ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಇಳಿದ ಕಿರಿಕ್ ಪಾರ್ಟಿ ಹುಡುಗಿ ‘ರಶ್ಮಿಕಾ ಮಂದಣ್ಣ’! ಇದಕ್ಕೆ ಏನ್ ಕಾರಣ ಗೊತ್ತೇ ನೋಡಿ…

0
377

ಕಿರಿಕ್ ಪಾರ್ಟಿಯ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅವರು ಸಧ್ಯ ಒಳ್ಳೆಯ ಕೆಲಸದಿಂದ ಸುದ್ದಿಯಲ್ಲಿದ್ದಾರೆ, ಹೌದು ಅವರು ಈಗ ಬೆಳ್ಳಂದೂರು ಕೆರೆಯಲ್ಲಿ ಇಳಿದು ಸುದ್ದಿಯಲ್ಲಿದ್ದಾರೆ.

ರಶ್ಮಿಕಾ ಜಲಮಾಲಿನ್ಯದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಬೆಂಗಳೂರಿನ ವಿಷಪೂರಿತ, ವಿನಾಶದಂಚಿನ ಕೆರೆ ಎಂದರೆ ಬೆಳ್ಳಂದೂರು ಕೆರೆ ಇಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ರಶ್ಮಿಕಾ ಒಂದೆರಡು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಬೆಳ್ಳಂದೂರು ಕೆರೆಯ ದುಃಸ್ಥಿಯ ಬಗ್ಗೆ ದುಃಖ ಪಟ್ಟಿದ್ದಾರೆ.

ಈ ಕೆರೆ ಇಷ್ಟರ ಮಟ್ಟಿಗೆ ಮಾಲಿನ್ಯವಾಗಿದೆ ಎಂದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ, ಫೋಟೋಶೂಟ್ ಗೆಂದು ಅಲ್ಲಿಗೆ ಹೋದ ಮೇಲೆ ನನಗೆ ತಿಳಿಯಿತು ಆ ಕೆರೆಯ ದುಃಸ್ಥಿತಿ ನೋಡಿ ನನ್ನ ಹೃದಯ ಒಡೆದೇ ಹೋಯಿತು, ನೆನಪಿಸಿಕೊಳ್ಳಿ ಕೆಲ ವರ್ಷಗಳ ಹಿಂದೆ ಈ ಕೆರೆ ಎಷ್ಟು ಚೆನ್ನಾಗಿತ್ತು. ಆದರೆ ಈಗ ಎಲ್ಲಿ ನೋಡಿದರೂ ನೀರು ಮಲಿನಗೊಂಡಿದೆ. ನನಗೆ ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ ಆದರೆ ನಿಮ್ಮೊಂದಿಗೆ ಇದನ್ನು ಹಂಚಿಕೊಳ್ಳೋಣ ಎಂದೆನಿಸಿತು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ರಶ್ಮಿಕಾ ಕೆರೆಯಲ್ಲಿ ಮಲಗಿದಂತೆ ಇದ್ದು ಈ ಚಿತ್ರಗಳು ತುಂಬಾ ಅರ್ಥಪೂರ್ಣವಾಗಿವೆ,ಅಂತೂ ಕಿರಿಕ್ ಮಾಡಿಕೊಳ್ಳುತ್ತಿದ್ದ ಹುಡುಗಿ ಒಳ್ಳೆಯ ಕೆಲಸದಿಂದ ಸುದ್ದಿಯಾಗಿದ್ದಾರೆ ಸುದ್ದಿಕೃಪೆ ಬಾಲ್ಕನಿ ನ್ಯೂಸ್ ಕನ್ನಡ.

LEAVE A REPLY

Please enter your comment!
Please enter your name here