ತಾನು ಹೋಗುವ ವಿಮಾನ ತಪ್ಪಿಸಿಕೊಂಡಿದ್ದಕ್ಕೆ ವಿಮಾನವನ್ನೇ ಬೆನ್ನು ಹತ್ತಿದ ಮಹಿಳೆ ಏನು ಮಾಡಿದಳು ಗೊತ್ತೇ! ವಿಡಿಯೋ ನೋಡಿ

0
3170

ತಪ್ಪಿಸಿಕೊಂಡ ವಿಮಾನವನ್ನೇ ಆಕೆ ಬೆನ್ನು ಹತ್ತಿದ್ದಾಳೆ. ಮತ್ತೊಂದು ವಿಮಾನಕ್ಕೆ ಕಾಯುವ ಬದಲು ರನ್ ವೇ ಯಲ್ಲಿ ಓಡಿದ್ದಾಳೆ. ಈ ಪ್ರಕರಣ ನಡೆದಿರುವುದು ಬಾಲಿಯಲ್ಲಿ. ಸ್ಥಳೀಯ ಮಾಧ್ಯಮ ವರದಿ ಮಾಡಿರುವಂತೆ ವಿಮಾನ ಅಟ್ಟಿಸಿಕೊಂಡು ಹೋದ ಮಹಿಳೆಯ ಹೆಸರು ಹಾನಾ. ಬಾಲಿಯಿಂದ ಆಕೆ ಜಕಾರ್ತಾಕ್ಕೆ ತೆರಳಬೇಕಾಗಿತ್ತು.

ಮೂರು ಸಾರಿ ಎಚ್ಚರಿಕೆ ಸಂದೇಶ ನೀಡಿದರೂ ಮಹಿಳೆ ವಿಮಾನ ನಿಲ್ದಾಣದ ಸಿಬ್ಬಂದಿಯ ಕರೆಗೆ ಸ್ಪಂದಿಸಿರಲಿಲ್ಲ. ವಿಮಾನ ಟೇಕಾಫ್ ಆಗಿ 10 ನಿಮಿಷದ ನಂತರ ವಿಮಾನದ ಸೆಕ್ಯೂರಿಟಿಯವರನ್ನು ದೂಡಿಕೊಂಡು ನುಗ್ಗಿದ ಮಹಿಳೆ ವಿಮಾನ ಚೇಸ್ ಮಾಡಲು ನೋಡಿದ್ದಾರೆ ಎಂದು ನಿಲ್ದಾಣದ ಸಿಬ್ಬಂದಿ ಘಟನೆಯನ್ನು ವಿವರಿಸುತ್ತಾರೆ.

ಮಹಿಳೆ ವಿಮಾನವನ್ನು ಅಟ್ಟಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here