ಕೆಜಿಎಫ್ ಸಿನಿಮಾ ನೋಡಿದ ಜಾರ್ಖಂಡ್ ರಾಜ್ಯದ ‘ಐಎಎಸ್’ ಅಧಿಕಾರಿ ಏನ್ ಹೇಳಿದ್ರು ಗೊತ್ತಾ ನೋಡಿ!

0
676

ಐದು ಭಾಷೆಗಳಲ್ಲಿ ತೆರೆಕಂಡು ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ ಕೆಜಿಎಫ್ ಸಿನಿಮಾ. ಬರೀ ಐದೇ ದಿನಗಳಲ್ಲಿ 100 ಕೋಟಿ ದಾಟಿದ ಕನ್ನಡ ಚಿತ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಅದಲ್ಲದೇ ಹೊರದೇಶಗಳಲ್ಲಿಯೂ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಷ್ಟೇ ಅಲ್ಲಾ ಬೇರೆ ಭಾಷೆಯ ಕಲಾವಿದರು ತಂತ್ರಜ್ಞರು ರಾಜಕಾರಣಿಗಳು ಸೇರಿದಂತೆ ಈ ಚಿತ್ರವನ್ನು ವೀಕ್ಷಿಸಿ ಕನ್ನಡ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ.

ಜಾರ್ಖಂಡ್ ​​ನ ರಾಮ್ ಘಡ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ರಾಜೇಶ್ವರಿ, ಹಿಂದಿ ಅವತರಣಿಕೆ ಕೆಜಿಎಫ್ ಚಿತ್ರವನ್ನು ನೋಡಿ ಮೆಚ್ಚಿಕೊಂಡು ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಟ್ವೀಟ್ ಹೀಗಿತ್ತು:

ನಾನು ರಾಂಚಿಯಲ್ಲಿ ಕೆಜಿಎಫ್ ಸಿನಿಮಾ ನೋಡಿದೆ. ಬಹಳ ಖುಷಿಯಾಯಿತು.ಈ ಸಿನಿಮಾವನ್ನು ಕನ್ನಡದಲ್ಲಿ ನೋಡಲು ಇಷ್ಟ. ಹಿಂದಿ ವರ್ಷನ್ ಸಿನಿಮಾ ನೋಡಿ ತುಂಬಾ ಎಂಜಾಯ್ ಮಾಡಿದೆ. ಕೊನೆಗೂ ಕರ್ನಾಟಕದ ಸಿನಿಮಾವೊಂದು ದೇಶಾದ್ಯಂತ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ಯಶ್ ಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಆಶಿಸುತ್ತೇನೆ. ಇಡೀ ತಂಡಕ್ಕೆ ಈ ಕೀರ್ತಿ ಸಲ್ಲುತ್ತದೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

ಸದ್ಯ ಜಾರ್ಖಂಡ್ ​​ನಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ವರಿ ಕರ್ನಾಟಕದ ಮೂಲದವರು ಮತ್ತು ಕನ್ನಡತಿ ಎಂಬುದು ನಮಗೆ ಹೆಮ್ಮೆಯ ವಿಚಾರವಾದರೆ, ಕನ್ನಡ ಚಿತ್ರವೊಂದು ಜಾರ್ಖಂಡ್ ನಲ್ಲಿ ಹವಾ ಸೃಷ್ಟಿಸಿದೆ ಎಂಬುದು ಸಹ ಸಂತಸದ ವಿಚಾರ. ಇನ್ನು ಅವರು ಮಾಡಿರುವ ಟ್ವೀಟ್ ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯಿಸಿದ್ದು, ಧನ್ಯವಾದಗಳನ್ನು ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here