ಮುಖ್ಯಮಂತ್ರಿ ಅವರ ಮೂರು ವರ್ಷದ ಮೊಮ್ಮಗನ ಆಸ್ತಿ ಅವರ ಆಸ್ತಿಗಿಂತ ಆರು ಪಟ್ಟು ಜಾಸ್ತಿ!ಯಾರು ಗೊತ್ತಾ ಈ ಮುಖ್ಯಮಂತ್ರಿ..

0
1215

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ಅವರ ಮೊಮ್ಮಗನ ಆಸ್ತಿ ಅವರಗಿಂತಲೂ ಆರು ಪಟ್ಟು ಅಧಿಕವಾಗಿದೆ.ಇದು ಚಂದ್ರಬಾಬು ನಾಯ್ಡುರವರ ಪುತ್ರನಾದ ನಾರಾ ಲೋಕೇಶ್ ಬುಧವಾರ ಬಹಿರಂಗಪಡಿಸಿದ ವಿವರಗಳಿಂದ ತಿಳಿದು ಬಂದಿದೆ.

ಚಂದ್ರಬಾಬು ನಾಯ್ಡು ಕುಟುಂಬದ ಒಟ್ಟು ಸಂಪತ್ತು ಒಂದು ವರ್ಷದ ಅವಧಿಯಲ್ಲಿ ರೂ 12.55 ಕೋಟಿ ಗಳಷ್ಟು ಏರಿಕೆಯಾಗಿದೆ.ಕಳೆದ ವರ್ಷ ಚಂದ್ರಬಾಬು ನಾಯ್ಡು ಕುಟುಂಬದ ಒಟ್ಟು ಸಂಪತ್ತಿನ ಮೌಲ್ಯ ರೂ 69.28 ಕೋಟಿಯಾಗಿದ್ದರೆ ಈ ಬಾರಿ ಅದು ರೂ 81.83 ಕೋಟಿಗೆ ತಲುಪಿದೆ.

ಸಾರ್ವಜನಿಕ ಜೀವನದಲ್ಲಿ ಪಾರದರ್ಶಕ ಕಾಯ್ದುಕೊಳ್ಳುವ ಸಲುವಾಗಿ ಎಂಟು ವರ್ಷಗಳಿಂದ ಪ್ರತೀ ವರ್ಷ ನಾಯ್ಡು ತಮ್ಮ ಕುಟುಂಬದ ಆಸ್ತಿಯ ವಿವರಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗ ಪಡಿಸುತ್ತಾ ಬಂದಿದ್ದಾರೆ

ಈಗ ಅಚ್ಚರಿಯೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರನಾದ ನಾರಾ ಲೋಕೇಶ್ ಸಂಪತ್ತು ಏರಿಕೆ ಯಾಗಿದ್ದರು ಅವರ ಕುಟುಂಬದಲ್ಲಿ ಅವರ ಮೊಮ್ಮಗನ,ಅಂದರೆ ನಾರಾ ಲೋಕೇಶ್ ಅವರ ಮೂರು ವರ್ಷದ ಪುತ್ರ ದೇವಾಂಶ್ ನ ಆಸ್ತಿನ ಮೌಲ್ಯ ಅತೀ ಎಚ್ಚು ಏರಿಕೆಯಾಗಿದೆ.

ಚಂದ್ರಬಾಬು ನಾಯ್ಡು ರವರ ಒಡೆತನದ ಸಂಪತ್ತು ಒಂದು ವರ್ಷ ಅವಧಿಯಲ್ಲಿ ರೂ 2.53  ಕೋಟಿಯಿಂದ ರೂ3 ಕೋಟಿಯಾಗಿದೆ.ಅವರ ಪತ್ನಿಯ ಸಂಪತ್ತು ರೂ 25 ಕೋಟಿಯಿಂದ ರೂ31 ಕೋಟಿಯಷ್ಟು ಏರಿಕೆಯಾಗಿದೆ.ರಾಜ್ಯದ ಮಾಹಿತಿ ಸಚಿವರಾದ ನಾರಾ ಲೋಕೇಶ್ ಅವರ ಆಸ್ತಿ ಮೌಲ್ಯ ಕಳೆದ ವರ್ಷ ರೂ 15.21 ಕೋಟಿಯಾಗಿದ್ದರೆ ಈ ಬಾರಿ ಅದು ರೂ 21.40 ಕ್ಕೇ ಏರಿಕೆಯಾಗಿದೆ.

ಲೋಕೇಶ್ ಪುತ್ರ ದೇವಾಂಶ್ ಸಂಪತ್ತಿನ ಮೌಲ್ಯ ಕಳೆದ ವರ್ಷ ರೂ 11.54 ಕೋಟಿಯಾಗಿದ್ದರೆ ಈ ಬಾರಿ ಅದು ರೂ 18.71 ಗೆ ಏರಿಕೆಯಾಗಿದೆ.ಆದರೆ ಲೋಕೇಶ್ ರವರ ಪತ್ನಿ ಬ್ರಾಹ್ಮಿಣಿ ಅವರ ಒಡೆತನದ ಸಂಪತ್ತಿನ ಮೌಲ್ಯ ಮಾತ್ರ ಇಳಿಕೆಯಾಗಿದೆ.ಕಳೆದ ವರ್ಷ ಆಕೆಯ ಸಂಪತ್ತಿನ ಮೌಲ್ಯ ರೂ 15.01 ಕೋಟಿಯಾಗಿದ್ದರೆ ಈ ಬಾರಿ ಅದು ರೂ 7.72 ಕೋಟಿಗೆ ಇಳಿಕೆಯಾಗಿದೆ.

LEAVE A REPLY

Please enter your comment!
Please enter your name here