ಐಸ್ ನೀರಿನ ಮೇಲೆ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನು ಈ ಯುವತಿ ಹೇಗೆ ಕಾಪಾಡಿದಳು ಗೊತ್ತೇ ವಿಡಿಯೋ ನೋಡಿ

0
76

ಸಾಮಾನ್ಯವಾಗಿ ಜಿಂಕೆಯಂತಹ ಪ್ರಾಣಿಗಳಿಗೆ ನೀರಿನಲ್ಲಿ ಸಿಕ್ಕಿಕೊಂಡಾಗ ಹೊರಬರಲು ತುಂಬಾ ಕಷ್ಟ ಆಗುತ್ತದೆ ಆದರಲ್ಲೂ ತಂಪು ಐಸ್ ಗಡ್ಡೆಯ ಮೇಲೆ ಜಿಂಕೆ ಹೋದರೆ ವಾಪಸ್ ಬರಲಾಗದೆ ಅಲ್ಲೇ ಜಾರುತ್ತಲೇ ಇರುತ್ತದೆ,ಇಲ್ಲೊಂದು ಘಟನೆಯಲ್ಲಿ ಒಬ್ಬ ಯುವತಿ ತಂಪು ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಒಂದು ಸಣ್ಣ ಜಿಂಕೆಯನ್ನು ಯಾವ ರೀತಿ ರಕ್ಷಿಸಿದರು ಅಂತ ನೋಡಿ.

ಇದು ಆಗಿದ್ದು ವಿದೇಶದ ನಗರವೊಂದರಲ್ಲಿ ಊರಿನ ಮಧ್ಯೆ ಇರುವ ಕೆರೆಗಳಲ್ಲಿ ಅಲ್ಲಿನ ವಾತಾವರಣದಿಂದ ನೀರೆಲ್ಲ ಮಂಜು ಗಡ್ಡೆ ಆಗಿರುತ್ತದೆ,ಆ ನೀರಲ್ಲಿ ಎಲ್ಲಿಂದಲೋ ಬರುವ ಒಂದು ಜಿಂಕೆ ಆ ಮಂಜು ಗಡ್ಡೆಯ ಮೇಲೆ ಹೋಗಿಬಿಡುತ್ತದೆ.ಆದರೆ ಅದು ತುಂಬಾ ಜಾರಿಕೆ ಇರುವ ಕಾರಣ ತುಂಬಾ ಹೊತ್ತು ಆ ಜಿಂಕೆ ಹೊರಬರಲಾಗದೆ ಅಲ್ಲೇ ಜಾರುತ್ತಲೇ ಒದ್ದಾಡುತ್ತಿರುತ್ತದೆ ಆಗ ಒಂದು ಮಹಿಳೆ ಆ ಜಿಂಕೆಯ ಸಹಾಯಕ್ಕೆ ಬರುತ್ತಾಳೆ ನೋಡಿ.

ಕೂಡಲೇ ಅಲ್ಲೇ ಇದ್ದ ಮಹಿಳೆ ಜಿಂಕೆಯ ಸಹಾಯಕ್ಕೆ ಬಂದು ತನ್ನ ಬಳಿಯಿದ್ದ ಮಂಜು ತಳ್ಳುವ ಸಾಧನದಿಂದ ನೀಧಾನವಾಗಿ ಆ ಜಿಂಕೆಮರಿಯನ್ನು ದಡದ ತನಕ ತರುತ್ತಾರೆ ಕೊನೆಗೆ ಅಲ್ಲಿಂದ ಜಿಂಕೆ ಪ್ರಾಣಾಪಾಯದಿಂದ ಪಾರಾಗಿ ಬರುತ್ತದೆ.ಅಂದಹಾಗೆ ಇದು ಸಾಧಾರಣ ಕೆಲಸ ಅಲ್ಲವಾಗಿತ್ತು ಯಾಕೆಂದರೆ ಅದು ಪೂರ್ತಿ ಮಂಜು ಗದ್ದೆ ಇರುವದರಿಂದ ನೆಲ ಸಂಪೂರ್ಣ ಜಾರುತ್ತಿರುತ್ತದೆ,ಈ ಯುವತಿ ಜಿಂಕೆಯನ್ನು ರಕ್ಷಿಸಿರುವ ವಿಡಿಯೋ ಇಂಟರ್ನೆಟ್ ಅಲ್ಲಿ ಹರಿದಾಡಿ ಯುವತಿಗೆ ಭಾರಿ ಪ್ರಶಂಸೆ ಬರುತ್ತಿವೆ.

LEAVE A REPLY

Please enter your comment!
Please enter your name here