ಕಿರಿಕ್ ಪಾರ್ಟಿ ನಟಿ ‘ಸಂಯುಕ್ತ ಹೆಗ್ಡೆ’ ಸಲುವಾಗಿ ತನ್ನ ಹುಡುಗಿಯನ್ನೇ ಕೈ ಬಿಟ್ಟ ಈ ಹುಡುಗ! ಏನ್ ಕಥೆ ಗೊತ್ತೇ ಇವರದ್ದು ನೋಡಿ

0
674

ಸಂಯುಕ್ತಾ ಹೆಗ್ಡೆ ಕಿರಿಕ್ ಪಾರ್ಟಿ ಸಿನಿಮಾದಿಂದ ಕಿರಿಕ್ ಹುಡುಗಿ ಎಂದೇ ಫೇಮಸ್ ಆದ ಬೆಡಗಿ. ಇದಾದ ಬಳಿಕ ತೆಲುಗು ಸೇರಿದಂತೆ ಮತ್ತೆ ಕೆಲವು ಸಿನಿಮಾಗಳಲ್ಲಿ ನಟಿಸಿದ ಸಂಯುಕ್ತಾ, ಹಿಂದಿ ಮನೋರಂಜನಾ ಕ್ಷೇತ್ರದ ಪ್ರಸಿದ್ಧ ರಿಯಾಲಿಟಿ ಶೋ ‘ರೋಡೀಸ್’ಗೆ ಎಂಟ್ರಿ ನೀಡಿದ್ದರು.

ಇಲ್ಲೂ ಕಿರಿಕ್ ಮಾಡಿಯೇ ಸದ್ದು ಮಾಡಿದ್ದರು. ಸದ್ಯ ಈ ಕಿರಿಕ್ ಹುಡುಗಿ ಮತ್ತೊಂದು ಫೇಮಸ್ ರಿಯಾಲಿಟಿ ಶೋ ಸ್ಪ್ಲಿಟ್ಸ್ ವಿಲಾದಲ್ಲಿ ಸದ್ದು ಮಾಡುತ್ತಿದ್ದಾರೆ.ಈ ರಿಯಾಲಿಟಿ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸಂಯುಕ್ತಾ ಮನೆಗೆ ಹೋಗುತ್ತಿದ್ದಂತೆಯೇ ಅಲ್ಲಿದ್ದ ಜೋಡಿಗಳ ನಡುವೆ ಮನಸ್ತಾಪ ಹುಟ್ಟು ಹಾಕಿದ್ದರು. ಹೋದಲ್ಲೆಲ್ಲಾ ಕಿರಿಕ್ ಮಾಡುವ ಸಂಯುಕ್ತಾ ಅಲ್ಲಿದ್ದ ಸ್ಪರ್ಧಿಗಳಿಗೂ ತಲೆನೋವಾಗಿದ್ದರು. ಹೀಗಿದ್ದರೂ ಮನೆಯಲ್ಲಿದ್ದ ಶಗುನ್ ಪಾಂಡೆ ಮಾತ್ರ ಈ ಬೆಡಗಿಗೆ ಕ್ಲೀನ್ ಬೌಲ್ಡ್ ಆಗಿದ್ದ.

ಎಂಟ್ರಿ ಪಡೆದ ಮೊದಲ ದಿನದಿಂದಲೇ ಸಂಯುಕ್ತಾಳೊಂದಿಗೆ ಆತ್ಮೀಯವಾಗಿದ್ದ ಶಗುನ್ ಅಕೆಯ ಪ್ರೀತಿಯಲ್ಲಿ ಬಿದ್ದಿದ್ದ. ಆದರರೀಗ ಈ ಲವ್ ಫೀವರ್ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ, ಆಟದಿಂದ ಎಲಿಮಿನೇಟ್ ಆಗಿದ್ದ ಸಂಯುಕ್ತಾಳನ್ನು ತಡೆಯಲು ಶಗುನ್ ತನ್ನ ಜೋಡಿಯಾಗಿದ್ದ ಆರುಷಿ ಹಾಂಡಾಳನ್ನೇ ಬಿಟ್ಟಿದ್ದಾನೆ. ಅಲ್ಲದೇ ಸೇಫ್ ಆಗಿದ್ದ ತನ್ನನ್ನು ತಾನು ಡೇಂಜರ್ ಝೋನ್ ಗೆ ಹಾಕಿಕೊಂಡಿದ್ದಾನೆ. ಇದೆಲ್ಲಾ ಮಾಡಿದ್ದು ಕಿರಿಕ್ ಬೆಡಗಿಗಾಗಿ.

LEAVE A REPLY

Please enter your comment!
Please enter your name here