ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿ ಪೊಲೀಸರಿಗೆ ಸಿಕ್ಕಾಬಿದ್ದ ನಟಿ. ಯಾರು ಗೊತ್ತೇ ಈ ನಟಿ ನೋಡಿರಿ…

0
1239

ನಟಿ ನಟರು ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿ ಪೊಲೀಸರ ಕೈಗೆ ಸಿಕ್ಕಾಕಿಕೊಳ್ಳುವುದು ಹೊಸದೇನಲ್ಲ. ಇದೀಗ ನಟಿಯೊಬ್ಬರು ಹೀಗೆ ಡ್ರಿಂಕ್ ಅಂಡ್ ಡ್ರೈವ್ ನಲ್ಲಿ ಸಿಕ್ಕಾಕಿಕೊಂಡಿದ್ದಾರೆ.

ಹೌದು, ಇತ್ತೀಚೆಗೆ ಸೆಲಿಬ್ರಿಟಿಗಳ ಡ್ರಿಂಕ್ ಅಂಡ್ ಡ್ರೈವ್ ನಲ್ಲಿ ಪೊಲೀಸರ ಕೈಗೆ ಸಿಕ್ಕಾಕಿ ಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿವೆ. ಇದೀಗ ತಮಿಳು ನಟಿ ಗಾಯತ್ರಿ ರಘುರಾಂ ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಈಕೆ ಕನ್ನಡದ ‘ಮನಸೆಲ್ಲಾ ನೀನೆ’ ಚಿತ್ರದಲ್ಲಿಯೂ ಸಹ ಅಭಿನಯಸಿದ್ದರು.ಅಭಿಮಾನಿಗಳಿಗೆ ಅಭಿಮಾನ ಅನ್ನುವುದು ಎಷ್ಟಿರುತ್ತದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಯಾಕೆಂದರೆ, ಡ್ರಿಂಕ್ ಅಂಡ್ ಡ್ರೈವ್ ನಲ್ಲಿ ಪೊಲೀಸರ ಬಳಿ ದಂಡ ಕಟ್ಟಲು ಈ ನಟಿ ರೆಡಿಯಾಗಿದ್ದಾಗ ಅಭಿಮಾನಿಗಳು ಸೆಲ್ಫಿಗೆ ಮುಗಿ ಬಿದ್ದಿದ್ದಾರೆ.

ಚೆನೈ ನ ಎಂ ಆರ್ ಸಿ ನಗರದಲ್ಲಿ ರೆಸ್ಟೋರೆಂಟ್ ವೊಂದರಲ್ಲಿ ಪಾರ್ಟಿ ಮುಗಿಸಿ ತಾವೇ ಕಾರು ಚಲಾಯಿಸಿ ಬರುವಾಗ ಪೊಲೀಸರು ಕಾರು ತಡೆದಿದ್ದಾರೆ. ಆಗ ಆಕೆಯನ್ನು ನೋಡಿದ ಅಭಿಮಾನಿಗಳು ಇವರ ಜೊತೆ ವಿಡಿಯೋ ಫೋಟೋಗೆ ಮುಂದಾಗಿದ್ದಾರೆ. ಆಗ ಪೊಲೀಸರ ಬಳಿ ಈ ನಟಿ ಮನವಿ ಮಾಡಿಕೊಂಡು ಮನೆಗೆ ಬಿಡುವಂತೆ ಹೇಳಿದ್ದಾರೆ. ಕಾನ್ಸಟೇಬಲ್ ಒಬ್ಬರು ಈಕೆಯನ್ನು ಮನೆಗೆ ಬಿಟ್ಟು ಆಕೆಯ ಕಾರನ್ನು ಸೀಸ್ ಮಾಡಿದ್ದಾರೆ. ಅಷ್ಟೆ ಅಲ್ಲ ಸೆಕ್ಷನ್ 185 ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here