ಬೆಳಿಗ್ಗೆ ಎದ್ದ ಕೂಡಲೇ ‘ತಾಮ್ರದ ಪಾತ್ರೆಯ’ ನೀರು ಕುಡಿದರೆ ಏನಾಗುತ್ತದೆ ಗೊತ್ತೇ? ಓದಿ ಇದನ್ನೊಮ್ಮೆ……

0
7157

ತಾಮ್ರ ಅಂದರೆ ಎಲ್ಲಾರಿಗೂ ಗೊತ್ತೇ ಇದೆ ತಾನೇ? ತಾಮ್ರಕ್ಕೆ ಇಂಗ್ಲಿಷ್ ಅಲ್ಲಿ ಕಾಪರ್ ಅನ್ನುತ್ತಾರೆ ಹಾಗು ತಾಮ್ರದಿಂದ ತುಂಬಾ ಅಗತ್ಯವಾದ ಗುಣಗಳಿವೆ. ತಾಮ್ರದ ಬಟ್ಟಲಲ್ಲಿ ನೀರು ಕುಡಿಯುವದರಿಂದ ಏನಾಗುತ್ತದೆ ಎಂದು ನೋಡೋಣ.

ರಾತ್ರಿ ತಾಮ್ರದ ಪಾತ್ರೆ ಅಥವಾ ಚಂಬಿನಲ್ಲಿ ನೀರನ್ನು ಶೇಖರಣೆ ಮಾಡಿ,ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಉಪಯೋಗಗಳು ಹೀಗಿವೆ.

ಕೊಲೆಸ್ಟ್ರಾಲ್ ಇಳಿಕೆ:

ಹೀಗೆ ಮಾಡಿ ನೀರು ಕುಡಿಯುವುದರಿಂದ ಕೊಲೆಸ್ಟರಾಲ್,ಟ್ರೈಗ್ಲಿಜರೈಡ್ ಪ್ರಮಾಣ ಕಡಿಮೆ ಯಾಗಿ,ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಥೈರಾಯಿಡ್ ಗ್ರಂಥಿಯ ಕಾರ್ಯ ಉತ್ತಮಗೊಳ್ಳುತ್ತದೆ.

ರೋಗ ನಿರೋಧಕ ಶಕ್ತಿ:

ಅನೇಕ ರೋಗಗಳು ದೂರವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಮೆದುಳು ಚುರುಕಾಗುತ್ತದೆ. ನೆನಪಿಗೆ ಶಕ್ತಿ ಬೆಳವಣಿಗೆಗೂ ಸಹಕಾರಿ.ಆಡುಗೆ ಮಾಡಲು ತಾಮ್ರ ಪಾತ್ರೆಯನ್ನು ಪ್ರತಿನಿತ್ಯ ಉಪಯೋಗಿಸುವುದರಿಂದ ಮೂಳೆಗಳು ಗಟ್ಟಿಯಾಗಿ, ಆರೋಗ್ಯವಾಗಿರುತ್ತವೆ.

ಕಿಡ್ನಿ ಸಮಸ್ಯೆಯಿಂದ ಮುಕ್ತಿ:

ಮೂತ್ರಪಿಂಡದ ಸಮಸ್ಯೆಗಳನ್ನು ದೂರ ಮಾಡುತ್ತದೆ,ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಚರ್ಮ ಸುಕ್ಕುಗಟ್ಟುವುದು ವಯಸ್ಸಾದಂತೆ ಕಾಣುವುದು ಮುಂತಾದ ಸಮಸ್ಯೆಗಳು ಬರದಂತೆ ತಡೆಯುತ್ತದೆ‌.

ಆರೋಗ್ಯ ಹೃದಯ:

ಮಲಬದ್ಧತೆ ಹೃದಯಾಘಾತ ಇತ್ಯಾದಿ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ,ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಸೇವಿಸುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಡಬಹುದು.ರಕ್ತ ಪ್ರಸರಣ ಉತ್ತಮಗೊಂಡು ಮೆದುಳು ಚೂರುಕಾಗಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಹಾಗು ಬೆಳೆಯುವ ಮಕ್ಕಳಿಗೆ ತುಂಬಾ ಉಪಯುಕ್ತ.

ನಗರಗಳಲ್ಲಿ ಹೆಚ್ಚಾಗಿ ತಾಮ್ರದ ವಸ್ತುಗಳನ್ನು ಬಳಸದೆ ಇದ್ದರು ಹಳ್ಳಿಗಳಲ್ಲಿ ತಾಮರದ ಬಳಕೆ ಇನ್ನು ಜೋರಾಗೆ ಇದೆ ಹಾಗು ಇದು ಒಳ್ಳೆಯದು ಕೂಡಾ.

LEAVE A REPLY

Please enter your comment!
Please enter your name here