ಕನ್ನಡಕ್ಕೆ ಡಬ್ ಮಾಡುವ ಅಗತ್ಯ ಇಲ್ಲ ಎಂದಿದ್ದ ತೆಲುಗು ನಟ, ಈಗ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ನಟ

0
92

ಟಾಲಿವುಡ್ ಸ್ಟಾರ್ ನಟನಿಗೆ ಬೆವರಿಳಿಸಿದ ಕನ್ನಡಿಗರು. ಕನ್ನಡಿಗರ ಆಕ್ರೋಶಕ್ಕೆ ಎಚ್ಚೆತ್ತುಕೊಂಡು ತಾನು ಆಡಿದ ಅಲಕ್ಷ್ಯತನದ ಮಾತಿಗೆ ಕನ್ನಡಿಗರ ಕ್ಷಮೆ ಕೋರಿದ್ದಾರೆ. ಹೌದು ಮಾತು ಆಡಿದರೆ ಹೋಯ್ತು. ಮುತ್ತು ಹೊಡೆದರೆ ಹೋಯ್ತು ಎಂಬಂತೆ ಯಾರೇ ಆಗಲಿ ತಾವು ಆಡುವ ಮಾತಿನ ಬಗ್ಗೆ ಬಹಳ ಎಚ್ಚರ ಆಗಿರಬೇಕು. ಅದರಲ್ಲೂ ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದೆನಿಸಿಕೊಂಡವರು, ಸಿನಿಮಾ ತಾರೆಗಳು ತಮ್ಮ ಮಾತಿನ ಬಗ್ಗೆ ತುಸು ಹೆಚ್ಚೆ ಜವಬ್ದಾರಿತನವನ್ನ ಹೊಂದಿರಬೇಕಾಗಿರುತ್ತದೆ. ಆದರೆ ಕೆಲವೊಮ್ಮೆ ಆಕಸ್ಮಿಕ ಅಥವಾ ಉದ್ದೇಶಪೂರಿತ ಇಲ್ಲ ಗೊತ್ತೋ ಗೊತ್ತಿಲ್ಲದೆ ಅದರ ಪರಿಣಾಮ ಅರಿಯದೆ ಆಡುವ ಮಾತು ತಮ್ಮ ವ್ಯಕ್ತಿತ್ವ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬುದಕ್ಕೆ ಇದೀಗ ಟಾಲಿವುಡ್ ಸ್ಟಾರ್ ನಟ ನಾನಿ ಅವರು ಇದೀಗ ತಳುಕು ಹಾಕಿಕೊಂಡಿದ್ದಾರೆ. ಹೌದು ನಟ ನಾನಿ ತೆಲುಗು ಚಿತ್ರರಂಗದ ಪ್ರಖ್ಯಾತ ನಟ.

ಸಹಜ ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಾನಿ ಅವರ ಸಿನಿಮಾಗಳು ಪರಭಾಷೆಯಲ್ಲಿಯೂ ಕೂಡ ಉತ್ತಮವಾಗಿ ಕಲೆಕ್ಷನ್ ಮಾಡುತ್ತವೆ. ಇನ್ನೊಂದೆಡೆ ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಎಂಬ ಹೊಸ ಟ್ರೆಂಡ್ ಶುರು ಆಗಿದೆ. ಹಾಗಾಗಿ ನಾನಿ ಅವರ ನಟನೆಯ ಅಂಟೆ ಸುಂದರಾನಿಕಿ ಎಂಬ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಾನಿ ಅವರ ನಟನೆಯ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಅಂಟೆ ಸುಂದರಾನಿಕಿ ಚಿತ್ರ ತೆಲುಗು ಮೂಲವಾಗಿದ್ದರು ಭಾರತದ ವಿವಿಧ ಭಾಷೆಗಳಿಗೆ ಡಬ್ ಆಗುತ್ತಿದೆ. ಅಂತೆಯೇ ನಾನಿ ಇತರೆ ಭಾಷೆಗಳಲ್ಲಿ ಡಬ್ ಕೂಡ ಮಾಡಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಡಬ್ ಮಾಡಿರಲಿಲ್ಲ. ಏಕೆಂದರೆ ಅವರ ಪ್ರಕಾರ ಕನ್ನಡಿಗರಿಗೆ ತೆಲುಗು ಸಿನಿಮಾವನ್ನ ಮೂಲ ಭಾಷೆಯಲ್ಲೇ ನೋಡಲು ಇಷ್ಟಪಡುತ್ತಾರಂತೆ.

ನಮಗೆ ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತದೆಯಂತೆ. ಹಾಗಾಗಿ ನಮ್ಮ ಕನ್ನಡ ಭಾಷೆಗೆ ಡಬ್ ಮಾಡದಿದ್ದರು ಕೂಡ ತೆಲುಗು ಚಿತ್ರವನ್ನ ತೆಲುಗು ಭಾಷೆಯಲ್ಲಿ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನಿ ಅವರ ಹೇಳಿಕೆ ಇದು. ನಾನಿ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು. ಇದು ನಡೆದದ್ದು ಅಂಟೆ ಸುಂದರಾನಿಕಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ. ನಾನಿ ಅವರಿಗೆ ನೀವು ಎಲ್ಲಾ ಭಾಷೆಯಲ್ಲಿ ಡಬ್ ಮಾಡಿದ್ದೀರಿ. ಆದರೆ ಕನ್ನಡದಲ್ಲಿ ಮಾತ್ರ ಡಬ್ ಮಾಡಿಲ್ಲ ಏಕೆ ಎಂಬ ಪ್ರಶ್ನೆಗೆ ನಾನಿ ಅವರಿಂದ ಬಂದ ಅಲಕ್ಷ್ಯತನದ ಹೇಳಿಕೆ ಇದಾಗಿತ್ತು. ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತೆ. ಅವರಿಗೆ ಕನ್ನಡದಲ್ಲಿ ಡಬ್ ಮಾಡುವ ಅಗತ್ಯ ಇಲ್ಲ. ನಾನು ಕನ್ನಡಕ್ಕೆ ಡಬ್ ಮಾಡುವುದಿಲ್ಲ ಎಂಬುದು.

ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಟ ನಾನಿ ಅವರು ನಾನು ಹೇಳಲು ಹೊರಟಿದ್ದ ಮಾತಿನ ಅರ್ಥ ಬೇರೆ. ಅದು ತಪ್ಪಾಗಿ ನಿಮಗೆ ಅರ್ಥವಾಗಿದೆ. ನನ್ನ ಮಾತಿನಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ಅದಕ್ಕೆ ಹೇಳುವುದು ಕೆಟ್ಟ ಮೇಲೆ ಬುದ್ದಿ ಬಂತು ಎಂದು. ಕೆಲವು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಾಣುತ್ತಿದೆ. ಅದು ಸಿನಿಮಾದ ಮೇಕಿಂಗ್, ಕಥೆಯ ಗುಣಮಟ್ಟ ಹೀಗೆ ಪ್ರತಿಯೊಂದು ವಿಭಾಗದಲ್ಲಿಯೂ ಕೂಡ ಕನ್ನಡ ಸಿನಿಮಾಗಳು ಅಪ್ ಡೇಟ್ ಆಗಿ ಮೂಡಿ ಬರುತ್ತಿವೆ. ಕನ್ನಡ ಸಿನಿಮಾಗಳು ಇದೀಗ ವಿಶ್ವದ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಕನ್ನಡದ ಕೆಜಿಎಫ್2 ಸಿನಿಮಾ ಭಾರತೀಯ ಚಿತ್ರರಂಗದದಲ್ಲಿ ಯಾವ ಸಿನಿಮಾ ಕೂಡ ಮಾಡದಂತಹ ದಾಖಲೆ ಮಾಡಿ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ.

LEAVE A REPLY

Please enter your comment!
Please enter your name here