ಬೆಳಿಗ್ಗೆ ‘ಮೊಸರು’ ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತಾ? ನೋಡಿ ಇದನ್ನ…

0
5959

ನಿತ್ಯವೂ ಮೊಸರಿನ ನಿಯಮಿತ ಸೇವನೆಯಿಂದ ಸದಾ ಆರೋಗ್ಯವಂತರಾಗಿ ಬಾಳಬಹುದು. ಮೊಸರನ್ನು ವಿವಿಧ ಭಕ್ಷ್ಯಗಳೊಂದಿಗೆ ಸೇರಿಸಿ ತಿನ್ನಬಹುದು. ಹಣ್ಣುಗಳ ಸಲಾಡ್‌ಗಳೊಂದಿಗೆ ಸೇರಿಸಿ ಸವಿಯಬಹುದು. ಅನ್ನದೊಂದಿಗೆ ಬೆರೆಸಿ ಸೇವಿಸಬಹುದು. ಅನ್ನಗಳಲ್ಲಿ ತಯಾರಿಸಿದಂತಹ ಬಾತ್ಗಳಿಗೆ ಮೊಸರನ್ನು ಸೇರಿಸಿ ಸೇವಿಸಬಹುದು.

ಹಾಲಿನಿಂದ ತಯಾರಿಸಲಾಗುವ ಮೊಸರು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನಿಷಿಯಮ್, ವಿಟಮಿನ್ ಬಿ2 ಮತ್ತು ವಿಟಮಿನ್ ಬಿ12 ಸೇರಿದಂತೆ ವಿವಿಧ ಪೌಷ್ಟಿಕ ದ್ರವ್ಯಗಳಿಂದ ಕೂಡಿರುವುದನ್ನು ನಾವು ಕಾಣಬಹುದು.

ಮುಂಜಾನೆಯ ಉಪಹಾರದ ಸಮಯದಲ್ಲಿ ಮೊಸರನ್ನು ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವ ವಿವರವಾದ ವಿವರಣೆಯನ್ನು ನೋಡಿ.

ಜೀರ್ಣಕ್ರಿಯೆಗೆ ಸಹಾಯ:

ಪ್ರತಿದಿನ ಮುಂಜಾನೆ ನಿಯಮಿತವಾಗಿ ಮೊಸರು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯು ಸುಗಮಗೊಳ್ಳುತ್ತದೆ. ಅಲ್ಲದೆ ಕರುಳು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಜೀವಾಣು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಮಸ್ಯೆಗಳನ್ನು ಮೊಸರು ನಿಯಂತ್ರಿಸುತ್ತದೆ ಎನ್ನಲಾಗುವುದು. ಜೀರ್ಣ ಕ್ರಿಯೆಯಲ್ಲಿ ಉಂಟಾಗುವ ಉರಿಯೂತವು ಶಮನಗೊಳ್ಳುವುದು.

ರೋಗ ನಿರೋಧಕ ಶಕ್ತಿ ಮೊಸರು ರೋಗವನ್ನು ಉಂಟುಮಾಡುವ ಸೂಕ್ಷ್ಮ ಜೀವಾಣುಗಳ ವಿರುದ್ಧ ಹೋರಾಡಲು ಮತ್ತು ಕರುಳಿನ ಕವಚವನ್ನು ರಕ್ಷಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇದರಲ್ಲಿರುವ ಮೆಗ್ನಿಸಿಯಮ್, ಸತು, ಸೆಲೆನಿಯಮ್ ನಂತಹ ಖನಿಜಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:

ಅಧಿಕ ರಕ್ತದೊತ್ತಡ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುವುದು. ಮೊಸರಿನಲ್ಲಿ ಇರುವ ಪೊಟ್ಯಾಸಿಯಮ್ ಗುಣವು ದೇಹದಲ್ಲಿರುವ ಹೆಚ್ಚಿನ ಸೋಡಿಯಂ ಪ್ರಮಾಣವನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ.

ಹೀಗಾಗಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಹೃದಯವನ್ನು ಉತ್ತೇಜಿಸುತ್ತದೆ.

ಮೂಳೆಯನ್ನು ಬಲಪಡಿಸುತ್ತದೆ:

ಒಂದು ಕಪ್ ಮೊಸರು 275 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ದಿನನಿತ್ಯವೂ ಬೆಳಿಗ್ಗೆ ಮೊಸರನ್ನು ಸೇವಿಸುವುದರಿಂದ ಮೂಳೆಗಳು ಬಲವಾಗಿರುತ್ತವೆ. ಇದು ಮೂಳೆಗಳ ಬಲವನ್ನು ಮಾತ್ರವಲ್ಲದೇ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ:

ಮೊಸರು ಸೂಕ್ಷ್ಮಾಣು ಜೀವಿಗಳನ್ನು ತೆಗೆದುಹಾಕುತ್ತದೆ. ಇದು ಕರುಳಿನ ಸೋಂಕಿಗೆ ಕಾರಣವಾಗಬಹುದು. ಹೊಟ್ಟೆ ಉಬ್ಬರ ಅಥವಾ ಅತಿಸಾರದಿಂದ ಬಳಲುತಿದ್ದರೆ ಮುಂಜಾನೆ ಮೊಸರು ಸೇವಿಸುವುದರಿಂದ ನಿಯಂತ್ರಿಸಬಹುದು.

ಒಸಡುಗಳನ್ನು ರಕ್ಷಿಸುತ್ತದೆ:

ಮೊಸರು ಸೇವನೆಯಿಂದ ದಂತಕವಚಗಳನ್ನು ಗಟ್ಟಿ ಗೊಳಿಸುತ್ತದೆ. ಅನಗತ್ಯ ಆಹಾರ ಪದಾರ್ಥಗಳಿಂದ ಒಸಡು ಹಾಗೂ ಹಲ್ಲುಗಳ ಕುಳಿಗೆ ಕಾರಣವಾಗುವ ಲ್ಯಾಕ್ಟಿಕ್ ಆಮ್ಲವನ್ನು ಮೊಸರು ನಿಯಂತ್ರಿಸುತ್ತದೆ.

ಮೂಲವ್ಯಾಧಿಯ ಸಮಸ್ಯೆಗೆ ಮೂಲವ್ಯಾಧಿಯ ಕಾರಣ ಆಸನಭಾಗದಲ್ಲಿ ಗಂಟುಗಳಾಗಿರುವ (hemorrhoids) ವ್ಯಕ್ತಿಗಳಿಗೆ ಮೊಸರನ್ನು ನೀರಾಗಿಸಿ ಇದರಲ್ಲಿ ಕೆಲವು ನೆನೆಸಿಟ್ಟ ಪಿಸ್ತಾಗಳನ್ನು ಅರೆದು ಕುಡಿಯುವ ಮೂಲಕ ನೋವಿನಿಂದ ಮುಕ್ತಿ ದೊರಕುತ್ತದೆ.

LEAVE A REPLY

Please enter your comment!
Please enter your name here