ನರೇಂದ್ರ ಮೋದಿ ಅವರ ತುಲಾಭಾರಕ್ಕೆ 112 ಕೆಜಿ ಹೂವು ಕಳಿಸಿದ ಈ ಮುಸ್ಲಿಂ ಕುಟುಂಬ

0
35

ಮೊನ್ನೆ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ,ಎರಡನೇ ಬಾರಿಗೆ ಪಟ್ಟ ಅಲಂಕರಿಸಿಕೊಂಡ ನಂತರ ಮೊಟ್ಟ ಮೊದಲ ಬಾರಿಗೆ ಅವರು ಕೇರಳ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ಪೂಜೆ ಸಲ್ಲಿಸಿದರು.ಕೇರಳದ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮೋದಿ ಅವರಿಗೆ ದೇವಸ್ಥಾನದಲ್ಲಿ ತುಲಾಭಾರ ಮಾಡಲಾಯಿತು ಆಗ ಬರೋಬ್ಬರಿ ನೂರಾ ಹನ್ನೆರಡು ಕೆಜಿ ಕಮಲದ ಹೂವುಗಳಿಂದ ತುಲಾಭಾರ ಮಾಡಲಾಯಿತು.

ನಂತರ ತುಲಾಭಾರ ಮಾಡಿದ ಕಮಲಗಳನ್ನು ಪೂಜೆಗೆ ಬಳಸಲಾಯಿತು ಹಾಗು ಇಷ್ಟು ಹೂವುಗಳನ್ನು ನೀಡಿದ್ದು ಅಲ್ಲೇ ನೆಲೆಸಿರುವ ಒಂದು ಮುಸ್ಲಿಂ ಕುಟುಂಬ,ಈ ಕುಟುಂಬ ಇಷ್ಟೇ ಅಲ್ಲದೆ ಪ್ರತಿದಿನ ಈ ದೇವಸ್ಥಾನಕ್ಕೆ ಸಾವಿರಾರು ಹೂವುಗಳನ್ನು ನೀಡುತ್ತದೆ.ಕೇರಳದ ಭೇಟಿಯ ನಂತರ ಮೋದಿ ಅವರು ದ್ವಿರಾಷ್ಟ್ರ ಪ್ರವಾಸಕ್ಕೆ ಮಾಲ್ಡಿವ್ಸ್‌ಗೆ ತೆರಳಿದರು. ಮಾಲ್ಡಿವ್ಸ್‌ನಲ್ಲಿ ಎರಡು ದಿನ ಕಳೆಯಲಿರುವ ಮೋದಿ ಅವರು ಆ ನಂತರ ಶ್ರೀಲಂಕಾಕ್ಕೆ ತೆರಳಿ ಅಲ್ಲಿಂದ ಭಾರತಕ್ಕೆ ವಾಪಸ್ಸಾಗಲಿದ್ದಾರೆ

LEAVE A REPLY

Please enter your comment!
Please enter your name here