ಕವಿತಾ ಶಶಿ ಲವ್ ಸ್ಟೋರಿ ಬಗ್ಗೆ ಕೊನೆಗೂ ಬಾಯ್ಬಿಟ್ಟ ಜಯಶ್ರೀ!

0
448

ಬಿಗ್ಗ್ ಬಾಸ್ ರಿಯಾಲಿಟಿ ಶೋ ಕನ್ನಡದ ಅತೀ ಹೆಚ್ಚು ಅಭಿಮಾನಿಗಳು ಕೂತು ನೋಡುವಂತಹ ಕಾರ್ಯಕ್ರಮ.ಇನ್ನು ಪ್ರತಿ ಸೀಸನ್ ನಂತೆ ಈ ಬಾರಿಯ ಸೀಸನ್ ಗೂ ವಿಭಿನ್ನ ರೀತಿಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ರು. ಒಟ್ಟು ೧೮ ಸ್ಪರ್ಧಿಗಳು ಬಿಗ್ಗ್ ಬಾಸ್ ಮನೆಗೆ ಬಂದಿದ್ರು, ಅಲ್ಲದೆ ೩ ಜನರನ್ನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ರು.

ಈ ಸ್ಪರ್ಧಿಗಳಲ್ಲಿ ಈಗಾಗಲೇ ೧೦ ಜನ ಸ್ಪರ್ಧಿಗಳು ಆಚೆಗೆ ಬಂದಿದ್ದಾರೆ. ಬಿಗ್ಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿ ವಾರ ಒಬ್ಬ ಸ್ಪರ್ಧಿಯನ್ನ ಎಲಿಮಿನೇಟ್ ಮಾಡಲಾಗುತ್ತದೆ. ಅದೇ ರೀತಿ ೯ ನೇ ವಾರ ಬಿಗ್ಗ್ ಬಾಸ್ ಮನೆಯಿಂದ ಖ್ಯಾತ ಕಿರುತೆರೆ ನಟಿ ಜಯಶ್ರೀ ಅವರು ಹೊರ ಬಂದಿದ್ರು. ಕಿರುತೆರೆ ಲೋಕದಲ್ಲಿ ಅದ್ಭುತವಾಗಿ ನಟಿಸಿದ ನಟಿ ಜಯಶ್ರೀ ಬಿಗ್ಗ್ ಬಾಸ್ ಮನೆಯಲ್ಲೂ ೬೩ ದಿನಗಳ ಕಾಲ ಆಟವನ್ನ ಆಡಿ ಮನೆಯಿಂದ ಆಚೆ ಬಂದಿದ್ದಾರೆ.

ಮನೆಯಿಂದ ಆಚೆ ಬಂದ ನಂತರ ಜಯಶ್ರೀ ಬಿಗ್ಗ್ ಬಾಸ್ ಮನೆಯ ಶಶಿ ಮತ್ತು ಕವಿತಾ ಗೌಡ ಬಗ್ಗೆ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.

ಕವಿತಾ ಗೌಡ ಬಣ್ಣದ ಲೊಕಕ್ಕೆ ಯಾರ ಸಪೋರ್ಟ್ ಇಲ್ಲದೆ ಬೆಳೆದು ಬಂದ ನಟಿ ಕನ್ನಡ ತಮಿಳು ಹೀಗೆ ಬೇರೆ ಭಾಷೆಯಲ್ಲೂ ಅಭಿನಯಿಸ್ತಾಯಿದ್ದಾರೆ. ಅಷ್ಟೇ ಅಲ್ಲ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಕವಿತಾ ಗೌಡ ಫೈನಲ್ ಗೆ ಬರಲಿ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ ಇನ್ನು ಶಶಿ ಬಗ್ಗೆ ಜಯಶ್ರೀ ಮಾತನಾಡಿದ್ದಾರೆ, ಶಶಿ ಒಬ್ಬ ಜೆಂಟಲ್ ಮ್ಯಾನ್ ಬಿಗ್ಗ್ ಬಾಸ್ ಮನೆಯ ಉತ್ತಮ ಆಟಗಾರ, ಈತ ಬಿಗ್ಗ್ ಬಾಸ್ ೬ ಗೆದ್ರೆ ತುಂಬಾ ಸಂತೋಷ” ಎಂದು ಹೇಳಿದ್ದಾರೆ ಜಯಶ್ರೀ.

ಬಿಗ್ಗ್ ಬಾಸ್ ಮನೆಯಲ್ಲಿ ಶಶಿ ಮತ್ತು ಕವಿತಾ ಗೌಡ ಕ್ಲೋಸ್ ಆಗಿ ಇರೋದನ್ನ ನೋಡಿದ ಜನ ಇವರಿಬ್ಬರ ನಡುವೆ ಏನೋ ಇದೆ ಎಂಬ ಮಾತುಗಳನ್ನು ಆಡುತ್ತಾರೆ ಅಷ್ಟೇ ಆದರೆ ಇವರ ನಡುವೆ ಏನು ಇಲ್ಲ ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟ ಅಂತ ಜಯಶ್ರೀ ರವರು ಸ್ಪಷ್ಟ ಪಡಿಸಿದ್ದಾರೆ. ಹಾಗಾದರೆ ನಿಮ್ಮ ಪ್ರಕಾರ ಶಶಿ ಮತ್ತು ಕವಿತಾ ಬಗ್ಗೆ ನೀವೇನ್ ಹೇಳ್ತೀರಾ

LEAVE A REPLY

Please enter your comment!
Please enter your name here