ಹುಟ್ಟಿದ ಎರಡೇ ಗಂಟೆಯಲ್ಲಿ ವಿಶ್ವ ದಾಖಲೆ ಮಾಡಿದ ಭಾರತೀಯ ಈ ಮಗು

0
352

ಇತ್ತೀಚಿಗೆ ನಮ್ಮ ಭಾರತದಲ್ಲಿ ಹುಟ್ಟಿದ ಒಂದು ಮಗು ಇಡೀ ದೇಶದಲ್ಲಿ ಸಕತ್ ಸದ್ದು ಮಾಡಿದೆ.ಯಾಕೆಂದರೆ ನಿಮಗೆಲ್ಲ ಗೊತ್ತಿರೋ ಹಾಗೆ ನಾವು ಒಂದು ವೋಟರ್ ID ಮಾಡಿಸಲಿಕ್ಕೆ ಒಂದು ಆಧಾರ್ ಕಾರ್ಡ್ ಮಾಡಿಸಲಿಕ್ಕೆ ಒಂದು PAN ಕಾರ್ಡ್ ಮಾಡಿಸಲಿಕ್ಕೆ ಒಂದು passport ಮಾಡಿಸಲಿಕ್ಕೆ ಎಷ್ಟು ಕಷ್ಟ ಪಡಬೇಕು ಎಲ್ಲರಿಗೂ ಗೊತ್ತೇ ಇದೆ.ಎಷ್ಟು ಜನರಿಗೆ ಹಣ ಕೊಡಬೇಕು,ಎಷ್ಟೋ ಸುತ್ತ ಬೇಕು.ಗುಜರಾತ್ ನಲ್ಲಿ ಈ ದಂಪತಿಗಳು ತಮಗೆ ಹುಟ್ಟಿದ್ದ ಒಂದು ಮಗುವಿಗೆ ಮಾಡಿದ ರೀತಿ ಹೇಗಿತ್ತು ಗೊತ್ತಾ.

ಮಗುವಿನ ನೋಂದಣಿ ಮಾಡಿಸಲು ವರ್ಷಗಳೇ ಕಳೆದರೂ ನೋಂದಣಿ ಆಗಿರುತಿರಲಿಲ್ಲ ಈಗ ಕಾಲ ಬದಲಾಗಿದೆ.ಹುಟ್ಟಿದ ಬರೋಬ್ಬರಿ 2 ಗಂಟೆಯ ಸಮಯದಲ್ಲಿ ಗುಜರಾತ್ ನ ದಂಪತಿ ತಮ್ಮ ಹೆಣ್ಣುಮಗುವಿನ ಹೆಸರನ್ನು ಎಲ್ಲಾ ಅಧಿಕೃತ ದಾಖಲೆಗಳಿಗೆ ನೊಂದಣಿ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ.ಹುಟ್ಟಿದ 2 ಗಂಟೆಯಲ್ಲಿ ಎಲ್ಲಾ ಅಧಿಕೃತ ದಾಖಲೆಗಳಿಗೆ ನೊಂದಣಿಯಾಗಿರುವ ಭಾರತದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಈ ಮಗು ಪಾತ್ರವಾಗಿದೆ.

ಅಂಕಿತ್ ನಾಗರಾಣಿ ಹಾಗೂ ತಾಯಿ ಭೂಮಿ ನಾಗರಾಣಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಕ್ಕಾ ಅಭಿಮಾನಿ.ಹೀಗಾಗಿ ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ತಮ್ಮ ಮಗುವಿನ ಹೆಸರನ್ನು ನೊಂದಣಿ ಮಾಡಲು ಕಾಯುತ್ತಿದ್ದರು,ಮತ್ತು ಅವರ ಮಗಳು ಹುಟ್ಟಿದ ಸ್ಥಳದಲ್ಲೇ ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿರುವ ಮೊದಲ ಮಗು ಎಂಬ ಹೆಗ್ಗಳಿಕೆ ಪಡೆಯಬೇಕು ಎಂದು ಅಂಕಿತ್ ಅವರ ಕನಸಾಗಿತ್ತು.

ಆದರಿಂದ ಮಗು ಹುಟ್ಟುವ ಮೊದಲೇ ದಾಖಲೆಗಳಿಗೆ ನೊಂದಣಿಯಾಗಲು ಫಾರಂಗಳನ್ನು ತುಂಬಿಸಿಟ್ಟಿದ್ದರು.ಡಿಸೆಂಬರ್ 12 ರಂದು ಮಗಳು ಜನಿಸಿದ ಎರಡೇ ಗಂಟೆಯಲ್ಲಿ ಯಶಸ್ವಿಯಾಗಿ ಆಧಾರ್,ರೇಶನ್ ಕಾರ್ಡ್ ಹಾಗೂ ಪಾಸ್ರ್ಪೋಟ್ ಸೇರಿದಂತೆ ಎಲ್ಲಾ ದಾಖಲೆಗಳಿಗೆ ಮಗುವಿನ ಹೆಸರು ರಮಿಯಾ ಎಂದು ನೊಂದಣಿ ಮಾಡಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.ಕೆಲವು ದಿನಗಳ ಹಿಂದೆ ಇಂತದೊಂದು ಘಟನೆ ಮಹಾರಾಷ್ಟ್ರದಲ್ಲಿ ಹುಟ್ಟಿದ 1.48 ನಿಮಿಷದಲ್ಲೇ ಹೆಣ್ಣು ಮಗುವಿನ ಹೆಸರನ್ನು ಪೋಷಕರು ಆಧಾರ್‌ಗೆ ನೊಂದಣಿ ಮಾಡಿದ್ದರು.

LEAVE A REPLY

Please enter your comment!
Please enter your name here