ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರದ ಮುಂದುವರಿದ ಭಾಗವಾದ ಕೆಜಿಎಫ್ ಚಾಪ್ಟರ್2 ಸಿನಿಮಾ ಜಗತ್ತಿನೆಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ತೆರೆಕಂಡ ಎಲ್ಲಾ ಭಾಗಗಳಲ್ಲಿ ಕೆಜಿಎಫ್ ಚಾಪ್ಟರ್2 ಸಿನಿಮಾ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡು ಅಪಾರ ಜನಪ್ರಿಯತೆ ಗಳಿಸಿದೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವ ಚಿತ್ರಕ್ಕೂ ಕೂಡ ಸಿಗದ ಭಾರಿ ಬೆಂಬಲ ಪ್ರೀತಿ ಕನ್ನಡದ ಈ ಚಿತ್ರಕ್ಕೆ ಲಭಿಸಿದೆ. ಬಿಡುಗಡೆಯಾದ ವಾರದೊಳಗೆ ಕಲೆಕ್ಷನ್ ವಿಚಾರದಲ್ಲಿ ಬರೋಬ್ಬರಿ ಏಳುನೂರು ಕೋಟಿಯತ್ತ ಸಾಗುವ ಮೂಲಕ ದಾಖಲೆಯ ಮಟ್ಟದ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಅಚ್ಚರಿ ಅಂದರೆ ಕರ್ನಾಟಕಕ್ಕಿಂತ ಹೆಚ್ಚಾಗಿ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಮುಂಬೈ, ಕೇರಳ ಸೇರಿದಂತೆ ವಿದೆಶಗಳಲ್ಲಿಯೂ ಕೂಡ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದುಕೊಂಡಿದೆ.

ಸಿನಿಮಾ ನೋಡಿದ ಪ್ರೇಕ್ಷಕರೆಲ್ಲಾ ಹೇಳುತ್ತಿರುವುದು ಒಂದೇ ಅದು ರಾಕಿಬಾಯ್ ರಾಕಿಬಾಯ್. ಕೆಜಿಎಫ್ ಸರಣಿ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು ಅಂತಾನೇ ಹೇಳಬಹುದು. ಇದೀಗ ಅಚ್ಚರಿ ಪಡುವಂತಹ ಸಂತೋಷ ಸಂಭ್ರಮದ ವಿಚಾರ ಅಂದರೆ ಅದು ಇಂಗ್ಲೀಷಿನ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಫುಟ್ಬಾಲ್ ಪ್ರೀಮಿಯರ್ ಲೀಗ್ ನ ಮ್ಯಾಂಚೆಸ್ಟರ್ ತಂಡ ಕೆಜಿಎಫ್ ಚಿತ್ರದ ಟೈಟಲ್ ಅನ್ನ ತಮ್ಮ ತಂಡದ ಆಟಗಾರರ ಹೆಸರಿಗೆ ಟ್ಯಾಗ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು ಮ್ಯಾಂಚೆಸ್ಟರ್ ತಂಡದ ಕೆವಿನ್, ಗಂಡೊ, ಪೋಡೇನ್, ಈ ಮೂವರ ಆಟಗಾರರ ಹೆಸರನ್ನ ಕೆಜಿಎಫ್ ಟೈಟಲ್ ಗೆ ಹೋಲಿಕೆ ಮಾಡಿ ಮ್ಯಾಂಚೆಸ್ಟರ್ ತಂಡ ಇದು ನಮ್ಮ ಕೆಜಿಎಫ್ ಎಂದು ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ.

ಈ ಪೋಸ್ಟ್ ಅನ್ನ ಕೆಜಿಎಫ್2 ಚಿತ್ರದ ಹಿಂದಿ ಅವತರಣಿಕೆಯನ್ನ ಪ್ರೆಸೆಂಟ್ ಮಾಡಿದ ನಟ, ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಈ ಇನ್ಸ್ಟಾ ಸ್ಟೋರಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ತಕ್ಷಣ ಫರ್ಹಾನ್ ಅಖ್ತರ್ ಅವರು ಮ್ಯಾಂಚೆಸ್ಟರ್ ತಂಡಕ್ಕೆ ಇದು ಅದ್ಭುತ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ಪೋಸ್ಟ್ ಅನ್ನ ಇದೀಗ ಕೆಜಿಎಫ್2 ಸಿನಿಮಾ ನಿರ್ಮಾಣ ಸಂಸ್ದೆ ಆಗಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಕೂಡ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಒಟ್ಟಾರೆಯಾಗಿ ಕನ್ನಡದ ಸಿನಿಮಾವೊಂದು ವಿಶ್ವದ ಮಟ್ಟದಲ್ಲಿ ಗಮನ ಸೆಳೆದು ಕನ್ನಡ ಭಾಷೆಯ ಹಿರಿಮೆಯನ್ನು ಪಸರಿಸಿರುವುದು ಕೆಜಿಎಫ್ ಚಿತ್ರ ತಂಡದ ಬಹುದೊಡ್ಡ ಸಾಧನೆಯೆ ಸರಿ. ಇದು ಕನ್ನಡಿಗರಿಗೆ ಹೆಮ್ಮೆಯೇ ಸರಿ ಎನ್ನಬಹುದು.