ಇತ್ತೀಚೆಗೆ ತಾನೇ ಕಳೆದ ಕೆಲವು ತಿಂಗಳ ಹಿಂದೆ ಸಖತ್ ಸುದ್ದಿ ಆಗಿದ್ದ ನಟಿ ಅಂದರೆ ಅದು ದಕ್ಷಿಣ ಭಾರತದ ಸುಪ್ರಸಿದ್ದ ಬಹು ಬೇಡಿಕೆಯ ನಟಿ ಆ್ಯಪಲ್ ಬ್ಯೂಟಿ ಖ್ಯಾತಿಯ ಸಮಂತಾ. ಯಾಕಂದ್ರೆ ಸ್ಟೈಲೀಶ್ ಸ್ಟಾರ್ ನಟ ಅಲ್ಲೂ ಅರ್ಜುನ್ ಅವರ ಪುಷ್ಪ ಚಿತ್ರದಲ್ಲಿನ ಹ್ಞೂ ಅಂತೀಯಾ ಮಾವ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕುವ ಮೂಲಕ ಸಿನಿ ಪ್ರೇಕ್ಷಕರಿಗೆ ಅದರಲ್ಲೂ ಪಡ್ಡೆ ಹುಡುಗರಿಗೆ ಹುತ್ಚೆಬ್ಬಿಸಿ ಸಖತ್ ಟ್ರೆಂಡ್ ನಲ್ಲಿದ್ದರು. ಇದಕ್ಕೂ ಮುನ್ನ ನಟಿ ಸಮಂತಾ ಅವರು ತಮ್ಮ ವೈಯಕ್ತಿಕ ಜೀವನ ವಿಚಾರವಾಗಿ ಭಾರಿ ಸುದ್ದಿ ಆಗಿದ್ದರು. ನಟ ನಾಗಚೈತನ್ಯ ಅವರಿಂದ ವಿಚ್ಚೇದನ ಪಡೆದ ನಟಿ ಸಮಂತಾ ಅವರು ಮುಂದಿನ ತಮ್ಮ ಸಿನಿ ಪಯಣದ ಕಡೆಗೆ ಗಮನ ಹರಿಸುತ್ತಿದ್ದಾರೆ.

ಸಮಂತಾ ಅವರಿಗೆ ಅವಕಾಶಕ್ಕೆನೂ ಕೊರತೆ ಇಲ್ಲ. ನಟಿ ಸಮಂತಾ ಅವರು ಕೇವಲ ತೆಲುಗು ಮಾತ್ರ ಅಲ್ಲದೆ ತಮಿಳು ಹಾಗೂ ಹಿಂದಿ ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲಿ ಕೂಡ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಹಾಗಾಗಿ ಹೊಸ ಹೊಸ ಪ್ರಾಜೆಕ್ಟ್ ಗಳು ಅವರನ್ನು ಹರಸಿ ಬರುತ್ತಲೇ ಇವೆ. ಇದೀಗ ನಟಿ ಸಮಂತಾ ಅವರ ಹೊಸ ಪ್ರಾಜೆಕ್ಟ್ ವಿಜಯ್ ದೇವರಕೊಂಡ ಅವರ ಜೊತೆಗೆ ಎಂಬುದು ಫೈನಲ್ ಆಗಿದೆ. ಈ ಸುದ್ದಿಯನ್ನು ಅವರೇ ಸ್ವತಃ ಸಮಂತಾ ತಮ್ಮ ಸೋಶಿಯಲ್ ಮೀಡಿಯಾ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಈ ಚಿತ್ರಕ್ಕೆ ಶಿವ ನಿರ್ವಾಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಇವರು ಮಜಿಲಿ ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಈ ಮಜಿಲಿ ಚಿತ್ರದಲ್ಲಿ ಇದೇ ಸಮಂತಾ ಅವರೊಟ್ಟಿಗೆ ನಾಗ ಚೈತನ್ಯ ಜೋಡಿಯಾಗಿ ಅಭಿನಯಿಸಿದ್ದರು.

ಇದೀಗ ಬಾಲಿವುಡ್ ಸ್ಟಾರ್ ಬೇಡಿಕೆಯ ನಟ ಆಗಿರುವ ವಿಜಯ್ ದೇವರ ಕೊಂಡ ಅವರ ಜೊತೆಗೆ ಸಮಂತಾ ಅವರು ನಟಿಸಲಿದ್ದಾರೆ. ಈ ಹಿಂದೆ ನಟಿ ಸಮಂತಾ ಮತ್ತು ವಿಜಯ್ ದೇವರ ಕೊಂಡ ಇಬ್ಬರು ಮಹಾನಟಿ ಚಿತ್ರದಲ್ಲಿ ಸಣ್ಣದಾದ ಪಾತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಇದೀಗ ಪರಿಪೂರ್ಣವಾಗಿ ಸಿನಿಮಾದಲ್ಲಿ ನಾಯಕ ನಾಯಕಿ ಆಗಿ ಈ ಇಬ್ಬರು ಸ್ಟಾರ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಶಿವ ನಿರ್ವಾಣ ಅವರು ಇನ್ನೂ ಕೂಡ ಟೈಟಲ್ ಫಿಕ್ಸ್ ಮಾಡಿಲ್ಲ. ಈ ಚಿತ್ರಕ್ಕೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ನಟಿ ಸಮಂತಾ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿರುವುದು ಅವರ ಅಭಿಮಾನಿಗಳಿಗೆ ತುಂಬಾ ಖುಷಿಯಾದ ವಿಚಾರವಾಗಿದೆ.