ಹೌದು ನಟ ರಾಕ್ಷಸ ಡಾಲಿ ಧನಂಜಯ್ ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕನ್ನಡದ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟರಾಗಿ ಮಿಂಚುತ್ತಿರುವ ಧನಂಜಯ್ ಕೇವಲ ನಾಯಕ ಪಾತ್ರ ಅಲ್ಲದೆ ಪೋಷಕ, ಖಳ ನಾಯಕನ ಪಾತ್ರಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಇದೀಗ ಹೊಯ್ಸಳ ಎಂಬ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಲು ಡಾಲಿ ಸಜ್ಜಾಗುತ್ತಿದ್ದಾರೆ. ಡೈರೆಕ್ಟರ್ ಸ್ಪೆಷಲ್, ಜೆಸ್ಸಿ, ಬಾಕ್ಸರ್, ರಾಟೆ, ಅಲ್ಲಮ ಅಂತಹ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಧನಂಜಯ್ ಟಗರು ಚಿತ್ರದಲ್ಲಿ ಡಾಲಿ ಎಂಬ ಖಡಕ್ ವಿಲನ್ ಪಾತ್ರದಲ್ಲಿ ಹೊಸ ತಿರುವು ಪಡೆದುಕೊಂಡು ಇಂದು ಕನ್ನಡ ಚಿತ್ರರಂಗದ ಆರ್ಗನಿಕ್ ಹೀರೋ ಆಗಿ ಧನಂಜಯ್ ಹೆಸರು ಮಾಡಿದ್ದಾರೆ. ರತ್ನನ್ ಪ್ರಪಂಚ, ಬಡವ ರಾಸ್ಕಲ್, ಸಲಗ ಸಿನಿಮಾಗಳ ಯಶಸ್ಸಿನಲ್ಲಿರುವ ಧನಂಜಯ್ ಇದೀಗ ಹೊಯ್ಸಳ ಎಂಬ ನೂತನ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ತಾನೇ ನಡೆದಿದೆ.

ಈ ಹೊಯ್ಸಳ ಸಿನಿಮಾದಲ್ಲಿ ಡಾಲಿ ಧನಂಜಯ ಅವರಿಗೆ ಜೋಡಿಯಾಗಿ ಲವ್ಮಮಾಕ್ಟೇಲ್, ಪಾಪ್ ಕಾರ್ನ ಮಂಕಿ ಟೈಗರ್, ಬಡವ ರಾಸ್ಕಲ್ ಸಿನಿಮಾ ಖ್ಯಾತಿಯ ನಟಿ ಅಮೃತಾ ಅಯ್ಯಂಗರ್ ಅವರು ನಾಯಕಿ ಆಗಿ ಅಭಿನಯಿಸಲಿದ್ದಾರೆ. ಈ ಹಿಂದೆ ಎರಡು ಚಿತ್ರಗಳಲ್ಲಿ ಜೊತೆ ಆಗಿ ನಟಿಸಿರುವ ಧನಂಜಯ್ ಮತ್ತು ಅಮೃತಾ ಅವರ ಜೋಡಿ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರಿಬ್ಬರ ಜೋಡಿ ಕನ್ನಡ ಸಿನಿ ರಸಿಕರಿಗೆ ಮೋಡಿ ಮಾಡಿದೆ. ಈ ಹೊಯ್ಸಳ ಸಿನಿಮಾವನ್ನು ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣ ಸಂಸ್ಥೆಯಡಿ ಕಾರ್ತಿಕ್ ಹಾಗೂ ಯೋಗಿ ಜಿ ಅವರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಹಿಂದೆ ಗಣೇಶ್ ಅವರ ಗೀತಾ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿಜಯ್ ಅವರು ಹೊಯ್ಸಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಯ್ಸಳ ಸಿನಿಮಾ ಡಾಲಿ ಧನಂಜಯ್ ಅವರ 25ನೇ ಸಿನಿಮಾ ಆಗಿದ್ದು, ಇದರಲ್ಲಿ ಪೋಲಿಸ್ ಪಾತ್ರದಲ್ಲಿ ಧನಂಜಯ ಕಾಣಿಸಿಕೊಳ್ಳುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರು ರಾಗ ಸಂಯೋಜನೆ ಮಾಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದು, ವಿಶ್ವಾಸ್ ಕಶ್ಯಪ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.