‘ಬೀಟ್ ರೂಟ್’ ಅಲ್ಲಿ ಇರುವ ಮಹತ್ವವಾದ ಔಷಧೀಯ ಗುಣಗಳನ್ನು ತಿಳಿಯಿರಿ..

0
2885
Beetroot Juice

ನಾವು ಇತ್ತೀಚಿಗಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವ ಆಹಾರಕ್ಕಿಂತ ಬಾಯಿಗೆ ರುಚಿಯಾದ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.ಅವು ನಮ್ಮ ಶರೀರಕ್ಕೆ ಹಾದು ಬರುವುದಿಲ್ಲ ಎಂಬ ಸತ್ಯಗೊತ್ತಿದ್ದರೂ ಅದನ್ನೇ ಸೇವಿಸುತ್ತಿದ್ದೇವೆ.

ಬೇಸಿಗೆ ಕಾಲದಲ್ಲಿ ತರಕಾರಿ,ಹಣ್ಣುಗಳನ್ನು ಆರೋಗ್ಯದ ದೃಷ್ಠಿಯಿಂದ ಸೇವಿಸುವುದು ಮುಖ್ಯ.ಆದರೆ ನಮಗೆ ಕೆಲವು ತರಕಾರಿಗಳಲ್ಲಿರುವ ಆರೋಗ್ಯವರ್ಧಕ ಗುಣಗಳ ಬಗ್ಗೆ ಗೊತ್ತಿದ್ದರೂ ನಾವು ಅದನ್ನು ಸೇವಿಸುವುದೇ ಇಲ್ಲ.

ತಮ್ಮ ಮನೆಯ ಹಿತ್ತಲಲ್ಲಿ ವಿವಿಧ ತರಕಾರಿಗಳನ್ನು ಬೆಳೆದು ಅದನ್ನೇ ಬಳಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು.ಈಗ ಹಾಗಿಲ್ಲ ಲಾಭ ನಷ್ಟದ ಲೆಕ್ಕಾಚಾರದಲ್ಲಿ ನಾವು ಬೆಳೆದು ತಿನ್ನುವುದಕ್ಕಿಂತ ಕೊಂಡು ತಂದು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದೇವೆ.

ನಾವು ನಿತ್ಯ ಹಲವು ತರಕಾರಿಗಳನ್ನು ಬಳಸುತ್ತೇವೆ.ಈ ತರಕಾರಿಗಳು ತನ್ನದೇ ಆದ ಗುಣಗಳನ್ನು ಹೊಂದಿವೆ.ಈ ತರಕಾರಿಗಳಲ್ಲಿ ಬೀಟ್ರೋಟ್ ಒಂದಾಗಿದ್ದು,ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದರೆ ತಪ್ಪಾಗಲಾರದು.

ಅಧಿಕ ರಕ್ತದೊತ್ತಡ ತಡೆಗೆ ಬೀಟ್ರೂಟ್ ರಸ ಸೇವಿಸುವುದು ಉತ್ತಮ
ಪ್ರತಿದಿನ ಒಂದು ಬಟ್ಟಲು ಬೀಟ್ರೋಟಿನ  ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಹೊಸ ಸಂಗತಿಯನ್ನು ಇಂಡಿಯನ್ ರಿಸರ್ಚರ್ ಕಂಡು ಹಿಡಿದಿದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕೆಲವು ಮಂದಿ 8 ಔನ್ಸ್ ನಷ್ಟು ಬೀಟ್ರೋಟಿನ ರಸದ ಸೇವನೆಯನ್ನು ಮಾಡಿ 10 ಎಂಎಂಎಚ್ ಜಿ ಯಷ್ಟರ ಪ್ರಮಾಣದ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಂಡಿದ್ದಾರೆ.15 ರೋಗಿಗಳ ಮೇಲೆ ಈ ಪ್ರಯೋಗ ನಡೆಸಲಾಯಿತು.

ಆಗ ಅವರಲ್ಲಿ ಅಧಿಕ ರಕ್ತದೊತ್ತಡದ ಪ್ರಮಾಣ ಇಳಿಮುಖವಾದದ್ದು ಕಂಡು ಬಂದಿತು. ಅದರಲ್ಲೂ ಸೇವಿಸಿದ 3 ರಿಂದ 6 ಗಂಟೆ ನಂತರ ಅತ್ಯುತ್ತಮವಾದ ಫಲಿತಾಂಶ ಕಂಡು ಬಂದಿತು ಎಂದು ಅಧಿಕ ರಕ್ತದೊತ್ತಡದ ಫಲಿತಾಂಶದಿಂದ ತಿಳಿದುಬಂದಿದೆ.

ಬೀಟ್ರೋಟಿನಲ್ಲಿರುವ  ನೈಟ್ರೇಟ್ ರಕ್ತ ಕಣಗಳನ್ನು ಅಗಲಗೊಳಿಸುತ್ತದೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.ಎದೆ ನೋವಿನಿಂದ ಬಳಲುವವರು ನೈಟ್ರೇಟ್ ಅನ್ನು ಬಳಸುತ್ತಾರೆ ಎಂದಿದ್ದಾರೆ ವಿಜ್ಞಾನಿಗಳು.

ಅಂದರೆ ಈ ಸಮಸ್ಯೆಯ ಪರಿಹಾರವೂ ಸಹ ಬೀಟ್ರೋಟ್ ನಲ್ಲಿದೆ ಎಂದಾಯಿತು.ಲಂಡನ್ ಮೆಡಿಕಲ್  ಶಾಲೆಗೆ ಸೇರಿರುವ ಬಾರ್ಟ್ ಹೆಲ್ತ್ ಎನ್ಎಚ್ಎಸ್  ಟ್ರಸ್ಟ್ ನ ಸಂಶೋಧಕರು ನಡೆಸಿದ ಸಂಶೋಧನೆಯಿಂದ ಈ ಸಂಗತಿ ದೃಢಪಟ್ಟಿದೆ.ಇವರು ಹಲವು ವರ್ಷಗಳ ಕಾಲ ಇದರ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಈಸಂಗತಿ ತಿಳಿದುಬಂದಿದೆ.

ಅವರು ಪ್ರಯೋಗ ನಡೆಸುತ್ತಿದ್ದಾಗ ಒಂದು ಅನಿರೀಕ್ಷಿತ ಸಂಗತಿ ಗೋಚರವಾಯಿತು.ಈ ರಸವನ್ನು  ಸೇವಿಸಿದ ವ್ಯಕ್ತಿಗಳ ಮೂತ್ರ  ಗುಲಾಬಿ ಬಣ್ಣಕ್ಕೆ ಬದಲಾಯಿತಂತೆ.ಅಂದರೆ ಇದು ಮೂತ್ರ ಬಣ್ಣದ ಮೇಲೂ ಪ್ರಭಾವ ಬೀರುತ್ತದೆ ಎನ್ನುವ ಸಂಗತಿ ಅರಿವು ವಿಜ್ಞಾನಿಗಳಿಗೆ ಮೂಡಿತಂತೆ.

ನೈಟ್ರೆಟ್ ಮಣ್ಣಿನಿಂದ ದೊರಕುತ್ತದೆ. ಅದನ್ನು ಹೀರಿ ತರಕಾರಿ ಬೆಳೆಯುತ್ತದೆ. ಪುಟ್ಟ ನೈಟ್ರೇಟ್ ನಿಂದ ಎಷ್ಟೊಂದು ಪ್ರಯೋಜನಗಳಿವೆ ಎನ್ನುವ ಸಂಗತಿಗಳು ಬೆಳಕಿಗೆ ಬಂದಾಗ ನಮಗೆ ತುಂಬಾ ಆಶ್ಚರ್ಯವಾಗಿತ್ತು ಎನ್ನುವ ಅಭಿಪ್ರಾಯವನ್ನು ಸಂಶೋಧಕ ಡಾ. ಅಮ್ರಿತ್ ಅಹ್ಲುವಾಲಿಯ ಹೊರಗೆಡವಿದ್ದಾರೆ.

ಹಸಿರು ಸೊಪ್ಪುಗಳು ಮತ್ತು ಬೀಟ್ರೂಟ್ ನಲ್ಲಿ ಜೀರ್ಣವಾಗಿ  ನೈಟ್ರೇಟ್ ಪ್ರಮಾಣ ಹೇರಳವಾಗಿದೆ.ಇದು ಹೃದಯದ ಆರೋಗ್ಯವನ್ನು ನಿಸ್ಸಂದೇಹವಾಗಿ ಕಾಪಾಡುತ್ತದೆ.

ಬ್ರಿಟಿಷ್ ಹಾರ್ಟ್ ಫೌಂಡೇಷನ್ ನ ವೈದ್ಯಕೀಯ ನಿರ್ದೇಶಕರಾದ ಪ್ರೊ.ಪೀಟರ್ ವಿಸ್ಬೆರಗ್ ಪ್ರಕಾರ ನಮಗೆ ತರಕಾರಿ ಸೇವನೆಯ ಮಹತ್ವ ತಿಳಿದಿದೆ.ಆದರೆ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣಹೆಚ್ಚಿದೆ ಎಂದು ತಿಳಿದು ರಕ್ತದೊತ್ತಡದವನ್ನು ದೂರ ಮಾಡಿಕೊಳ್ಳುವತ್ತ ಗಮನ ನೀಡ ಬೇಕು.

ಇಷ್ಟು ದಿನಗಳ ಕಾಲ ಈ ತರಕಾರಿ ರಕ್ತಹೀನತೆಯನ್ನು ದೂರ ಮಾಡುತ್ತಿತ್ತು, ಈಗ ಅಧಿಕರಕ್ತದೊತ್ತಡಕ್ಕೂ ಸಹ ಕಡಿವಾಣ ಹಾಕುತ್ತದೆ ಎಂದಿದ್ದಾರೆ.

(ಸಂಗ್ರಹ)

LEAVE A REPLY

Please enter your comment!
Please enter your name here