ಆತ ಹಾವನ್ನು ತೋರಿಸಿ ಭಯ ಪಡಿಸಿ ಯುವತಿಯ ಅತ್ಯಾಚಾರವೆಸಗಲು ಹೋದ! ಮುಂದೇನಾಯ್ತು ಗೊತ್ತೇ ನೋಡಿ

0
348

ಚೀನಾದ ಹೊಟೇಲ್‌ವೊಂದಲ್ಲಿ ನಡೆದ ಘಟನೆಯೊಂದು ಪ್ರತಿಯೊಬ್ಬರನ್ನು ಬೆಚ್ಚಿ ಬೀಳಿಸಿದೆ. ಚೀನಾದ Jiangxi ನಗರದ ಹೊಟೇಲ್ ಕೋಣೆಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಹಾಗೂ ಮೂರು ಹಾವುಗಳು ಪತ್ತೆಯಾಗಿವೆ. ಇದನ್ನು ನೋಡಿದ ಹೊಟೇಲ್ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ ಸಿಬ್ಬಂದಿಗೆ ಒಂದು ಕೋಣೆಯಲ್ಲಿ ಎರಡು ಹಾವುಗಳು ಹಾಗೂ ಮತ್ತೊಂದು ಕೋಣೆಯಲ್ಲಿ ಮತ್ತೊಂದು ಹಾವು ಹಾಗೂ ವ್ಯಕ್ತಿಯೊಬ್ಬನ ಮೃತದೇಹ ಸಿಕ್ಕಿದೆ. ಅದರೆ ಅಲ್ಲೇನಾಗಿದೆ ಎಂದು ತಿಳಿದಾಗ ಮಾತ್ರ ಅಕ್ಷರಶಃ ಪ್ರತಿಯೊಬ್ಬರೂ ಬೆಚ್ಚಿ ಬಿದ್ದಿದ್ದಾರೆ.

ಹೌದು ಮೃತಪಟ್ಟ ವ್ಯಕ್ತಿ ಆ ಕೋಣೆಯಲ್ಲಿದ್ದ ಮಹಿಳೆಗೆ ತನ್ನ ಬಳಿ ಇದ್ದ ಹಾವುಗಳನ್ನು ತೋರಿಸಿ ರೇಪ್ ಮಾಡಲು ಮುಂದಾಗಿದ್ದಾನೆ. ಅಷ್ಟರಲ್ಲೇ ಆತ ತಂದಿದ್ದ ಆ ಹಾವು ಆತನಿಗೇ ಕಚ್ಚಿದೆ. ರಕ್ಷಣಾ ಸಿಬ್ಬಂದಿ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲೊಂದಾಗಿರುವ ಬ್ಯಾಂಡಿಡ್ ಕ್ರೆಟ್ ಹಾವುಗಳನ್ನು ಮೃತ ವ್ಯಕ್ತಿ ತಂದಿದ್ದ. ಆದರೆ ನಾವು ಕೋಣೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದು, ಉಳಿಸಿಕೊಳ್ಳುವುದು ಅಸಾಧ್ಯವಾಗಿತ್ತ ಎಂದಿದ್ದಾರೆ.

ಆದರೆ ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ದೂರು ನೀಡುವವರೆಗೆ ಅಲ್ಲೇನು ನಡೆದಿತ್ತು ಎಂಬುವುದು ನಿಗೂಢವಾಗೇ ಇತ್ತು. ದೂರು ದಾಖಲಿಸಿದ ಮಹಿಳೆ ವ್ಯಕ್ತಿಯೊಬ್ಬ ಸಂಜೆ ಸರಿ ಸುಮಾರು 5 ಗಂಟೆಗೆ ನನ್ನನ್ನು ಹೊಟೇಲ್ ಕೋಣೆಗೆ ಕರೆದೊಯ್ದಿದ್ದ. ಕೋಣೆಗೆ ತಲುಪಿದ ಮರುಕ್ಷಣವೇ ಮೂರು ಹಾವುಗಳನ್ನು ತೋರಿಸಿ ನನ್ನನ್ನು ಅತ್ಯಾಚಾರಗೈದ ಆದರೆ ರಾತ್ರಿ ಹೊತ್ತು ಹಾವು ಆತನನ್ನು ಕಚ್ಚಿದೆ. ಆದರೆ ಆತ ಅದನ್ನು ಕಡೆಗಣಿಸಿ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ಬಿಟ್ಟು ಬೆಡ್ ಮೇಲೆ ಹೋಗಿ ಮಲಗಿದ. ಇದಾದ ಬಳಿಕ ನಡುರಾತ್ರಿ ನಾನು ಹೊಟೇಲ್ನಿಂದ ಮನೆಗೆ ತೆರಳಿದೆ ಎಂದಿದ್ದಾರೆ.ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆದಿದ್ದು ಆತ ಹಾವಿನ ವಿಷದಿಂದಲೇ ಮೃತಪಟ್ಟಿರುವುದು ಸಾಬೀತಾಗಿದೆ. ಆದರೆ ಮಹಿಳೆ ಅತ್ಯಾಚಾರ ಆರೋಪ ಮಾಡಿರುವುದರಿಂದ ತನಿಖೆ ಮುಂದುವರೆದಿದೆ.ಯೂಟ್ಯೂಬ್‌ನಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು Daniel Kalemasi ಹೆಸರಿನ ವ್ಯಕ್ತಿ ವಿಡಿಯೋ ಶೇರ್ ಮಾಡಿದ್ದಾರೆ.

ಸುದ್ದಿಕೃಪೆ ಸುವರ್ಣ ನ್ಯೂಸ್ ಕನ್ನಡ

LEAVE A REPLY

Please enter your comment!
Please enter your name here