ನಾವು ‘ಉಪ್ಪನ್ನೇ’ ಸೇವಿಸದಿದ್ದರೆ ಏನಾಗುತ್ತದೆ ಗೊತ್ತೇ? ನೋಡಿ ಉಪ್ಪಿನ ಅವಶ್ಯಕತೆಯನ್ನು…

0
1313

ಆಹಾರದ ರುಚಿ ಹೆಚ್ಚಿಸುವುದು ಹಾಗೂ ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತಹ ಗುಣ ಇರುವುದು ಉಪ್ಪಿನಲ್ಲಿ. ಅದೇ ಆಹಾರದಲ್ಲಿ ಸೂಕ್ತ ಪ್ರಮಾಣದ ಉಪ್ಪನ್ನು ಬಳಸದೆ ಹೆಚ್ಚು ಅಥವಾ ಕಡಿಮೆ ಮಾಡಿದರೆ ಅಡುಗೆ ತನ್ನ ರುಚಿಯ ಮಟ್ಟವನ್ನು ಕಳೆದುಕೊಳ್ಳುತ್ತದೆ. ಕೆಲವರು ತಮ್ಮ ಆರೋಗ್ಯ ಸಮಸ್ಯೆಯೆಂದು ಉಪ್ಪಿನ ಸೇವನೆಯನ್ನು ಕಡಿಮೆ ಮಾಡುತ್ತಾರೆ.

ಅದೇ ಕೆಲವು ಆರೋಗ್ಯ ಸಮಸ್ಯೆಗೆ ಅಥವಾ ದೇಹದ ಅಸ್ವಸ್ಥತೆಗೆ ಹೆಚ್ಚು ಉಪ್ಪನ್ನು ಸೇವಿಸಬೇಕಾಗುವುದು ಎನ್ನುವುದನ್ನು ನಾವು ಮರೆಯಬಾರದು. ವೈದ್ಯಕೀಯ ಶಾಸ್ತ್ರದ ಪ್ರಕಾರ 2300ಮಿಗ್ರಾಂ ಉಪ್ಪಿನ ಸೇವನೆ ಮಾಡಬೇಕು. ಉಪ್ಪಿನ ಸೇವನೆಯ ಕುರಿತು ನಾವು ಹೆಚ್ಚು ಜಾಗರೂಕರಾಗಿರಬೇಕು.

ಕೆಲವು ಸಂದರ್ಭದಲ್ಲಿ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾದರೆ ಇನ್ನೂ ಕೆಲವೊಮ್ಮೆ ಹೆಚ್ಚು ಉಪ್ಪನ್ನು ಸೇವಿಸಬೇಕಾಗುವ ಅಗತ್ಯವಿರುತ್ತದೆ. ಇವೆಲ್ಲಕ್ಕೂ ದೇಹದ ಆರೋಗ್ಯ ಪರೀಕ್ಷೆ ಮತ್ತು ಸೂಕ್ತ ಉಪ್ಪು ಸೇವಿಸುವ ಪ್ರಮಾಣದ ಬಗ್ಗೆ ವೈದ್ಯರ ಮೊರೆ ಹೋಗಬೇಕು.

ಪ್ರತಿ ದಿನ ಸ್ನಾನದ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ಸ್ನಾನ ಮಾಡಿ, ನಾವು ಯಾವ ಸಂದರ್ಭದಲ್ಲಿ ಹೆಚ್ಚು ಉಪ್ಪಿನ ಸೇವನೆ ಮಾಡಬೇಕು ಅದರ ಅಗತ್ಯತೆಯೇನು ಎನ್ನುವ ಸೂಕ್ತ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಹಾಗಾಗಿ ಇದನ್ನು ಓದುವುದರ ಮೂಲಕ ನಿಮ್ಮ ಉಪ್ಪಿನ ಸೇವನೆಯ ಅಗತ್ಯತೆ ಏನು ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಬಹುದು

ಮ್ಯಾರಥಾನ್ ಅಥವಾ ತೀವ್ರತೆಯ ವ್ಯಾಯಾಮ ಮಾಡಿದಾಗ ಉಪ್ಪಿನಲ್ಲಿರುವ ಸೋಡಿಯಂ ಗುಣವು ಉತ್ತಮ ವರ್ಧಕ ಶಕ್ತಿಯನ್ನು ನೀಡುತ್ತದೆ, ದೇಹವು ತೀವ್ರತೆಯ ವ್ಯಾಯಾಮಕ್ಕೆ ಒಳಗಾದಾಗ ಉಪ್ಪನ್ನು ಸೇವಿಸಬೇಕು ಯಾಕೆಂದರೆ ಇದು ರಕ್ತದಲ್ಲಿ ಸೇರಿಕೊಳ್ಳುವುದರಿಂದ ತಲೆ ತಿರುಗುವಿಕೆ ದುರ್ಬಲತೆ ಹಾಗೂ ಆಯಾಸವನ್ನು ಕಡಿಮೆ ಮಾಡುತ್ತದೆ. ಉಪ್ಪಿನ ಸೇವನೆ ಕಡಿಮೆ ಆದಾಗ ದೇಹವು ಬಳಲುವಿಕೆಗೆ ಒಳಗಾಗುತ್ತದೆ.

ತೀವ್ರವಾದ ಉರಿ ವಾತಾವರಣ ತೀವ್ರವಾದ ಉಷ್ಣಾಂಶ ಹೆಚ್ಚಾದಾಗ ದೇಹವು ಬೆವರುವಿಕೆಗೆ ಒಳಗಾಗುತ್ತದೆ. ಆಗ ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗುತ್ತದೆ. ಅತಿಯಾದ ಬೆವರುವಿಕೆಯಿಂದ ಹೈಪೋನೆಟ್ರೇಮಿಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಉಪ್ಪನ್ನು ಹೆಚ್ಚು ಸೇವಿಸಬೇಕು.

ವೈದ್ಯಕೀಯ ಚಿಕಿತ್ಸೆಗೆ ಒಳಗಾದಾಗ ಸಾಲ್ಟ್-ಲೂಸಿಂಗ್ ನೆಪ್ರೋಪತಿ ಎಂಬುದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ, ಈ ರೀತಿಯ ಮೂತ್ರ ಪಿಂಡಕ್ಕೆ ಸಂಬಂಧಿಸಿ ಕಾಯಿಲೆಗಳು ಬಂದಾಗ ಮೂತ್ರದ ಮೂಲಕ ಹೆಚ್ಚಿನ ಸೋಡಿಯಂ ಪ್ರಮಾಣ ಹೊರ ಹೋಗುತ್ತದೆ. ಅಂತಹವರು ಕೆಲವು ಮೂಲಗಳಿಂದ ತಮ್ಮ ದೇಹಕ್ಕೆ ಬೇಕಾದಷ್ಟು ಸೋಡಿಯಂ ಪ್ರಮಾಣ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು.

ವಯಸ್ಸಾದಾಗ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹೆಚ್ಚು ಉಪ್ಪನ್ನು ಸೇವಿಸಬೇಕು. ಉಪ್ಪಿನಿಂದ ಮೆದುಳಿನ ವರ್ಧನೆಯನ್ನು ಹೆಚ್ಚಿಸಬಹುದು. ಕಡಿಮೆ ಸೋಡಿಯಂ ಆಹಾರ ಸೇವನೆ ಮಾಡುವವರಿಗಿಂತ ಮಧ್ಯಮ ಸೋಡಿಯಂ ಸೇವನೆ ಮಾಡುವ ವಯಸ್ಕರಲ್ಲಿ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದು ಅಧ್ಯಯನದ ಮೂಲಕ ಸಾಬೀತಾಗಿದೆ.

LEAVE A REPLY

Please enter your comment!
Please enter your name here