್ ಮಹೇಂದ್ರ ಸಿಂಗ್ ಧೋನಿಗೆ 50 ಸಾವಿರ ಹಣ ಕೊಟ್ಟಿದ್ದು ಯಾಕೆ? ಯಾಕೆ ಸುದ್ದಿ ಆಗಲಿಲ್ಲ ಗೊತ್ತೇ ನೋಡಿರಿ…

0
295

ಅಂಬರೀಷ್ ಅವರು ಕಲಿಯುಗದ ಕರ್ಣ ಅನ್ನುವುದು ಇಡೀ ಭಾರತಕ್ಕೆ ಗೊತ್ತಿರುವ ವಿಚಾರ,ಇನ್ನು ಅಂಬರೀಷ್ ಅವರು ಯಾವತ್ತೂ ಹಣದ ಹಿಂದೆ ಬಿದ್ದವರಲ್ಲ ಮತ್ತು ಅವರಿಂದ ಸಹಾಯ ಪಡೆದವರು ಸಾವಿರಾರು ಜನರು ಇದ್ದಾರೆ.ಇನ್ನು ಅಂಬರೀಷ್ ಅವರು ನಾನು ಇವರಿಗೆ ಸಹಾಯ ಮಾಡಿದ್ದೆ, ಅವರಿಗೆ ಸಹಾಯ ಮಾಡಿದ್ದೆ ಎಂದು ಎಲ್ಲೂ ಕೂಡ ಹೇಳಿಕೊಂಡವರಲ್ಲ.

ಅಂಬಿ ಅವರಿಗೆ ಹಣವನ್ನ ಸಂಪಾದನೆ ಮಾಡಲು ಹಲವು ದಾರಿಗಳು ಮತ್ತು ಅವಕಾಶಗಳು ಇದ್ದವು ಆದರೆ ಅಂಬರೀಷ್ ಯಾವತ್ತೂ ಹಣದ ಹಿಂದೆ ಬಿದ್ದವರಲ್ಲ ಅದಕ್ಕೆ ಅವರನ್ನ ಕಲಿಯುಗದ ಕರ್ಣ ಅನ್ನುವುದು. ಸ್ನೇಹಿತರೆ ಇಂದು ಮಹೇಂದ್ರ ಸಿಂಗ್ ಧೋನಿ ಅವರು ಸಾವಿರಾರು ಕೋಟಿಯ ಒಡೆಯ ಆಗಿರಬಹುದು ಆದರೆ ಒಂದು ಕಾಲದಲ್ಲಿ ಅಂದರೆ ಅವರು ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡುವ ಮೊದಲು ಅವರು ಕೂಡ ತುಂಬಾ ಬಡತನದಲ್ಲಿ ಬೆಳೆದವರು.ನಾವು ಹೇಳುವ ಈ ವಿಷಯ ನಮ್ಮ ಕರ್ನಾಟದಲ್ಲಿ ತುಂಬಾ ಜನರಿಗೆ ತಿಳಿದಿಲ್ಲ, ಸ್ನೇಹಿತರೆ ಅವತ್ತು ಭಾರತ ಮತ್ತು ಶ್ರೀಲಂಕಾ ನಡೆವೆ ಒಂದು ಪಂದ್ಯ ನಡೀತಾ ಇರುತ್ತದೆ ಅದು ಏಕದಿನದ ಪಂದ್ಯ ಆಗಿರುತ್ತದೆ ಮತ್ತು ಆ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ ಇರುತ್ತದೆ. ಇನ್ನು ಆ ಪಂದ್ಯವನ್ನ ನೋಡಲು ಅಂಬರೀಷ್ ಅವರು ಕೂಡ ಹೋಗಿರುತ್ತಾರೆ, ಆವತ್ತು ಧೋನಿ ಅವರ ಬ್ಯಾಟಿಂಗ್ ನೋಡಿದ ಅಂಬರೀಷ್ ಅವರು ಧೋನಿ ಬ್ಯಾಟಿಂಗ್ ನ್ನ ತುಂಬಾ ಇಷ್ಟ ಪಡುತ್ತಾರೆ.

ಸ್ನೇಹಿತರೆ ಇನ್ನು ಪಂದ್ಯ ಮುಗಿದ ತಕ್ಷಣ ಧೋನಿ ಅವರ ಬಗ್ಗೆ ವಿಚಾರಣೆ ಮಾಡಿದ ಅಂಬಿ, ಅಂದು ಧೋನಿ ತುಂಬಾ ಬಡತನದಲ್ಲಿ ಇರುವುದನ್ನ ತಿಳಿದು ಧೋನಿಗೆ 50 ಸಾವಿರ ರೂಪಾಯಿಯ ಚೆಕ್ ನ್ನ ನೀಡಿದ್ದಾರೆ ಅಂಬರೀಷ್ ಅವರು. ಇನ್ನು ಆ ಕಾಲದಲ್ಲಿ 50 ಸಾವಿರ ರೂಪಾಯಿ ತುಂಬಾ ದೊಡ್ಡ ಮೊತ್ತದ ಹಣ ಇನ್ನು ವಿಷಯವನ್ನ ಅಂಬರೀಷ್ ಅವರು ಎಲ್ಲೂ ಕೂಡ ಹೇಳಿಕೊಳ್ಳಲಿಲ್ಲ. ಇನ್ನು ವಿಷಯವನ್ನ ಧೋನಿ ಅವರು ಒಂದು ಹಿಂದಿ ಚಾನೆಲ್ ನ ಇಂಟರ್ವ್ಯೂ ನಲ್ಲಿ ಹೇಳಿಕೊಂಡರು, ಇನ್ನು ಈ ರೀತಿ ಸಾವಿರಾರು ಜನಕ್ಕೆ ಸಹಾಯವನ್ನ ಮಾಡಿದ್ದಾರೆ ಅಜಾತಶತ್ರು ಅಂಬರೀಷ್ ಅವರ .

ಇನ್ನು ಅಂಬರೀಷ್ ಅವರು ಇಂತಹ ಸ್ನೇಹ ಜೀವಿ ಆಗಿದ್ದರು ಅಂದರೆ ಅವರ ಸಾವಿಗೆ ಬಂದ ಲಕ್ಷಾಂತರ ಜನರ ಸಾಕ್ಷಿ, ಮುಂದೆ ಒಂದು ದಿನ ಅಂಬರೀಷ್ ಅವರಿಗೆ ಇರುವಷ್ಟೇ ಅಭಿಮಾನಿಗಳನ್ನ ಗಳಿಸಿಕೊಳ್ಳುವಂತ ನಟ ಬರಬಹುದು ಆದರೆ ಅಂಬರೀಷ್ ಅವರ ವ್ಯಕ್ತಿತ್ವವನ್ನ ಹೊಂದಿರುವ ಇನ್ನೊಬ್ಬ ನಟ ಬರಲು ಸಾಧ್ಯವಿಲ್ಲ.

ಸ್ನೇಹಿತರೆ ಅಂಬಿ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಮತ್ತು ಮತ್ತೆ ಕರ್ನಾಟಕದಲ್ಲಿ ಅಂಬಿ ಹುಟ್ಟಿ ಬರಲಿ ಎಂದು ನಾವೆಲ್ಲ ಆಶಿಸೋಣ ಸ್ನೇಹಿತರೆ ಅಂಬಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.ಹಾಗೆ ಐಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ,ವಿಷಯವನ್ನು ಹಂಚಿ ಕೊಳ್ಳೋದು ಒಂದು ಒಳ್ಳೆ ವಿಷಯ .

LEAVE A REPLY

Please enter your comment!
Please enter your name here