ತಾಯಿಯಾದ ಸಂಭ್ರಮದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿ

0
140

ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ನಟಿಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ತಾಯಿಯಾದ ವಿಷಯ ತಿಳಿದು ಸಂತಸ ಪಟ್ಟಿದ್ದಾರೆ. ಹೌದು ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಪಡೆದು ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಕಾಜಲ್ ಆಗರ್ವಾಲ್ ಅವರು ಇತ್ತೀಚೆಗೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರು. ಏಕೆಂದರೆ ಕಾಜಲ್ ಅಗರ್ವಾಲ್ ಅವರು ಕಳೆದ ವರ್ಷ 2020ರ ಅಕ್ಟೋಬರ್ ನಲ್ಲಿ ಉದ್ಯಮಿ ಆಗಿದ್ದ ಗೌತಮ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟು ಸಾಂಸಾರಿಕ ಬದುಕಿಗೆ ಪ್ರವೇಶ ಪಡೆದಿದ್ದರು.

ಹೋ ಗಯಾ ನಾ ಎಂಬ ಚಿತ್ರದ ಮೂಲಕ ಕಾಜಲ್ ಅಗರ್ವಾಲ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ತದ ನಂತರ ಲಕ್ಷ್ಮಿ ಕಲ್ಯಾಣಂ, ಮಗಧೀರ, ಆರ್ಯ2, ಡಾರ್ಲಿಂಗ್, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ಬಾದ್ ಶಾ, ಜಿಲ್ಲಾ, ಟೆಂಪರ್, ಮರ್ಸೇಲ್ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ವೈಯಕ್ತಿಕ ಬದುಕಿನ ಕುರಿತ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಮದುವೆಯಾದ ನಂತರ ಸಿನಿಮಾಗಳಿಂದ ಅಂತರ ಕಾಯ್ದುಕೊಂಡು ತಮ್ಮ ಪತಿ ಗೌತಮ್ ಅವರೊಟ್ಟಿಗೆ ಇರುವ ಒಂದಷ್ಟು ಫೋಟೋ ಮತ್ತು ಅವರೊಟ್ಟಿಗೆ ಕಳೆದ ಸಮಯಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತಾನೇ ತಾವು ಗರ್ಭಿಣಿ ಆಗುತ್ತಿರುವ ವಿಚಾರವನ್ನ ಶೇರ್ ಮಾಡಿದ್ದರು.

ಅದರ ಜೊತೆಗೆ ವಿಶೇಷ ಅಂದರೆ ಕಾಜಲ್ ಅಗರ್ವಾಲ್ ಅವರು ತಾವು ಗರ್ಭಿಣಿ ಆಗಿದ್ದ ದಿನಗಳಲ್ಲಿ ತಾವು ಅನುಭವಿಸಿದಂತಹ ನೋವುಗಳನ್ನ ಅದರ ವಿಶೇಷ ಅನುಭವಗಳನ್ನ, ಆ ಸಂಧರ್ಭದಲ್ಲಿ ಹೆಣ್ಣು ಎದುರಿಸುವ ಸಮಸ್ಯೆಗಳನ್ನು ಯಾವುದೇ ರೀತಿಯ ಮುಜುಗರ ಇಲ್ಲದೆ ಮುಕ್ತವಾಗಿ ಹಂಚಿಕೊಂಡಿದ್ದರು. ಇನ್ನು ಇದೀಗ ಕೆಲವು ದಿನಗಳ ಹಿಂದೆಯಷ್ಟೇ ಕಾಜಲ್ ಅಗರ್ವಾಲ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಕಾಜಲ್ ಅಗರ್ವಾಲ್ ಅವರ ಕುಟುಂಬಕ್ಕೆ ಅತ್ಯಂತ ಸಂಭ್ರಮದ ಸುದ್ದಿಯಾಗಿದ್ದು, ಅವರ ಇಡೀ ಕುಟುಂಬ ಸಂತಸದಲ್ಲಿದೆ. ಇನ್ನೂ ಈ ವಿಚಾರ ಕಾಜಲ್ ಅಗರ್ವಾಲ್ ಅವರ ಅಭಿಮಾನಿಗಳಿಗೂ ಕೂಡ ಸಂತಸದ ಸುದ್ದಿ ಆಗಿದೆ. ಇನ್ನು ನಟಿ ಕಾಜಲ್ ಅಗರ್ವಾಲ್ ಅವರು ಮದುವೆ ಆದ ನಂತರ ಸಿನಿಮಾದಿಂದ ದೂರ ಉಳಿಯುತ್ತಾರೆ ಎಂಬ ವಿಚಾರವಾಗಿ ಸ್ವತಃ ನಟಿ ಕಾಜಲ್ ಅಗರ್ವಾಲ್ ಅವರು ನಾನು ನನ್ನ ಎಲ್ಲಾ ತಾಯ್ತನದ ಕರ್ತವ್ಯ ಮುಗಿಸಿ ಈ ವರ್ಷದ ಅಂತ್ಯದ ವೇಳೆಗೆ ಮತ್ತೆ ಚಿತ್ರಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here