ಕೆ.ಜಿ.ಎಫ್ ಚಿತ್ರಕ್ಕೆ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ! ಡಿ ಬಾಸ್ ದರ್ಶನ್ ಅವರ ದಾಖಲೆ ಮುರಿದ ಯಶ್!

0
515

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ. ಐದು ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವ ಕಾರಣ ಇದು ಕನ್ನಡ ಸಿನಿಮಾ ಮಾತ್ರವಲ್ಲದೆ,ಭಾರತದ ಚಿತ್ರವಾಗಿದೆ.

ಇದೆ ಡಿಸೆಂಬರ್ 21 ರಂದು ದೇಶಾದ್ಯಂತ ತೆರೆ ಕಾಣಲು ಸಿದ್ದತೆಯನ್ನ ಮಾಡಿಕೊಂಡಿದೆ.ಸದ್ಯ ಏಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಲಿದೆ.ಕನ್ನಡ ಸಿನಿಮಾವೊ೦ದು ಪ್ಯಾನ್ ಇಂಡೀಯಾ ರಿಲೀಸ್ ಆಗುತ್ತಿದೆ ಹಾಗೆಯೆ ಸಿನಿಮಾ ರಂಗದ ಅನೆಕರು ಸಿನಿಮಾದ ಎರಡು ಟ್ರೈಲರ್ ಗಳನ್ನ ಹೊಗಳಿದ್ದಾರೆ.

ಬಜೆಟ್ ವಿಷ್ಯದಲ್ಲಿ ಕೆ.ಜಿ.ಎಫ್ ಸಿನಿಮಾ ಅತಿ ದೊಡ್ಡ ಚಿತ್ರ ಎಂದು ಹೇಳಲಾಗಿದೆ. ಆದ್ರೆ, ನಿರ್ಮಾಪಕರು ಕೆ.ಜಿ.ಎಫ್ ಚಿತ್ರದ ಬಜೆಟ್ ಎಷ್ಟು ಎಂದು ನಿಖರವಾಗಿ ಬಹಿರಂಗಪಡಿಸಿಲ್ಲ. ಆದ್ರೆ,ಮೂಲಗಳ ಪ್ರಕಾರ ಕೆ.ಜಿ.ಎಫ್ ಚಿತ್ರದ ಬಜೆಟ್ ಎಷ್ಟು ಎಂದು ಚರ್ಚೆಯಾಗುತ್ತಿದೆ. ಕೆ.ಜಿ.ಎಫ್ ಚಿತ್ರದಲ್ಲಿ ಬಹುಮುಖ್ಯ ನಿರ್ವಹಿಸಿರುವ ಬಿ.ಸುರೇಶ್ ಅವರು,’ಯಶ್ ಬಿಟ್ಟರೆ ನಾನೇ ಹೆಚ್ಚು ಸಂಭಾವನೆ ಪಡೆದಿರುವ ನಟ’ ಎಂದು ಸಂತಸ ಹಂಚಿಕೊಂಡಿದ್ದಾರೆ. ಹಾಗಿದ್ರೆ, ಬಿ.ಸುರೇಶ್ ಅವರ ಸಂಭಾವನೆ ಎಷ್ಟು? ಯಶ್ ಅವರ ಸಂಭಾವನೆ ಎಷ್ಟು?

ಕೆಜಿಎಫ್ ಚಿತ್ರದಲ್ಲಿ ಬಹುತೇಕರು ಹೊಸ ಕಲಾವಿದರೇ. ಯಶ್ ಬಿಟ್ಟರೆ, ನಟಿ ಶ್ರೀನಿಧಿ ಶೆಟ್ಟಿಗೆ ಇದು ಮೊದಲ ಸಿನಿಮಾ. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಸಿಷ್ಠ ಸಿಂಹ, ಅಯ್ಯಪ್ಪ ಅವರು ಕೂಡ ಸಿನೆಮಾದಲ್ಲಿದ್ದಾರೆ. ಅನಂತ್ ನಾಗ್, ಅಚ್ಯುತ್ ಕುಮಾರ್ ಕೂಡ ಇದ್ದಾರೆ. ಹಾಗ್ನೊಡಿದ್ರೆ, ರಾಕಿಂಗ್ ಸ್ಟಾರ್ ಯಶ್ ಅವರು ಮೂರೂ ವರ್ಷದಿಂದ ಈ ಸಿನಿಮಾ ಮಾಡ್ತಿದ್ದಾರೆ. ವರ್ಷಕ್ಕೊಂದು ಸಿನಿಮಾ ಅಂದ್ರು, ಮೂರೂ ವರ್ಷಕ್ಕೆ ಮೂರೂ ಅಥವಾ ನಾಲ್ಕು ಸಿನಿಮಾ ಮಾಡ್ತಿದ್ರು ಯಶ್. ಆದ್ರೆ, ಕೆ.ಜಿ.ಎಫ್ ಚಿತ್ರದ ಮೇಲಿನ ನಂಬಿಕೆಯಿಂದ ಅದೊಂದಕ್ಕೆ ಸೀಮಿತವಾಗಿದ್ದರೂ.

ಹಾಗಿದ್ರೆ, ಮೂರೂ ವರ್ಷದ ಕೆ.ಜಿ.ಎಫ್ ಚಿತ್ರಕ್ಕಾಗಿ ಯಶ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲ ಕಾಡ್ತಿದೆ. ಆದ್ರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಎಲ್ಲಿಯೂ ಸಿಕ್ಕಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಕೆಜಿಎಫ್ ಗೆ ಯಶ್ ಪಡೆದಿರೋ ಸಂಭಾವನೆ ಇಲ್ಲಿಯವರೆಗೂ ಕನ್ನಡದ ಯಾವ ನಟನು ಪಡೆದಿಲ್ಲ ಎನ್ನುವುದು ಈ ಸುದ್ದಿ ನಿಜ ಆದ್ರೆ ಇಲ್ಲಿಯವರೆಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ದರ್ಶನ್ ಅವರ ದಾಖಲೆಯನ್ನು ಮುರಿದಂತಾಗುತ್ತದೆ ಯಶ್. ಅಂದಹಾಗೆ, ಕೆಜಿಎಫ್ ಚಿತ್ರ ಕನ್ನಡದ ಅತಿ ದೊಡ್ಡ ಸಿನಿಮಾ ಎನ್ನಲಾಗಿದೆ. ಆದ್ರೆ, ನಿಖರವಾದ ಬಂಡವಾಳವನ್ನ ಚಿತ್ರತಂಡ ಹೇಳಿಲ್ಲ. ಆದ್ರೆ, ೭೦ ರಿಂದ ೮೦ ಕೋಟಿಯವರೆಗೂ ಬಜೆಟ್ ಆಗಿರಬಹುದು ಎಂಬ ಮಾತಿದೆ.

ದೊಡ್ಡ ಬಜೆಟ್, ದೊಡ್ಡ ಬಿಡುಗಡೆ ನೋಡಿದ್ರೆ, ಕೆಜಿಎಫ್ ಚಿತ್ರ ನೂರು ಕೋಟಿ ಗಳಿಸೋದು ಪಕ್ಕಾ ಎನ್ನಲಾಗಿದೆ. ಸುಮಾರು ೧೮೦೦-೨೦೦೦ ಸ್ಕ್ರೀನ್ ನಲ್ಲಿ ಕೆಜಿಎಫ್ ಚಿತ್ರ ಬರ್ತಿದೆಯಂತೆ. ಡಿಸೆಂಬರ್ ೨೧ ಕ್ಕೆ ಕನ್ನಡ, ತೆಲುಗು, ತಮಿಳು,ಹಿಂದಿ,ಹಾಗು ಮಲಯಾಳಂ ಭಾಷೆಯಲ್ಲಿ ಕೆಜಿಎಫ್ ಚಿತ್ರ ತೆರೆಕಾಣ್ತಿದೆ.

LEAVE A REPLY

Please enter your comment!
Please enter your name here