ಕನ್ನಡ ‘ಸಿಂಗಂ’ ಐಪಿಎಸ್ ಅಧಿಕಾರಿಯನ್ನ ಎತ್ತಂಗಡಿ ಮಾಡಿದ ಕೇರಳ ಸರ್ಕಾರ…! ಯಾವ ಕಾರಣಕ್ಕೆ ಗೊತ್ತೇ ನೋಡಿ

0
655

ಅಯ್ಯಪ್ಪ ದರ್ಶನಕ್ಕೆಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಬಂದಿದ್ದಾಗ ಅವರ ಜತೆ ವಾಕ್ಸಮರ ನಡೆಸಿ ಸುದ್ದಿಯಾಗಿದ್ದ ಕರ್ನಾಟಕದ ದಾವಣಗೆರೆ ಮೂಲದ ಕೇರಳ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಬರಿಮಲೆಯಿಂದ ಬೇರೆಡೆ ವರ್ಗ ಮಾಡಲಾಗಿದೆ.

ನೀಲಕ್ಕಲ್ ಹಾಗೂ ಪಂಪಾ ಸರೋವರದಲ್ಲಿ ಭದ್ರತೆ ಹೊಣೆಯನ್ನು ಯತೀಶ್‌ಗೆ ವಹಿಸಲಾಗಿತ್ತು. ಆದರೆ ಇದೀಗ ಯತೀಶ್ ಚಂದ್ರ ಅವರನ್ನು ಶಬರಿಮಲೆ ಭದ್ರತಾ ಡ್ಯೂಟಿಯಿಂದ ಬೇರೆಡೆ ಎತ್ತಂಗಡಿ ಮಾಡಲಾಗಿದೆ.

ಸದ್ಯ ಭಕ್ತರ ದರ್ಶನಕ್ಕೆ ಶಬರಿಮಲೆ ದೇಗುಲ ತೆರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಮಹಿಳಾ ಪ್ರವೇಶಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆಯೂ ಕೂಡ ನಡೆಯುತ್ತಿತ್ತು. ತಮ್ಮ ಭದ್ರತೆಯಲ್ಲಿ ಭಕ್ತರು ಯಾವುದೇ ಭಯ ಭೀತಿ ಇಲ್ಲದೇ ದೇವಾಲಯಕ್ಕೆ ಆಗಮಿಸಬಹುದು ಎಂದು ಯತೀಶ್ ಚಂದ್ರ ಹೇಳಿದ್ದರು.ಆದರೆ ಯತೀಶ್ ಚಂದ್ರ ಅವರನ್ನು ಇದೀಗ ಬೇರೆಡೆ ವರ್ಗಾವಣೆ ಮಾಡಲಾಗಿದೆ.

ಸುದ್ದಿ ಕೃಪೆ ಸುವರ್ಣ ನ್ಯೂಸ್ ಕನ್ನಡ

LEAVE A REPLY

Please enter your comment!
Please enter your name here