ಬರೊಬ್ಬರಿ 800 ಕೋಟಿ ಗಳಿಕೆ ಮಾಡಿದ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್2 ಚಿತ್ರ

0
83

ಕನ್ನಡದ ಗೋಲ್ಡನ್ ಸಿನಿಮಾ ಅಂತಾನೆ ಎನಿಸಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಮುಂದುವರಿದ ಭಾಗವಾಗಿ ಮೂಡಿ ಬಂದಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸದೊಂದು ಸಂಚಲನ ಮೂಡಿಸಿ ದಾಖಲೆ ಮಾಡಿದೆ. ಇಂಡಿಯನ್ ಸಿನಿಮಾದ ಹಲವು ಮೊದಲುಗಳಿಗೆ ಈ ಕೆಜಿಎಫ್ ಚಾಪ್ಟರ್2 ಸಿನಿಮಾ ಸಾಕ್ಷಿಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ಈ ಸಿನಿಮಾ ಬರೋಬ್ಬರಿ ನೂರಾಮೂವತ್ಥೈದು ಕೋಟಿ ಗಳಿಕೆ ಮಾಡಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಇದರ ಕಲೆಕ್ಷನ್ ಬಾಲಿವುಡ್ ಯಾವ ಸ್ಟಾರ್ ನಟರ ಸಿನಿಮಾಗಳು ಮಾಡದಷ್ಟು ದಾಖಲೆ ಪ್ರಮಾಣದ ಕಲೆಕ್ಷನ್ ಮಾಡಿ ಖಾನ್ ಗಳನ್ನೆಲ್ಲ ಬೆಚ್ಚಿ ಬೀಳಿಸಿದೆ.

ಕೆಜಿಎಫ್ ಚಾಪ್ಟರ್2 ಏಪ್ರಿಲ್ 14ರಂದು ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿ, ರಿಲೀಸ್ ಆದ ಎಲ್ಲಾ ಕಡೆ ಅದ್ಬುತ ರೆಸ್ಪಾನ್ಸ್ ಪಡೆದುಕೊಂಡಿದೆ. ಚಿತ್ರದ ಮೇಕಿಂಗ್, ಬಿಜಿಎಮ್ ಮೂಲಕ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದ ಈ ಸಿನಿಮಾ ರಿಲೀಸ್ ಆದ ನಂತರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಜಿಎಫ್ ಚಾಪ್ಟರ್2 ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಯಶ್ ಅವರ ಅಭಿನಯಕ್ಕೆ, ಪ್ರಶಾಂತ್ ನೀಲ್ ಅವರ ಡೈರೆಕ್ಷನ್ಗೆ ಫಿಧಾ ಆಗಿದ್ದಾರೆ. ಭರ್ಜರಿ ಫೈಟ್ಸ್, ಅಧ್ಭುತ ಮೇಕಿಂಗ್, ಮದರ್ ಸೆಂಟಿಮೆಂಟ್, ಚಿಂದಿ ಅನ್ನುವಂತಹ ಮಾಸ್ ಡೈಲಾಗ್, ಮೈ ರೋಮಾಂಚನ ಗೊಳಿಸುವಂತಹ ಬಿಜಿಎಮ್ ಕೆಜಿಎಫ್ ಚಾಪ್ಟರ್2 ಸಿನಿಮಾವನ್ನು ಬೇರೆ ಲೆವೆಲ್ಗೆ ಕರೆದೊಯ್ದಿದೆ. ವರ್ಲ್ಡ್ ವೈಡ್ ಇಷ್ಟೆಲ್ಲಾ ಭಾರಿ ಸದ್ದು ಮಾಡುತ್ತಿರುವ ಈ ಕೆಜಿಎಫ್ ಚಾಪ್ಟರ್2 ಚಿತ್ರದ ಕಲೆಕ್ಷನ್ ಕೇಳಿ ಇಡೀ ಭಾರತೀಯ ಚಿತ್ರರಂಗವೇ ನಿಬ್ಫೆರಗಾಗಿದೆ.

ಹೌದು ಇದುವರೆಗೆ ಈ ಚಿತ್ರ ಬರೋಬ್ಬರಿ ಎಂಟು ನೂರು ಕೋಟಿ ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಇಂದಿಗೂ ಕೂಡ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ ಈ ವಾರಾಂತ್ಯದ ವೇಳೆಗೆ ಸಾವಿರ ಕೋಟಿ ಮುಟ್ಟುತ್ತದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಈ ಚಿತ್ರದ ಆಡಿಯೋ ರೈಟ್ಸ್ ಎಪ್ಪತ್ತೆರಡು ಕೋಟಿಗೆ ಮಾರಾಟವಾಗಿದೆ. ಅದೇ ರೀತಿಯಾಗಿ ಪಂಚಭಾಷೆಯ ಸ್ಯಾಟ್ ಲೈಟ್ ರೈಟ್ಸ್ ಎಂಭತ್ತು ಕೋಟಿಗೆ ಬಿಕರಿಯಾಗಿದೆ. ಒಟ್ಟಾರೆಯಾಗಿ ಕೆಜಿಎಫ್2 ಚಿತ್ರ ಈ ವಾರದೊಳಗೆ ಬರೋಬ್ಬರಿ ಸಾವಿರ ಕೋಟಿಗೂ ಅಧಿಕ ಗಳಿಕೆ ಮಾಡುವುದು ಖಚಿತವಾಗಿದೆ. ಇಡೀ ವಿಶ್ವವೇ ಅಚ್ಚರಿಯಿಂದ ನಿಬ್ಬೆರಗಣ್ಣಿನಿಂದ ತನ್ನತ್ತ ನೋಡುವಂತೆ ಮಾಡಿದ ಕೆಜಿಎಫ್2 ಚಿತ್ರ ತಮಿಳಿನ ವಿಜಯ್ ಅಭಿನಯದ ಬೀಸ್ಟ್ ಸಿನಿಮಾಗೆ ಸಖತ್ ನೀರಿಳಿಸಿದೆ ಎನ್ನಬಹುದು. ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್2 ಸಿನಿ‌ಮಾ ಕನ್ನಡ ಭಾಷೆಯ ಹಿರಿಮೆಯನ್ನು ದೇಶದ ಗಡಿಯಾಚೆ ಪಸರಿಸಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸರಿ ಎಂದು ಹೇಳಬಹುದು.

LEAVE A REPLY

Please enter your comment!
Please enter your name here