ಯಶ್ ಮತ್ತು ಶಾರುಖ್ ಖಾನ್ ಫ್ಯಾನ್ಸ್ ಮಧ್ಯೆ ಭಾರಿ ಜಗಳ! ಕೊನೆಗೂ ಬಾಯಿಬಿಟ್ಟ ಶಾರುಖ್ ಖಾನ್ ಯಶ್ ಕೆಜಿಎಫ್ ಬಗ್ಗೆ ಏನ್ ಹೇಳಿದ್ರು ಗೊತ್ತಾ ನೋಡಿ…

0
382

ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್  ನಟಿಸಿರುವ ‘ಕೆಜಿಎಫ್’ ಚಿತ್ರ ಸಧ್ಯ ಇಡೀ ಭಾರತೀಯ ಚಿತ್ರರಂಗದಲ್ಲೇ ಭರ್ಜರಿ ಸದ್ದು ಮಾಡುತ್ತಿದೆ. ಕೆಜಿಎಫ್ ಬರಿ ಕನ್ನಡದವಲ್ಲದೆ ಹಿಂದಿ ತೆಲುಗು ತಮಿಳ್ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆ ಆಗಲಿದೆ. ಆದರೆ ಇಲ್ಲೊಂದು ಜಗಳ ತೀವ್ರ ಜಗಳ ಪೈಪೋಟಿ ನಡೆಯುತ್ತಿದೆ.

ಯಶ್ vs ಶಾರುಖ್ ಖಾನ್:

ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಝೀರೋ’ ಕೂಡಾ ಅದೇ ದಿನ ಅಂದರೆ ಡಿಸೆಂಬರ್ ಇಪ್ಪತ್ತೊಂದಕ್ಕೆನೇ ಬಿಡುಗಡೆ ಆಗಲಿರುವದರಿಂದ ಟ್ವಿಟ್ಟರ್ ಅಲ್ಲಿ ಯಶ್ ಮತ್ತು ಶಾರುಖ್  ಅಭಿಮಾನಿಗಳು ತೀವ್ರ ವಾದ ವಿವಾದ ಜಗಳ ಆಡುತ್ತಿದ್ದಾರೆ.

ಶಾರುಖ್ ಖಾನ್ ಮುಂದೆ ಯಾವ ಕನ್ನಡದ ನಟನು ಆಗಲ್ಲ ಅಂತ ಶಾರುಖ್ ಅಭಿಮಾನಿಗಳು ಒಂದೆಡೆಯಾದರೆ ಕೆಜಿಎಫ್ ಅಲ್ಲಿ ಒಳ್ಳೆ ಕಥೆ ಇದೆ ಹೀಗಾಗಿ ಯಶ್ ಗೆದ್ದೇಗೆಲ್ಲುತ್ತಾರೆ ಅಂತ ಯಶ್ ಅಭಿಮಾನಿಗಳು ಇನ್ನೊಂದೆಡೆ.

ಕೊನೆಗೂ ಶಾರುಖ್ ಕೆಜಿಎಫ್ ಬಗ್ಗೆ ಹೇಳಿದ್ದೇನು:

ಡಿಸೆಂಬರ್ 21ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಜೊತೆಗೆ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಅಭಿನಯದ ‘ಜೀರೋ’ ಚಿತ್ರ ಕೂಡ ತೆರೆಗೆ ಬರಲಿದೆ. ಈ ಎರಡು ಚಿತ್ರಗಳ ಪೈಕಿ ‘ಕೆಜಿಎಫ್’ ಒಂದು ಕೈ ಮೇಲು ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಶಾರುಕ್ ಖಾನ್ ಕೂಡ ಕೆಜಿಎಫ್ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ್ದಾರೆನ್ನಲಾಗಿದೆ.

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿ ಫಿದಾ ಆಗಿರುವ ಶಾರುಕ್ ಖಾನ್, ರಾಕಿಂಗ್ ಸ್ಟಾರ್ ಯಶ್ ಮುಂಬೈಗೆ ಬಂದ ವೇಳೆ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರಂತೆ. ಜೊತೆಗೆ ಕೆಜಿಎಫ್ ಚಿತ್ರಕ್ಕೆ ‘ಆಲ್ ದ ಬೆಸ್ಟ್’ ಹೇಳಿದ್ದಾರೆ.

LEAVE A REPLY

Please enter your comment!
Please enter your name here