ಮುಂಬೈ ಅಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ಪೊಲೀಸರು,ಪೊಲೀಸ್ ವಾಹನದಲ್ಲಿ ಕರೆದೊಯ್ದ ಮುಂಬೈ ಪೊಲೀಸ್

0
155

ದೋಸ್ತಿ ನಾಯಕರು ಇಂದು ರಾಜಭವನದ ಮುಂದೆ ಹೈ ಡ್ರಾಮಾ ನಡೆಸುತ್ತಿದ್ದಾರೆ.ಈಮೂಲಕ ಸರ್ಕಾರವನ್ನು ಅಸ್ತಿರಗೊಳಿಸಲು ಹೊರಟ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದಾರೆ.ಹೀಗಾಗಿ ಬಿಜೆಪಿಯ ನಡೆಯನ್ನು ಖಂಡಿಸಿ ಕಾಂಗ್ರೆಸ್-ಜೆಡಿಎಸ್ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಅಲ್ಲದೇ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಡು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರೇ,ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಗುಲಾಬ್ ನಬೀ ಆಜಾದ್ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸೇರಿದಂತೆ ವಿವಿಧ ಮುಖಂಡರು ರಾಜಭವನದ ಮುಂದೆ ಸೇರಿ ಪ್ರತಿಭಟನೆ,ಮುತ್ತಿಗೆ ಯತ್ನದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ನಾಯಕರೊಂದಿಗೆ ಕೈಜೋಡಿಸಿರುವ ಎರಡೂ ಪಕ್ಷದ ಕಾರ್ಯಕರ್ತರು,ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಪರಿಣಾಮ,ರಾಜಭವನದ ಸುತ್ತಾ ಮುತ್ತಾ ಪುಲ್ ಟ್ರಾಫಿಕ್ ಜಾಮ್ ಆಗಿದೆ.ಅಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲ ನಾಯಕರನ್ನು ಪೊಲೀಸರು ಬಂಧಿಸಿ,ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ.

ಸದ್ಯದ ಕರ್ನಾಟಕ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗಳು ಹೈಡ್ರಾಮಗಳು ನಡೆಯುತ್ತಿದ್ದು ಇಡೀ ರಾಷ್ಟ್ರವೇ ಕರ್ನಾಟಕ ರಾಜಕಾರಣದತ್ತ ಗಮನ ನೆಟ್ಟಿದೆ.ಸದ್ಯ ಮುಂಬೈ ಅಲ್ಲಿನ ಹೋಟೆಲ್ಯೊಂದರಲ್ಲಿ ರಾಜೀನಾಮೆ ನೀಡಿದ ಕರ್ನಾಟಕ ರಾಜಕಾರಣಿಗಳು ಇದ್ದು ಸಚಿವ ಡಿಕೆ ಶಿವಕುಮಾರ್ ಅವರು ಅವರೊಂದಿಗೆ ಸಂಧಾನ ಮಾಡಿಕೊಳ್ಳಲು ಮುಂಬೈ ಹೋಟೆಲ್ಗೆ ಹೋಗಿದ್ದು ಹೋಟೆಲ್ ಒಳಗಡೆ ಅವಕಾಶ ಸಿಗಲಾರದೆ ಹೊರಗಡೆನೇ ಕೂತಿದ್ದಾರೆ.ಇನ್ನು ಪೋಲೀಸರ ಜೊತೆ ವಾಗ್ವಾದ ನಡೆಸಿದ ಡಿಕೆಶಿ ಅವರನ್ನು ಮುಂಬೈ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here