ನಿಮಗೆ ‘ಕೋಪ’ ಜಾಸ್ತಿ ಬರುತ್ತದೆಯೇ? ಹಾಗಿದ್ದರೆ ಸಿಟ್ಟು ಕಡಿಮೆ ಮಾಡಿಕೊಳ್ಳಲು ಇವುಗಳನ್ನು ತಪ್ಪದೆ ಸೇವಸಿರಿ ….

0
10302

ಸಿಟ್ಟು ಒಂದು ಮನುಷ್ಯನ ಸ್ವಾಭಾವಿಕ ಗುಣ ಅದು ಆಗಾಗ ಮನುಷ್ಯನಿಗೆ ಬಂದೇ ಬರುತ್ತದೆ ಮತ್ತು ಸಿಟ್ಟು ಬರದೇ ಇರೋ ಜೀವಿಯೇ ಇಲ್ಲ ಈ ಜಗತ್ತಿನಲ್ಲಿ! ಆದರೆ ಸಿಟ್ಟೇ ಜೀವನ ಆಗಿ ಬಿಟ್ರೇ!?

ಹೌದು ಮನುಷ್ಯನಿಗೆ ಸಿಟ್ಟು ಬರುತ್ತದೆ ಮತ್ತು ಬರಲೇ ಬೇಕು ಆದರೆ ಬರೀ ಜೀವನವೆಲ್ಲ ಸಿಟ್ಟು ಸಿಟ್ಟು ಮಾಡಿದ್ರೆ ಖಂಡಿತ ಕಷ್ಟಾನೇ.

ಸಿಟ್ಟು ಬರುವುದಕ್ಕೆ ಒಂದಲ್ಲ ಎರಡಲ್ಲ ನೂರಾರು ಕಾರಣಗಳವೆ, ಅತೀ ಅತಿಯಾಗಿದ್ದರೆ ನಿಮಗೆ ತೊಂದರೆ ಇದೆ ಅಂತ ಅರ್ಥ!

ಈ ಸಿಟ್ಟನ್ನು ಕಡಿಮೆ ಅಥವಾ ಕಂಟ್ರೋಲ್ ಮಾಡಿಕೊಳ್ಳಲು ಎಷ್ಟೋ ಜನ ಡಾಕ್ಟರ್ ಮೊರೆ ಹೊಗುತ್ತಾರೆ. ಅಂದ ಹಾಗೆ ಸಿಟ್ಟು ಬರಲು ಏನು ಕಾರಣ ಅಂತ ನೋಡೋನ.

ಕೆಲವರಿಗೆ ಸಿಟ್ಟು ಬರುವುದು ಸರ್ವೇ ಸಾಮಾನ್ಯ ಆಗಿರುತ್ತದೆ ಇದಕ್ಕೆ ಕಾರಣ ಅವರ ಅನುವಂಶಿಕ ಕೂಡಾ ಆಗಿರಬಹುದು,ಇನ್ನೂ ಕೆಲವರಿಗೆ ರಕ್ತದೊತ್ತಡ ಹೆಚ್ಚಾಗಿ ಸಿಟ್ಟು ಬರುವುದು.

ಹಸಿವಾದಾಗಲೂ ಎಷ್ಟೋ ಜನರು ಸಿಟ್ಟಿಗೇಳುತ್ತಾರೆ, ಹಸಿದಾಗ ಅವರಲ್ಲಿ ಎನರ್ಜಿ ಇರಲ್ಲ ಹೀಗಾಗಿ ಇದು ಕೂಡಾ ಅವರ ಸಿಟ್ಟಿಗೆ ಕಾರಣವಾಗುತ್ತದೆ.

ಹಾಗಾದರೆ ಬನ್ನಿ ನೋಡೋಣ ಈ ಭಯಂಕರ ಸಿಟ್ಟನ್ನು ಕಡಿಮೆ ಮಾಡಲು ಇಲ್ಲಿ ಕೆಲ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ರೂಡಿಸಿಕೊಳ್ಳಿ.

1.ಬಾಳೆ ಹಣ್ಣು

ಪ್ರತಿದಿನ ಆಗದಿದ್ದರೂ ಆಗಾಗ ಬಾಳೆ ಹಣ್ಣನ್ನು ತಿನ್ನುತ್ತಲೇ ಇರಿ, ಯಾಕೆಂದರೆ ಇದರಲ್ಲಿ ವಿಟಮಿನ್ ಬಿ ಮತ್ತು ಪೊಟ್ಯಾಸಿಯಂ ತುಂಬಾ ಇದೆ ಹೀಗಾಗಿ ಇದು ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ. ಅದಲ್ಲದೇ ಬಾಳೆ ಹಣ್ಣು ತುಂಬಾ ಕಡಿಮೆ ಬೆಲೆಯಲ್ಲಿ ಸಿಗು ಆಹಾರ.

2. ಡಾರ್ಕ್ ಚಾಕೊಲೇಟ್

ಚಾಕೊಲೇಟ್ ಅಂದ ತಕ್ಷಣ ಡೈರಿ ಮಿಲ್ಕ್ ಅಥವಾ ಕಿಟ್ ಕ್ಯಾಟ್ ಅಂದುಕೊಳ್ಳಬೇಡಿ, ನಾವು ಹೇಳುತ್ತಿರುವುದು ಡಾರ್ಕ್ ಚಾಕೊಲೇಟ್ ಬಗ್ಗೆ . ಈ ಡಾರ್ಕ್ ಚಾಕೊಲೇಟ್ ಅನ್ನು ಕಕೋವಾ ಬೀಜಗಳಿಂದ ಮಾಡಿರುತ್ತಾರೆ ಮತ್ತು ಇದು ಸಿಟ್ಟನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿ.

ಈ ಡಾರ್ಕ್ ಚಾಕೊಲೇಟ್ ಪ್ರತಿಯೊಂದು ಬೇಕರಿ ಅಥವಾ ಅಂಗಡಿಗಳಲ್ಲೂ ಲಭ್ಯವಿರುತ್ತದೆ, ಅಂಗಡಿಗಳಲ್ಲಿ ಸಿಗುವ ಕೆಲ ಡಾರ್ಕ್ ಚಾಕೊಲೇಟ್ ಹೆಸರುಗಳನ್ನು ನಾವಿಲ್ಲಿ ಹೇಳುತ್ತೇವೆ, ನೀವು ಹೋಗಿ ಖರೀದಿಸಬಹುದು

1.Cadbury Bournville
2.Toblerone dark
3.Hershey’s dark chocolate

3.ಕಾಫೀ

ಕಾಫಿ ಅಲ್ಲಿ ಮನುಷ್ಯನ ಮೂಡ್ ಅನ್ನು ಬದಲಾಯಿಸುವ ಅತ್ಯುತ್ತಮ ಗುಣಗಳಿವೆ, ಪ್ರತಿದಿನ ಕಾಫಿ ಸೇವನೆಯಿಂದ ರಿಲ್ಯಾಕ್ಸ್ ಆಗಿರಬಹುದು.

4.ಚಿಕನ್

ಚಿಕನ್ ಪ್ರಿಯರಿಗೆ ಇದು ಸಂತಸದ ಸುದ್ದಯೇ ನಿಜ ಯಾಕೆಂದರೆ ಚಿಕನ್ ಅಲ್ಲಿ ಅಮಿನೋ ಆಸಿಡ್‌ ಹೇರಳವಾಗಿರುವುದರಿಂದ ಇದು ನಿಮ್ಮನ್ನು ನಿಮ್ಮ ದೇಹವನ್ನು ತಂಪಾಗಿಡುತ್ತದೆ.

5.ಪೀನಟ್ ಬಟರ್

ಪೀನಟ್ ಬಟರ್ ಕೂಡಾ ಸಿಟ್ಟನ್ನು ಕಂಟ್ರೋಲ್ ಮಾಡುವುದರಲ್ಲಿ ತುಂಬಾ ಸಹಾಯಕಾರಿ ಮತ್ತು ಇದು ಸವಿಯಲು ರುಚಿಯಾಗಿರುತ್ತದೆ.

6.ಚೀಸ್

ಚೀಸ್ ಕೂಡಾ ಇಂದು ಆರೋಗ್ಯಕರ ಪದಾರ್ಥ ಮತ್ತು ಇದರಿಂದ ಸಿಟ್ಟು ಕೂಡಾ ಕಂಟ್ರೋಲ್.

7.ಆಲೂಗಡ್ಡೆ (ಬೇಯಿಸಿದ್ದು)

ಆಲೂಗಡ್ಡೆ ಅಲ್ಲಿ ವಿಟಮಿನ್ ಬಿ ಮತ್ತು ಕಾರ್ಬೋಹೈಡ್ರೇಟ್ ಇರುತ್ತವೆ ಹೀಗಾಗಿ ಇವು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಿ ಸಿಟ್ಟನ್ನು ದೂರ ಮಾಡುತ್ತದೆ.

ಒಂದು ನಿಮಿಷದ ಸಿಟ್ಟು ಎಷ್ಟೋ ಸಂತೋಷವನ್ನು ಹಾಳು ಮಾಡುತ್ತದೆ ಹೀಗಾಗಿ ಸಿಟ್ಟನ್ನು ಕಡಿಮೆ ಮಡಿಕೊಳ್ಳಲು ಇವುಗಳ ಸೇವನೆ ಆಗಾಗ ಮಾಡತ್ತಲೇ ಇರಿ.

LEAVE A REPLY

Please enter your comment!
Please enter your name here