ವನ್ಯ ಜೀವಿಗಳ ಮೇಲಿನ ಕಾಳಜಿ ಇರುವ ದರ್ಶನ್ ಅವರು ಸದ್ದಿಲ್ಲದೇ ಏನ್ ಕೆಲಸ ಮಾಡಿದ್ದಾರೆ ಗೊತ್ತೇ ನೋಡಿರಿ

0
248

ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಅಪಾರ ಪ್ರೀತಿ ತೋರುವ ನಟರಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಒಬ್ಬರು.. ದರ್ಶನ್ ಗೆ ವನ್ಯಜೀವಿಗಳೆಂದರೆ ಎಲ್ಲಿಲ್ಲದ ಪ್ರೀತಿ, ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಕಗೊಂಡಿದ್ದು, ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಸಂದೇಶ ಸಾರುವ ಸಾರಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವನ್ಯಜೀವಿ ಕಾಳಜಿ ಹೊಂದಿರುವ ನಟ ದರ್ಶನ್‌ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ರಾಯಭಾರಿಯಾಗಲು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಐಹೊಳೆ ಶಿಬಿರಕ್ಕೆ ಹೋಗಿದ್ದ ದರ್ಶನ್ ಗುತ್ತಿಗೆ ನೌಕರರ ಕಷ್ಟ ಆಲಿಸಿದ್ದರು. ತಕ್ಷಣ ಈ ನೌಕರರ ಕ್ಷೇಮಾಭಿವೃದ್ಧಿಗೆ 12 ಲಕ್ಷ ರೂಪಾಯಿ ನೀಡಿದ್ದಾರೆ. ಅರಣ್ಯ ಇಲಾಖೆಯೂ ಈ ಹಣವನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ಈ ನೌಕರರ ಕಷ್ಟಕ್ಕೆ ನೀಡಲು ಮುಂದಾಗಿದೆ.

ಇದಕ್ಕೂ ಮೊದಲು ದಾಸ ಒಂದು ರೂಪಾಯಿ ಹಣ ಪಡೆಯದೆ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅರಣ್ಯ ಇಲಾಖೆ ರಾಯಭಾರಿಯಾಗಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸೋ ಕೆಲಸದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದು ವನ್ಯಜೀವಿ ಪ್ರೇಮಿಗಳಿಗೆ ಹೆಚ್ಚು ಸಂತಸ ತಂದಿತ್ತು.

ಸುದ್ದಿಕೃಪೆ ಬಾಲ್ಕನಿ ನ್ಯೂಸ್ ಕನ್ನಡ

LEAVE A REPLY

Please enter your comment!
Please enter your name here