ದಿನಕ್ಕೊಂದು ‘ಮೊಟ್ಟೆ’ ತಿನ್ನುವುದರಿಂದ ಏನಾಗುತ್ತದೆ ಗೊತ್ತೇ ನೋಡಿ ಈ ವಿಷಯವನ್ನು….

0
15502

ಬೇಯಿಸಿದ ಮೊಟ್ಟೆ ನೋಡಲಿಕ್ಕೆ ಚಿಕ್ಕದೇ ಇರಬಹುದು ಆದರೆ ಇದರಲ್ಲಿ ವಿಟಮಿನ್ನು ಹಾಗೂ ಖನಿಜಗಳ ಸಹಿತ ಪೋಷಕಾಂಶಗಳು ಗರಿಷ್ಠ ಪ್ರಮಾಣದಲ್ಲಿ ತುಂಬಿಕೊಂಡಿವೆ, ಒಂದು ಬೇಯಿಸಿದ ಮೊಟ್ಟೆಯಲ್ಲಿ ಪೊಟ್ಯಾಶಿಯಂ ಕಬ್ಬಿಣ ಸತು ವಿಟಮಿನ್ ಇ ಹಾಗೂ ಫೋಲೇಟ್ ಪ್ರಮುಖವಾಗಿವೆ.

ಒಂದು ಅಧ್ಯಯನದ ಪ್ರಕಾರ ಒಂದು ಬೇಯಿಸಿದ ಮೊಟ್ಟೆಯಲ್ಲಿ 6.29 ಗ್ರಾಂ ಪ್ರೋಟೀನ್ ಹಾಗೂ 78 ಕ್ಯಾಲೋರಿಗಳಿವೆ, ನಿತ್ಯವೂ ಒಂದು ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುವ ಮೂಲಕ ಹಸಿವಾಗದಂತೆ ತಡೆಯುತ್ತದೆ.

ಇದೇ ಕಾರಣಕ್ಕೆ ದೇಹದಾರ್ಢ್ಯ ತರಬೇತುದಾರರು ಹಾಗೂ ತೂಕ ಇಳಿಸುವ ವೃತ್ತಿಪರ ತಜ್ಞರು ವ್ಯಾಯಾಮಕ್ಕೂ ಮುನ್ನ ಬೇಯಿಸಿದ ಮೊಟ್ಟೆಯನ್ನು ಸೇವಿಸಲು ಸಲಹೆ ಮಾಡುತ್ತಾರೆ. ಬೆಳಗ್ಗಿನ ಉಪಾಹಾರಕ್ಕೆ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ದಿನದ ಚಟುವಟಿಕೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಬಹುದು.

ಬೇಯಿಸಿದ ಮೊಟ್ಟೆಯ ಸೇವನೆಯಿಂದ ಇಷ್ಟು ಪ್ರಯೋಜನಗಳು ಮಾತ್ರವೇ ದೊರಕುವುದಿಲ್ಲ ಬದಲಿಗೆ ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ, ಈ ಮಾಹಿತಿಯನ್ನು ಇಂದು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಇಂದಿನ ಲೇಖನದ ಮೂಲಕ ಪ್ರಸ್ತುತಪಡಿಸುತ್ತಿದೆ. ಒಂದು ವೇಳೆ ನೀವು ಮೊಟ್ಟೆಯನ್ನುಇದುವರೆಗೆ ತಿನ್ನದೇ ಇದ್ದರೂ ಈಗಲಾದರೂ ಪ್ರಾರಂಭಿಸಲು ಈ ಮಾಹಿತಿಗಳು ನೆರವಾಗಲಿವೆ.

ಕಣ್ಣುಗಳಿಗೆ ಒಳ್ಳೆಯದು

ಬೇಯಿಸಿದ ಮೊಟ್ಟೆಯ ಅತ್ಯುತ್ತಮ ಪ್ರಯೋಜನ ಕಣ್ಣುಗಳಿಗೆ ಲಭಿಸುತ್ತದೆ, ನಿಯಮಿತವಾಗಿ ಬೇಯಿಸಿದ ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಈ ಮೂಲಕ ಉತ್ತಮ ಪ್ರಮಾಣದ ಲ್ಯೂಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಕ್ಯಾರೋಟಿನಾಯ್ಡುಗಳನ್ನು ಸೇವಿಸಲು ಸಾಧ್ಯವಾಗುತ್ತದೆ.

ಈ ಕ್ಯಾರೋಟಿನಾಯ್ಡುಗಳು ಕಣ್ಣುಗಳ ಜೀವಕೋಶಗಳ ಸವೆತ (macular degeneration)ದ ವಿರುದ್ಧ ಕಾರ್ಯನಿರ್ವಹಿಸುವ ಮೂಲಕ ವಯಸ್ಸಾಗುತ್ತಾ ಹೋದಂತೆ ಎದುರಾಗುವ ದೃಷ್ಟಿ ಮಂದವಾಗುವಿಕೆಯ ವಿರುದ್ದ ಉತ್ತಮ ರಕ್ಷಣೆ ಪಡೆಯಬಹುದು.

ಉಗುರುಗಳಿಗೂ ಒಳ್ಳೆಯದು

ಬೇಯಿಸಿದ ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಗಂಧಕವಿದೆ (ವಿಶೇಷವಾಗಿ ಮೊಟ್ಟೆಯ ಹಳದಿ ಭಾಗದಲ್ಲಿ) ಇದು ವಿಟಮಿನ್ ಡಿ ಪಡೆಯಲು ಉತ್ತಮ ಮೂಲವಾಗಿದೆ, ಬೇಯಿಸಿದ ಮೊಟ್ಟೆಯಲ್ಲಿರುವ ವಿಟಮಿನ್ ಡಿ ಹಾಗೂ ಇತರ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಉಗುರುಗಳ ಉತ್ತಮ ಬೆಳವಣಿಗೆ ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತವೆ.

ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ

ನಿತ್ಯವೂ ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯೊಂದನ್ನು ಸೇವಿಸಿದರೆ ವಯಸ್ಸಾದ ಬಳಿಕ ಎದುರಾಗುವ ಮರೆಗುಳಿತನದ ವಿರುದ್ದ ಉತ್ತಮ ರಕ್ಷಣೆ ಪಡೆದಂತಾಗುತ್ತದೆ, ಅಲ್ಲದೇ ಇರದಲ್ಲಿರುವ ಕೋಲೈನ್ (choline) ಎಂಬ ಪೋಷಕಾಂಶ ಮೆದುಳಿನ ಆರೋಗ್ಯಕರ ಚಟುವಟಿಕೆಗೆ ತುಂಬಾ ಅಗತ್ಯವಾದ ಪೋಷಕಾಂಶವಾಗಿದೆ.

ನಿತ್ಯದ ಬೇಯಿಸಿದ ಮೊಟ್ಟೆಯ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ ಹಾಗೂ ಇದರ ಕೊರತೆಯಿಂದ ಎದುರಾಗುವ ಆಲ್ಝೀಮರ್ಸ್ ಕಾಯಿಲೆಯಿಂದ ರಕ್ಷಣೆ ಪಡೆದಂತಾಗುತ್ತದೆ.

ತೂಕ ಇಳಿಕೆಗೂ ಉತ್ತಮವಾಗಿದೆ ಹೆಚ್ಚಿನವರಿಗೆ ಬೇಯಿಸಿದ ಮೊಟ್ಟೆಯ ಸೇವನೆಯಿಂದ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ ಎಂದು ಗೊತ್ತಿರಲಾರದು, ಇದರಲ್ಲಿ ಕೇವಲ ಎಂಭತ್ತು ಗ್ರಾಂ ಕ್ಯಾಲೋರಿಗಳಿವೆ ಹಾಗೂ ಪ್ರೋಟೀನುಗಳು ಹೆಚ್ಚಿವೆ. ಇವೆರಡೂ ತೂಕ ಇಳಿಸುವ ಪ್ರಯತ್ನದಲ್ಲಿರುವ ಅಥವಾ ತೂಕ ಏರದಂತೆ ಎಚ್ಚರ ವಹಿಸುತ್ತಿರುವ ವ್ಯಕ್ತಿಗಳಿಗೆ ಪೂರಕವಾಗಿದೆ.

ಮೂಳೆಗಳ ದೃಢತೆ ಹೆಚ್ಚಿಸುತ್ತದೆ

ಬೇಯಿಸಿದ ಮೊಟ್ಟೆಯಲ್ಲಿರುವ ವಿಟಮಿನ್ ಡಿ (ತುಸುವೇ ಬೇಯಿಸಿದ ಅಥವಾ ಹೆಚ್ಚು ಹೊತ್ತು ಬೇಯಿಸಿದ ಎರಡೂ ಮೊಟ್ಟೆಗಳಲ್ಲಿ ವಿಟಮಿನ್ ಡಿ ಇರುತ್ತದೆ) ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ ಹಾಗೂ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

ಹೀಗೆ ಹೀರಲ್ಪಡುವ ಕ್ಯಾಲ್ಸಿಯಂ ಮೂಳೆಗಳನ್ನು ದೃಢಗೊಳಿಸುತ್ತದೆ, ಬೇಯಿಸಿದ ಮೊಟ್ಟೆಯ ಸೇವನೆಯಿಂದ ಪಡೆಯುವ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ರಕ್ತದ ಗುಣಮಟ್ಟ ಹೆಚ್ಚಿಸುತ್ತದೆ

ಒಂದು ಸಂಶೋಧನೆಯ ಪ್ರಕಾರ ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು.

ದಿನಕ್ಕೊಂದು ಬೇಯಿಸಿದ ಮೊಟ್ಟೆ ಸೇವಿಸುವ ಮೂಲಕ ರಕ್ತದ ಗುಣಮಟ್ಟವೂ ಆರೋಗ್ಯಕರವಾಗಿರುತ್ತದೆ ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ವೃದ್ದಿಸುತ್ತದೆ ಹಾಗೂ ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

ಸ್ತನಗಳ ಆರೋಗ್ಯ ಹೆಚ್ಚಿಸುತ್ತದೆ

ಈ ಪ್ರಯೋಜನ ವಿಶೇಷವಾಗಿ ಮಹಿಳೆಯರಿಗಾಗಿಯೇ ಇದೆ, ಕನಿಷ್ಟ ವಾರಕ್ಕೊಂದಾದರೂ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ, ವಾರಕ್ಕೆ ಕನಿಷ್ಟ ಆರು ಮೊಟ್ಟೆಗಳನ್ನು ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇತರರಿಗಿಂತ 44% ರಷ್ಟು ಕಡಿಮೆ ಇರುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಇದರಲ್ಲಿರುವ ಪರ್ಯಾಪ್ತ ಕೊಬ್ಬುಗಳು ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ಪ್ರಚೋದಿಸುತ್ತದೆ ಹಾಗೂ ಇದು ಆರೋಗ್ಯಕರ ಕೊಲೆಸ್ಟ್ರಾಲ್ ಆಗಿದೆ.

ಇತರ ಆಹಾರ ಮೂಲಗಳಿಂದ ಲಭಿಸುವ ಕೊಲೆಸ್ಟ್ರಾಲ್ ಸಿದ್ಧರೂಪದಲ್ಲಿದ್ದು ಅನಾರೋಗ್ಯ ಕರವಾಗಿರುತ್ತದೆ. ಆದ್ದರಿಂದ ಬೇಯಿಸಿದ ಮೊಟ್ಟೆಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಏರುವುದಿಲ್ಲ.

ತಜ್ಞರ ಪ್ರಕಾರ ತಜ್ಞರ ಪ್ರಕಾರ ಒಂದು ವಾರದಲ್ಲಿ ಆರರಿಂದ ಏಳು ಮೊಟ್ಟೆಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಸಂಬಂಧಿತ ತೊಂದರೆ ಎದುರಾಗುವುದಿಲ್ಲ. ಅಂದರೆ ಹೆಚ್ಚೂ ಕಡಿಮೆ ದಿನಕ್ಕೊಂದು ಮೊಟ್ಟೆ ಸಾಕು. ಒಂದು ವೇಳೆ ನಿಮಗೆ ಹೃದಯ ಸಂಬಂಧಿ ತೊಂದರೆ ಇದ್ದರೆ ಈ ಪ್ರಮಾಣವನ್ನು ವಾರಕ್ಕೆ ನಾಲ್ಕಕ್ಕಿಳಿಸಬೇಕು.

ಮೊಟ್ಟೆಯನ್ನು ಯಾವ ರೀತಿಯಾಗಿ ಬೇಯಿಸುತ್ತೀರಿ ಎಂಬುದೂ ಮುಖ್ಯ. ಹುರಿದ ಮೊಟ್ಟೆ ಹೃದಯಕ್ಕೆ ಉತ್ತಮವಲ್ಲ. ಆದರೆ ಹಳದಿಭಾಗ ಕಪ್ಪಾಗದಷ್ಟು ಮಾತ್ರವೇ ಬೇಯಿಸಿದ ಮೊಟ್ಟೆ ಆರೋಗ್ಯಕರವಾಗಿದ್ದು ದಿನಕ್ಕೊಂದು ಸೇವಿಸಬಹುದಾಗಿದೆ.

ನಿಮ್ಮ ದಿನದ ಇತರ ಆಹಾರಗಳಲ್ಲಿ ಮಾಂಸ ಮತ್ತು ಇತರ ಅಧಿಕ ಪೌಷ್ಟಿಕಾಂಶವುಳ್ಳ ಆಹಾರಗಳು ಇರದ ಹೊರತಾಗಿ ಟ್ರಾನ್ಸ್ ಫ್ಯಾಟ್ ಹಾಗೂ ಕ್ಯಾಲೋರಿಗಳು ಹೆಚ್ಚಿರುವ ಮೊಟ್ಟೆಯನ್ನು ದಿನಕ್ಕೊಂದರಂತೆ ಸುರಕ್ಷಿತವಾಗಿ ಸೇವಿಸಬಹುದು.

ಮೊಟ್ಟೆಯ ಹಳದಿಭಾಗ, ಒಂದು ವೇಳೆ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಇದೆ ಎಂದಾದಲ್ಲಿ ಮೊಟ್ಟೆಯ ಹಳದಿಭಾಗವನ್ನು ನಿವಾರಿಸಿ ಕೇವಲ ಬಿಳಿಭಾಗವನ್ನು ಮಾತ್ರ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ

ಸುದ್ದಿ ಕೃಪೆ ಬೋಲ್ಡ್ ಸ್ಕೈ ಕನ್ನಡ

LEAVE A REPLY

Please enter your comment!
Please enter your name here