ತಮ್ಮ ಚಿತ್ರ ಹಿಟ್ ಆಗುತ್ತಿದ್ದಂತೆ ದುಬಾರಿ ಬೆಲೆಯ ಕಾರು ಖರೀದಿಸಿದ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ

0
73

ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ ಆರ್.ಆರ್.ಆರ್ ಸಿನಿಮಾ ರಿಲೀಸ್ ಆಗಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ರಾಜಮೌಳಿ ಸಿನಿಮಾಗಳು ಯಾವ ರೀತಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತವೋ ಅದೇ ರೀತಿ ಮತ್ತೆ ರಾಜಮೌಳಿ ಅವರ ಬಾಕ್ಸ್ ಆಫೀಸ್ ಮೇನಿಯಾ ಈ ಆರ್.ಆರ್.ಆರ್ ಚಿತ್ರದಲ್ಲಿಯೂ ಕೂಡ ಮುಂದುವರಿದಿದೆ. ಹೌದು ಪಂಚಭಾಷೆಗಳಲ್ಲಿ ರಿಲೀಸ್ ಆದ ಆರ್.ಆರ್.ಆರ್ ಸಿನಿಮಾ ಸೂಪರ್ ಹಿಟ್ ಆಗಿದೆ. ಹೀಗಾಗಿ ಸಿನಿಮಾ ತಂಡ ಕೂಡ ಫುಲ್ ಖುಷ್ ಆಗಿದ್ದಾರೆ. ಈ ಖುಷಿ ಮತ್ತಷ್ಟು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಿರ್ದೇಶಕ ರಾಜಮೌಳಿ ಅವರು ಸ್ಪೆಷಲ್ ಫೀಚರ್ ಹೊಂದಿರುವ ಐಷಾರಾಮಿ ಕಾರುವೊಂದನ್ನ ಖರೀದಿ ಮಾಡಿದ್ದಾರೆ.

ಹೌದು ರಾಜಮೌಳಿ ಅವರಿಗೆ ಸಿನಿಮಾದ ಮೇಲಿನ ಕ್ರೇಜ಼್ ಎಷ್ಟಿದ್ಯೋ ಅದೇ ರೀತಿ ಕಾರ್ ಗಳ ಬಗ್ಗೆ ಕೂಡ ಸಖತ್ ಕ್ರೇಜ಼್ ಇದೆ ಎಂಬುದನ್ನು ಅವರ ಬಳಿ ಇರುವ ಕಾರುಗಳನ್ನು ಕಂಡು ತಿಳಿಯಬಹುದು. ಹೌದು ಇದೀಗ ರಾಜಮೌಳಿ ಅವರು ವೋಲ್ವೋ ಎಕ್ಸ್ ಸಿ ಕಾರ್ ವೊಂದನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 37.99 ಲಕ್ಷ ಮೌಲ್ಯಯದ್ದಾಗಿದೆಯಂತೆ. ಈ ವೋಲ್ವೋ ಎಕ್ಸ್ಸಿ40 ಕಾರಿನ ವಿಶೇಷತೆಗಳನ್ನು ತಿಳಿದುಕೊಳ್ಳುವುದಾದರೆ. ಭಾರತದಲ್ಲಿ ಟಿ ಫೋರ್ ಡಿಸೈನ್ ಹೊಂದಿರುವ ಏಕೈಕ ಕಾರು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಈ ವೋಲ್ವೋ ಎಕ್ಸ್ ಸಿ40 ಕಾರು ನೋಡಲು ತುಂಬಾ ಆಕರ್ಷಣೆ ಹೊಂದಿದ್ದು ಕಾರು ಪ್ರಿಯರಿಗೆ ಮೊಟ್ಟ ಮೊದಲ ಬಾರಿಗೆ ನೋಡಿದ ತಕ್ಷಣ ಮೋಡಿ ಮಾಡುತ್ತದೆ.

ಇನ್ನು ಈ ಕಾರಿನ ಗುಣ ಲಕ್ಷಣಗಳನ್ನು ತಿಳಿಯುವುದಾದರೆ ಈ ವೋಲ್ವೋ ಎಕ್ಸ್ ಸಿ 40 ಕಾರು ವೋಲ್ವೋ ಸಂಸ್ಥೆಯ ಸಿಗ್ನೇಚರ್ ಟಿ ಡಿಸೈನಿನ ಡಿ.ಆರ್.ಎಲ್ಎಸ ಜೊತೆಗೆ ಗ್ಲಾಸ್ ಬ್ಲಾಕ್ ನಲ್ಲಿ ಸಿಂಗಲ್ ಫ್ರೇಮ್ ವೀಲ್ ಕ್ಲಾಡಿಂಗ್ ಎಕ್ಸ್ ಸಿ40. ಖಡಕ್ ಲುಕ್ ಅನ್ನ ಹೊಂದಿದೆ. ಇದು ಬಲವಾದ ರೋಡ್ ಗ್ರಿಪ್ ಅನ್ನು ಒಳಗೊಂಡಿದೆ. ಒಂಭತ್ತು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹರ್ಮನ್ ಕಾರ್ಡನ್ ಸ್ಟೀರಿಯೋ ಸಿಸ್ಟಮ್, ಪೊವಾರ್ಡ್ ಟೆಟ್ಟೆಟ್, ವ್ಯಾಲೆಂಟ್ ಲೈಟಿಂಗ್, 12.3 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಂತಹ ಸುರಕ್ಷತ ಗುಣ ಲಕ್ಷಣಗಳನ್ನು ಹೊಂದಿದೆ. ವೋಲ್ವೋ ಎಕ್ಸ್ ಸಿ 40 ನಲ್ಲಿ ಪೆಟ್ರೋಲ್ ಎಂಜಿನ್ ಹೊಂದಿದೆ. 2.0 ಲೀಟರಿನ 187 ಬಿಎಚ್ಪಿ ಪವರ್ ಅಂಡ್ 300 ನ್ಯೂಟನ್ ಮೀಟರಿನ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತಿದೆ.

ಜೊತೆಗೆ ಇದರಲ್ಲಿ 8ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನ ಈ ವೋಲ್ವೋ ಎಕ್ಸ್ಸಿ 40 ಎಸಯೂವಿ ಕಾರಿನ ಎಂಜಿನ್ ನಲ್ಲಿ ಬಳಸಿಕೊಳ್ಳಲಾಗಿದೆ. ಇನ್ನು ಈ ಕಾರಿನಲ್ಲಿ ಒಂಭತ್ತು ಇಂಜಿನಿನ ಟಚ್ ಸ್ಕ್ರಿನ್ ಇನ್ಫೋಟೈನ್ ಮೆಂಟ್ ಸ್ಟೀರಿಯೋ ಸಿಸ್ಟಮ್ ಕೂಡ ಇದ್ದು ವೋಲ್ವೋ ಕಾರು ಸಂಪೂರ್ಣವಾಗಿ ಅಡ್ವಾನ್ಸ್ ಫೀಚರ್ ಗಳನ್ನ ಒಳಗೊಂಡಿದೆ. ಇಂತಹ ಕಾರು ಖರೀದಿ ಮಾಡಿರುವ ನಿರ್ದೇಶಕ ರಾಜಮೌಳಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಕಾರ್ ಕೀ ಪಡೆಯುತ್ತಿರುವ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ವೋಲ್ವೋ ಸಂಸ್ಥೆ ಕೂಡ ತಮ್ಮ ಕಂಪನಿಯ ನೂತನ ಅವತರಣಿಕೆಯ ವೋಲ್ವೋ ಎಕ್ಸ್ಸಿ 40 ಕಾರು ಖರೀದಿ ಮಾಡಿರುವ ರಾಜಮೌಳಿ ಅವರು ಕೀ ಪಡೆಯುತ್ತಿರುವ ಫೋಟೋವನ್ನು ತಮ್ಮ ಕಂಪನಿಯ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

LEAVE A REPLY

Please enter your comment!
Please enter your name here