750 ಕೋಟಿಯ ಗಡಿ ದಾಟಿದ ಕೆಜಿಎಫ್ ಚಾಪ್ಟರ್2 ಚಿತ್ರ, ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ ಯಶ್ ಅವರು

0
243

ಯಶ್ ಅವರು ತಮ್ಮ ಅಭಿನಯದ ಕೆಜಿಎಫ್ ಚಾಪ್ಟರ್2 ಸಿನಿಮಾಗೆ ಸಿನಿ ಪ್ರೇಕ್ಷಕರು ತೋರಿದ ಅಭೂತಪೂರ್ವ ಪ್ರೀತಿಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಇತ್ತೀಚೆಗೆ ಕಳೆದೊಂದು ವಾರದಿಂದ ವಿಶ್ವದಾದ್ಯಂತ ಭಾರಿ ಸುದ್ದಿಯಲ್ಲಿರುವ ಸಿನಿಮಾ ಅಂದರೆ ಅದು ಕನ್ನಡದ ಕೆಜಿಎಫ್ ಚಾಪ್ಟರ್2 ಚಿತ್ರ. ಈ ಒಂದು ಸಿನಿಮಾ ಯಾವ ಮಟ್ಟಿಗೆ ಕ್ರೇಜ಼್ ಹುಟ್ಟಿಸಿತು ಅಂದರೆ ದೇಶದ ಯಾವ ಮೂಲೆ ಮೂಲೆಗಳಲ್ಲಿ ಕೇಳಿದರು ರಾಕಿಬಾಯ್ ರಾಕಿ ಬಾಯ್ ಎಂಬ ಹೆಸರು. ಕನ್ನಡದ ಕೆಜಿಎಫ್ ಚಾಪ್ಟರ್2 ಸಿನಿಮಾ ಕೇವಲ ಭಾರತ ಮಾತ್ರ ಅಲ್ಲದೆ ಹೊರ ದೇಶಗಳಲ್ಲೂ ಕೂಡ ಭಾರಿ ಕುತೂಹಲ ಮೂಡಿಸಿತ್ತು. ಅದರಂತೆ ಕುತೂಹಲ ನಿರೀಕ್ಷೆಗೂ ಮೀರಿ ಈ ಕೆಜಿಎಫ್2 ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ.

ಇದುವರೆಗೆ ಎಂಟು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಾವಿರ ಕೋಟಿ ಸಮೀಪ ಇರುವ ಕೆಜಿಎಫ್ ಚಾಪ್ಟರ್2 ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸದೊಂದು ದಾಖಲೆ ಮಾಡಿದೆ. ಕೆಜಿಎಫ್ ಚಿತ್ರಕ್ಕೆ ಈ ಪರಿಯಾಗಿ ಪ್ರೀತಿ ತೋರಿದ ಕಾರಣಕ್ಕಾಗಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳಿಗೆ ಕೆಜಿಎಫ್2 ಚಿತ್ರ ನೋಡಿ ಪ್ರೋತ್ಸಾಹ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅದರ ಜೊತೆಗೆ ಒಂದು ಹಳ್ಳಿಯಲ್ಲಿ ರಾಕ್ಷಸ ರಾಜನೊಬ್ಬ ಅಲ್ಲಿನ ಅಸಹಾಯಕ ಜನರನ್ನ ಶೋಷಣೆ ಮಾಡುತ್ತಿರುತ್ತಾನೆ. ಅವರ ಸ್ಥಿತಿ ತುಂಬಾ ಶೋಚನೀಯ ಆಗಿರುತ್ತದೆ. ಆಗ ಒಂದು ಚಿಕ್ಕ ಹುಡುಗ ಅವನನ್ನ ಆ ರಾಕ್ಷಸ ಮನೋಭಾವದ ಒಡಯನನ್ನ ಮಟ್ಟ ಹಾಕಲು ಮುಂದಾಗುತ್ತಾನೆ.

ಆ ಚಿಕ್ಕ ಹುಡುಗನ ಆಲೋಚನೆ ಕಂಡು ಅಲ್ಲಿನ ಜನರು ಅತಿಯಾದ ಆತ್ಮ ವಿಶ್ವಾಸ ಇವನಿಗೆ ಎಂದು ಮಾತನಾಡಿಕೊಳ್ಳುತ್ತಾರೆ. ಅದೇ ರೀತಿ ನಾನು ಕೂಡ ಆ ಚಿಕ್ಕ ಹುಡುಗ. ನನಗೆ ನನ್ನ ಮೇಲೆ ಆತ್ಮ ವಿಶ್ವಾಸ ನಂಬಿಕೆ. ಇಂದು ನೀವು ನನಗೆ ತೋರಿರುವ ಪ್ರೋತ್ಸಾಹಕ್ಕೆ ನಾನು ಚಿರಋಣಿ. ನನಗೆ ಈ ದೊಡ್ಡ ಮಟ್ಟದ ಯಶಸ್ಸು ಸಿಗುವುದಕ್ಕೆ ಕಾರಣರಾದ ನಿಮಗೆ ಅನಂತ ಅನಂತ ಧನ್ಯವಾದಗಳು ಎಂದು. ನೀವು ಕೆಜಿಎಫ್ ಚಾಪ್ಟರ್2 ಸಿನಿಮಾವನ್ನ ನೋಡಿ ತುಂಬಾ ಖುಷಿ ಪಟ್ಟಿದ್ದೀರಿ ಎಂದು ಭಾವಿಸಿದ್ದೀನಿ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ. ಯಶ್ ಅವರ ಈ ವೀಡಿಯೋ ಗೆ ಅಸಮಾಧಾನ ಕೂಡ ಕೇಳಿ ಬಂದಿದೆ. ಏಕೆಂದರೆ ಈ ವೀಡಿಯೋದಲ್ಲಿ ಯಶ್ ಸಂಪೂರ್ಣವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿ ಧನ್ಯವಾದ ತಿಳಿಸಿದ್ದರು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಯಶ್ ಅವರ ಈ ವೀಡಿಯೋಗೆ ಬೆಳೆಯುವುದಕ್ಕೆ ಕನ್ನಡ ಬೇಕು. ಬೆಳೆದ ನಂತರ ಇಂಗ್ಲೀಷ್ ಬೇಕು ಇವರಿಗೆ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here