ಕರ್ನಾಟಕದ ಮಗುವಿಗೆ ವಿಂಗ್ ಕಮಾಂಡರ್ ‘ಅಭಿನಂದನ್’ ಹೆಸರಿಟ್ಟ ದಂಪತಿ

0
300

ಮೊನ್ನೆ ಪಾಕಿಸ್ತಾನದಿಂದ ಬಿಡುಗಡೆ ಹೊಂದಿ ಬಂದಿರುವ ನಮ್ಮ ಹೆಮ್ಮೆಯ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಎಲ್ಲೆಡೆ ಭರ್ಜರಿ ಪ್ರಶಂಸೆ ಸಿಗುತ್ತಿದೆ,ಈ ಮಧ್ಯೆ ಅಭಿನಂದನ್ ಅವರಿಗೆ ಗೌರವ ಸೂಚಿಸಲು ಇಲ್ಲೊಂದು ಕರ್ನಾಟಕದ ದಂಪತಿ ತಮ್ಮ ಮಗಳಿಗೆ ‘ಅಭಿನಂದನಾ’ ಎಂದು ನಾಮಕರಣ ಮಾಡಿದ್ದಾರೆ.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ದಂಪತಿಗಳಾದ ಅರವಿಂದ್ ಮತ್ತು ಪೂರ್ಣಿಮಾ ಅವರು ತಮ್ಮ ಹೆಣ್ಣು ಮಗುವಿಗೆ ಅಭಿನಂದನ್ ಅವರ ಹೆಸರಿಟ್ಟು ಗೌರವ ತೋರಿಸಿದ್ದಾರೆ.ಕಳೆದ ವಾರ ಅಭಿನಂದನ್ ಅವರು ಪಾಕಿಸ್ತಾನದ ಸೇನೆಗೆ ಸಿಕ್ಕಿದ್ದರು ಬಳಿಕ ಅವರನ್ನು ಸೇನೆ ತನ್ನ ಬಳಿ ಎರಡು ದಿನಗಳ ಕಾಲ ಇಟ್ಟಕೊಂಡಿತ್ತು.

LEAVE A REPLY

Please enter your comment!
Please enter your name here