ಕನ್ನಡ ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಟ್ಟ ಕನ್ನಡ ಕಿರುತೆರೆ ನಟಿ

0
79

ಇತ್ತೀಚೆಗೆ ಕನ್ನಡದ ಕಿರುತೆರೆಯ ಅನೇಕ ನಟ ನಟಿಯರು ತಮ್ಮ ನಟನಾ ಪ್ರತಿಭೆಯ ಮೂಲಕ ಜನರ ಮನಗೆದ್ದು ಅಪಾರ ಜನಪ್ರಿಯತೆ ಗಳಿಸುತ್ತಿದ್ದಾರೆ. ಅದೇ ರೀತಿಯಾಗಿ ಕನ್ನಡ ಕಿರುತೆರೆಯಲ್ಲಿ ಅದರಲ್ಲಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ಧಾರಾವಾಹಿಗಳು ವಿಭಿನ್ನ ಕಥಾ ವಸ್ತುವನ್ನೊಳಗೊಂಡು ಪ್ರಸಾರ ಆಗುತ್ತಿರುವ ಕಾರಣ ಈ ಧಾರಾವಾಹಿ ಎಲ್ಲಾ ಕೂಡ ಕನ್ನಡ ಕಿರುತೆರೆ ವೀಕ್ಷಕರ ಮನ ಗೆದ್ದಿವೆ. ಕಲರ್ಸ್ ಕನ್ನಡದಲ್ಲಿ ಪ್ರಮುಖ ಧಾರಾವಾಹಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಧಾರಾವಾಹಿ ಅಂದರೆ ಅದು ಕನ್ನಡತಿ. ಈ ಕನ್ನಡತಿ ಧಾರಾವಾಹಿ ಕೇವಲ ಕಥಾ ನಾಯಕ ಮತ್ತು ನಾಯಕಿಯ ಮೇಲೆ ಕೇಂದ್ರಿತವಾಗಿಲ್ಲ.

ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಮಹತ್ವ ಅದರದ್ದೇ ಪ್ರಾಶಸ್ತ್ಯವನ್ನು ಒಳಗೊಂಡಿದೆ. ಅದರಂತೆ ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಎಂಬ ಖಳ ನಾಯಕಿ ಪಾತ್ರ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಈ ಸಾನಿಯಾ ಪಾತ್ರದಲ್ಲಿ ನಟಿಸುತ್ತಿರುವ ರಮೋಲಾ ಅವರ ಖಡಕ್ ನಟನೆಗೆ ವೀಕ್ಷಕರು ಯಾರು ಈಕೆ. ಎಷ್ಟು ಸಹಜವಾಗಿ ಖಳ ನಟಿಯ ಪಾತ್ರದಲ್ಲಿ ನಟಿಸುತ್ತಿದ್ದಾಳಲ್ಲ. ಕೇವಲ ನಟನೆ ಮಾತ್ರ ಅಲ್ಲದೆ ನೋಡಲು ಕೂಡ ಸೌಂದರ್ಯವತಿ ಆಗಿರುವ ನಟಿ ರಮೊಲೋ ಅವರಿಗೆ ಅಪಾರ ಮೆಚ್ಚುಗೆಯ ನುಡಿಗಳು ವ್ಯಕ್ತವಾಗುತ್ತಲೇ ಇವೆ. ಇನ್ನು ನಟಿ ರಮೋಲಾ ಅವರು ಕಲರ್ಸ್ ಕನ್ನಡದ ಬಿಗ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್8 ಮುಗಿದ ನಂತರ ಮಿನಿ ಬಿಗ್ ಬಾಸ್ ಎಂಬ ಅಲ್ಪ ದಿನಗಳ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿರುತೆರೆ ಸ್ಟಾರ್ ನಟ ನಟಿಯರು ಭಾಗವಹಿಸಿದ್ದರು.

ಅದರಲ್ಲಿ ಕನ್ನಡತಿ ಧಾರಾವಾಹಿಯ ವಿಲನ್ ಸಾನಿಯಾ ಪಾತ್ರಧಾರಿ ನಟಿ ರಮೋಲಾ ಕೂಡ ಭಾಗವಹಿಸಿದ್ದರು. ತೆರೆ ಮೇಲೆ ಮಾತ್ರ ನೋಡುತ್ತಿದ್ದ ನಟಿ ರಮೋಲಾ ಅವರನ್ನ ಈ ಮಿನಿ ಬಿಗ್ ಬಾಸ್ ಶೋನಲ್ಲಿ ಅವರ ವ್ಯಕ್ತಿತ್ವ ಕಂಡು ಅನೇಕರು ಫಿದಾ ಆಗಿದ್ದರು. ಅಷ್ಟರ ಮಟ್ಟಿಗೆ ನಟಿ ರಮೋಲಾ ಅವರ ಗುಣ ಸ್ವಭಾವ ಎಲ್ಲರಿಗೂ ಇಷ್ಟ ಆಗಿತ್ತು. ನಿಜಕ್ಕೂ ಈಕೆ ಮುಂದಿನ ದಿನಗಳಲ್ಲಿ ಸಿನಿ‌ಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾಳೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಅದೇ ರೀತಿಯಾಗಿ ಇದೀಗ ನಟಿ ರಮೋಲಾ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಹರಸಿ ಬಂದಿವೆ. ಅದಕ್ಕಾಗಿ ಒಂದಷ್ಟು ಫೋಟೋಶೂಟ್ ಕೂಡ ಮಾಡಿಸುತ್ತಿದ್ದಾರೆ ನಟಿ ರಮೋಲಾ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ರಮೋಲಾ ಅವರು ತಮ್ಮ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಅವರ ಫೋಟೋಗಳಿಗೆ ಭಾರಿ ಮೆಚ್ಚುಗೆ ಕೂಡ ಸಿಗುತ್ತಿವೆ. ರೂಪದರ್ಶಿ ಆಗಿ ಮಿಂಚಿದ್ದ ನಟಿ ರಮೋಲಾ ಅವರು ಕಿರುತೆರೆಯಲ್ಲಿ ಕೂಡ ಉತ್ತಮ ಹೆಸರು ಮಾಡಿ ಇದೀಗ ಬೆಳ್ಳಿ ತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಕನ್ನಡತಿ ಧಾರಾವಾಹಿಯಿಂದ ನಟಿ ರಮೋಲಾ ಅವರು ಹೊರ ಬರುತ್ತಿದ್ದಾರೆ ಎಂಬ ಸುದ್ದಿ ಕೂಡ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಒಟ್ಟಾರೆಯಾಗಿ ಕನ್ನಡ ಸಿನಿಮಾರಂಗಕ್ಕೆ ಮತ್ತೊಬ್ಬ ಕಿರುತೆರೆ ನಟಿ ಪಾದಾರ್ಪಣೆ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here