‘ತಲೆ ದಿಂಬು’ ಇಟ್ಟುಕೊಳ್ಳದೇ ಮಲಗುವದರಿಂದ ಏನಾಗುತ್ತೆ ಗೊತ್ತಾ? ನೋಡಿ ಇದನ್ನ….

0
6048

ಆರಾಮದಾಯಕ ನಿದ್ದೆಗೆ ಆರಾಮವೆನಿಸುವ ತಲೆದಿಂಬು ಸಹಾ ಅವಶ್ಯಕ. ಇದು ಕೇವಲ ತಲೆ ಮತ್ತು ಕುತ್ತಿಗೆಗೆ ಕೊಂಚ ಎತ್ತರ ನೀಡುವುದು ಮಾತ್ರವಲ್ಲ, ನಿಮ್ಮ ಮಲಗುವ ಭಂಗಿಯನ್ನು ಅನುಸರಿಸಿ ಹೆಚ್ಚುವರಿ ತಲೆದಿಂಬುಗಳನ್ನು ಇರಿಸುವ ಮೂಲಕವೂ ನಿದ್ದೆ ಇನ್ನಷ್ಟು ಸುಖಕರವಾಗಬಹುದು.

ಆದರೆ ತಲೆದಿಂಬೇ ಇಲ್ಲದೆ ಮಲಗಿದರೆ ಆರಾಮವಲ್ಲ ಎನಿಸಿದರೂ ಇದರಿಂದ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಹೌದು. ತಲೆದಿಂಬು ಮಲಗಿದಾಗ ಆರಾಮದಾಯಕ ಎತ್ತರದಲ್ಲಿ ತಲೆಯನ್ನಿರಿಸಲು ನೆರವಾಗುತ್ತದಾದರೂ ಇಲ್ಲದೇ ಇರುವುದರಿಂದ ಕುತ್ತಿಗೆ ನೋವು, ನರ ಸಂಬಂಧಿತ ಕಾಯಿಲೆ ಹಾಗೂ ನೆರಿಗೆಗಳು ಮೂಡುವ ತೊಂದರೆಗಳಿಂದ ರಕ್ಷಿಸುತ್ತದೆ.

ಕೆಲವರಿಗೆ ಎರಡು ಅಥವಾ ಇನ್ನೂ ಹೆಚ್ಚು ದಿಂಬುಗಳನ್ನಿರಿಸುವ ಅಭ್ಯಾಸವಿರುತ್ತದೆ. ಆದರೆ ಇದು ಮಲಗುವ ಸಮಯದಲ್ಲಿ ಆರಾಮದಾಯಕ ಎನಿಸಿದರೂ ನಿದ್ದೆ ಬಂದ ಬಳಿಕ ಕುತ್ತಿಗೆಯ ಸ್ನಾಯುಗಳು ಮತ್ತು ನರಗಳಿಗೆ ಸೆಳೆತ ನೀಡುವ ಕಾರಣ ನೋವು ನೀಡಬಹುದು. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ತಲೆದಿಂಬನ್ನು ತ್ಯಜಿಸುವುದೇ ಉತ್ತಮ.

ಒಂದು ವೇಳೆ ನಿಮಗೆ ತಲೆದಿಂಬು ಅನಿವಾರ್ಯವೆಂದು ವೈದ್ಯರು ಯಾವುದಾದಾರೂ ಕಾರಣಕ್ಕೆ ಹೇಳಿದ್ದರೆ ಮಲಗಿದಾಗ ತಲೆ, ಬೆನ್ನು ಹಾಗೂ ಕುತ್ತಿಗೆ ನೆರವಾಗುವಷ್ಟೇ ದಪ್ಪದ ತಲೆದಿಂಬನ್ನು ಆರಿಸಿಕೊಳ್ಳಿ. ಅಲ್ಲದೇ ದಿಂಬು ಅತಿ ದೃಢವಾಗಿಯೂ ಇರಬಾರದು, ಅತಿಯಾದ ಮೆತ್ತನೆಯಾಗಿಯೂ ಇರಬಾರದು.

ಮಲಗಿದ ಬಳಿಕ ಬದಲಿಸುವ ಮಗ್ಗುಲುಗಳಿಂದಾಗಿ ತಲೆಯ ಭಾರವನ್ನು ಎಲ್ಲಾ ಕಡೆಯಿಂದಲೂ ಬೆಂಬಲ ನೀಡುವ ದಿಂಬೇ ಸೂಕ್ತವಾಗಿದೆ. ಆದರೆ ಸಾದ್ಯವಾದಷ್ಟೂ ಮಟ್ಟಿಗೆ ತಲೆದಿಂಬು ಇಲ್ಲದೇ ಮಲಗುವುದೇ ಆರೋಗ್ಯಕರ. ಬನ್ನಿ, ಈ ಮೂಲಕ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ…

ಬೆನ್ನು ನೋವು ಬರಲ್ಲ:

ಒಂದು ವೇಳೆ ನಿಮಗೆ ಬೆನ್ನು ನೋವಿನ ತೊಂದರೆ ಇದ್ದರೆ ಅಥವಾ ಕೊಂಚ ಹೆಚ್ಚು ಬಾಗಿದರೂ ವಿಪರೀತ ಬೆನ್ನು ನೋವಾಗುತ್ತಿದ್ದರೆ ತಲೆದಿಂಬನ್ನು ತ್ಯಜಿಸುವುದೇ ಉತ್ತಮ.

ನಿದ್ದೆಯ ಸಮಯದಲ್ಲಿ ತಲೆದಿಂಬು ಇಲ್ಲದೇ ಇದ್ದರೆ ಬೆನ್ನುಹುರಿ ಯಾವುದೇ ಒತ್ತಡ ಅಥವಾ ಸೆಳೆತಕ್ಕೆ ಒಳಗಾಗದೇ ಸಾಮಾನ್ಯಸ್ಥಿತಿಯಲ್ಲಿ ಆರಾಮ ಪಡೆಯಲು ಸಾಧ್ಯವಾಗುತ್ತದೆ.

ತಲೆದಿಂಬು ದಪ್ಪನಿದ್ದಷ್ಟೂ ಬೆನ್ನುಹುರಿ ಸೆಳೆತಕ್ಕೆ ಒಳಗಾಗುತ್ತದೆ ಹಾಗೂ ಬೆನ್ನುನೋವಿಗೆ ಈ ಸೆಳೆತವೇ ಕಾರಣವಾಗಿದೆ.

ಕುತ್ತಿಗೆಗೆ ತುಂಬಾ ಸಹಾಯಕಾರಿ:

ಬೆಳಿಗ್ಗೆದ್ದಾಗ ಕೆಲವೊಮ್ಮೆ ಬೆನ್ನು ಹಾಗೂ ಕುತ್ತಿಗೆಯಲ್ಲಿ ಉಂಟಾಗುವ ನೋವಿಗೆ ತಲೆದಿಂಬೇ ಕಾರಣವಾಗಿದೆ. ಆದ್ದರಿಂದ ತಲೆದಿಂಬಿಲ್ಲದೇ ಮಲಗಿದರೆ ಕುತ್ತಿಗೆ ಬೆನ್ನಿನ ಭಾಗದಲ್ಲಿ ಪೂರ್ಣಪ್ರಮಾಣದ ರಕ್ತಸಂಚಾರ ಸಾಧ್ಯವಾಗುತ್ತದೆ ಹಾಗೂ ನೋವು ಉಂಟಾಗುವುದಿಲ್ಲ.

ಪರಿಣಾಮವಾಗಿ ಮರುದಿನ ಎದ್ದಾಗ ಯಾವುದೇ ನೋವಿಲ್ಲದೇ ಚಟುವಟಿಕೆಯಿಂದ ಇಡಿಯ ದಿನದ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಚೈತನ್ಯ ನೀಡುತ್ತದೆ:

ಕೆಲವೊಮ್ಮೆ ನಾವು ರಾತ್ರಿ ಮಲಗುವಾಗ ದಿಂಬಿನಲ್ಲಿ ಮುಖ ಹುದುಗಿಸಿ ಮಲಗುತ್ತೇವೆ. ಕೆಲವರಿಗಂತೂ ಇದು ನಿತ್ಯದ ಅಭ್ಯಾಸವಾಗಿರುತ್ತದೆ. ಆದರೆ ರಾತ್ರಿಯ ಸಮಯದಲ್ಲಿ ಚರ್ಮ ಸಡಿಲವಾಗಿದ್ದು ಈ ಸಮಯದಲ್ಲಿ ತಲೆದಿಂಬಿನ ಒತ್ತಡದಿಂದ ಚರ್ಮದಲ್ಲಿ ಸುಲಭವಾಗಿ ನೆರಿಗೆಗಳು ಮೂಡಲು ಸಾಧ್ಯವಾಗುತ್ತದೆ.

ಆದ್ದರಿಂದ ಮುಖಸಲ್ಲಿ ನೆರಿಗೆಗಳು ಮೂಡಬಾರದು ಎಂದಿದ್ದರೆ ತಲೆದಿಂಬನ್ನು ತ್ಯಜಿಸುವುದೇ ಒಳ್ಳೆಯದು

ಗಾಢ ನಿದ್ರೆ:

ತಜ್ಞರ ಪ್ರಕಾರ ತಲೆಯ ಕೆಳಗೆ ದಿಂಬು ಇದ್ದರೆ ಗಾಢವಾದ ನಿದ್ದೆಗೆ ಭಂಗವಾಗುತ್ತದೆ. ಬದಲಿಗೆ ದಿಂಬು ಇಲ್ಲದೇ ಬರೆಯ ಹಾಸಿಗೆಯ ಮೇಲೆ ಮಲಗಿದರೆ ದೇಹಕ್ಕೆ ಗರಿಷ್ಠ ಆರಾಮ ದೊರಕುತ್ತದೆ ಹಾಗೂ ಗಾಢನಿದ್ದೆ ಪಡೆಯುವ ಮೂಲಕ ಆರೋಗ್ಯ ವೃದ್ಧಿಸಲು ಸಾಧ್ಯವಾಗುತ್ತದೆ.

ತಲೆದಿಂಬಿನ ಮೇಲೆ ತಲೆಯಿಟ್ಟು ಮಲಗಿದಾಗ ಮನ್ನ ಬೆನ್ನುಮೂಳೆಯ ಆಕಾರ ಕೊಂಚ ವಕ್ರವಾಗಿರುತ್ತದೆ. ಎಚ್ಚರವಾಗಿದ್ದ ಸಮಯದಲ್ಲಿ ಈ ವಕ್ರಾಕಾರ ಆಹ್ಲಾದಕರವಾಗಿರುತ್ತದೆ. ಹಾಗಾಗಿ ನಮಗೆಲ್ಲರಿಗೂ ದಿಂಬು ಅಪ್ಯಾಯ ಮಾನವೆನಿಸುತ್ತದೆ. ಆದರೆ ನಿದ್ದೆ ಹತ್ತಿದ ಬಳಿಕ ಬೆನ್ನುಮೂಳೆ ಹೀಗೇ ವಕ್ರವಾಗಿದ್ದರೆ ಅನೈಚ್ಚಿಕ ಕಾರ್ಯಗಳಿಗೆ ರಕ್ತಸಂಚಾರ ಸರಾಗವಾಗಿ ಆಗದು.

ಪರಿಣಾಮವಾಗಿ ಮರುದಿನ ಬೆಳಿಗ್ಗೆ ಕೊಂಚ ಬೆನ್ನು ನೋವು ಎದುರಾಗುತ್ತದೆ. ದಿನಂಪ್ರತಿ ಹೀಗೇ ಮುಂದುವರೆಯುತ್ತಿದ್ದರೆ ಕೊನೆಗೊಂದು ದಿನ ಈ ಬೆನ್ನುನೋವು ತಡೆಯಲಸಾಧ್ಯವಾಗದಷ್ಟು ಹೆಚ್ಚಬಹುದು. ತಲೆದಿಂಬಿಲ್ಲದೇ ಮಲಗಿದರೆ ಬೆನ್ನುಮೂಳೆ ತನ್ನ ಸಹಜ ಆಕಾರದಲ್ಲಿರಲು ನೆರವಾಗುತ್ತದೆ ಹಾಗೂ ಪರಿಪೂರ್ಣವಾದ ವಿಶ್ರಾಂತ ಸ್ಥಿತಿ ಪಡೆಯಲು ಸಾಧ್ಯವಾಗುತ್ತದೆ.

ತನ್ಮೂಲಕ ರಕ್ತಪರಿಚಲನೆ ಸುಲಭವಾಗಿ ಜರುಗುತ್ತದೆ ಹಾಗೂ ಬೆನ್ನು ಮತ್ತು ಕುತ್ತಿಗೆಯ ಸ್ನಾಯುಗಳ ಮೇಲೆ ಸೆಳೆತವನ್ನೂ ನೀಡದೇ ಮರುದಿನ ಬೆಳಿಗ್ಗೆದ್ದಾಗ ಯಾವುದೇ ಬೆನ್ನುನೋವು, ಕುತ್ತಿಗೆ ನೋವಿಲ್ಲದೇ ಇರಲು ಸಾಧ್ಯವಾಗುತ್ತದೆ.

ನಿದ್ದೆ ಬಾರದಿರುವುದು, ತಲೆನೋವು, ನಡುರಾತ್ರಿ ಎಚ್ಚರಾಗುವುದು, ಕನಸಿನಲ್ಲಿ ಬೆಚ್ಚಿ ಬೀಳುವುದು, ನಿತ್ಯದ ಕೆಲಸಗಳಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗದೇ ಹೋಗುವುದು ಇತ್ಯಾದಿ. ಗಾಢ ನಿದ್ದೆ ಪಡೆಯುವ ಮೂಲಕ ಈ ಎಲ್ಲಾ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ.

ತಲೆ ದಿಂಬು ಇಲ್ಲದೆ ಮಲಗುವುದು ಹೇಗೆ?:

ಇದುವರೆಗೆ ತಲೆದಿಂಬಿನ ಸಹಿತ ಮಲಗಿ ಅಭ್ಯಾಸವಾಗಿ ಹೋಗಿರುವ ನಮಗೆ ಏಕಾಏಕಿ ತಲೆದಿಂಬಿಲ್ಲದೇ ನಿದ್ದೆಯೇ ಬರದಿರಬಹುದು ಪ್ರತಿ ಕ್ಷಣವೂ ಮನಸ್ಸು ತಲೆದಿಂಬಿಗಾಗಿ ಹಪಹಪಿಸಬಹುದು. ಆದ್ದರಿಂದ ಈ ಅಭ್ಯಾಸದಿಂದ ಒಮ್ಮೆಲೇ ಹೊರಬರುವುದು ಸುಲಭವಲ್ಲ ಹಾಗೂ ಹೊರಬರಲೂಬಾರದು.

ಏಕೆಂದರೆ ಒಮ್ಮೆಲೇ ತಲೆದಿಂಬನ್ನು ತ್ಯಜಿಸಿಬಿಟ್ಟರೆ ಬೇರೆಯೇ ತೊಂದರೆಗಳು ಎದುರಾಬಹುದು. ಆದರೆ ನಿಧಾನವಾಗಿ ಈ ಅಭ್ಯಾಸಕ್ಕೆ ಒಗ್ಗಿಕೊಳ್ಳಬಹುದು. ಮೊದಲಿಗೆ ನಿಮ್ಮ ನಿತ್ಯದ ತಲೆದಿಂಬಿಗಿಂತಲೂ ಕೊಂಚ ಕಡಿಮೆ ದಪ್ಪನೆಯ ದಿಂಬನ್ನು ಉಪಯೋಗಿಸತೊಡಗಿ.

ಕೆಲವು ವಾರಗಳ ಬಳಿಕ ಒಂದು ದಪ್ಪ ಟವೆಲ್ಲನ್ನು ಈಗಿರುವ ದಿಂಬಿಗಿಂತಲೂ ಕೊಂಚ ಕಡಿಮೆ ದಪ್ಪನಿರುವಂತೆ ಮಡಚಿ ದಿಂಬಿನಂತೆ ಉಪಯೋಗಿಸಿ. ಕ್ರಮೇಣ ಒಂದೊಂದಾಗಿ ಟವೆಲ್ಲನ್ನು ಬಿಡಿಸುತ್ತಾ ಹೋಗಿ. ಕೆಲವು ವಾರಗಳ ಬಳಿಕ ತಲೆದಿಂಬಿಲ್ಲದೇ ಮಲಗಲು ಯಾವುದೇ ತೊಂದರೆ ಇರುವುದಿಲ್ಲ.

ಪ್ರತಿ ಬಾರಿಯೂ ತಲೆದಿಂಬಿನ ಎತ್ತರವನ್ನು ಕಡಿಮೆ ಮಾಡಿದಾಗ ತಲೆ ಈ ಹೊಸ ತಲೆದಿಂಬಿನ ಎತ್ತರಕ್ಕೆ ಹೊಂದಿಕೊಳ್ಳುವಂತಿರಿಸಿ ಹಾಗೂ ಇದು ಅಭ್ಯಾಸವಾಗುವವರೆಗೂ ಇದೇ ಎತ್ತರವನ್ನು ಮುಂದುವರೆಸಿ. ಬೆನ್ನಿನ ಮೇಲೆ ಮಲಗಿದ್ದಾಗ ಗದ್ದ ಮೇಲ್ಛಾವಣಿಯತ್ತ ತೋರಿಸುವಷ್ಟು ತಲೆಯನ್ನು ಹಿಂದೆ ವಾಲಿಸಬೇಡಿ.

ಟವೆಲ್ಲಿನ ಎಲ್ಲಾ ಮಡಿಕೆಗಳು ತೆರೆದು ತಲೆದಿಂಬಿಲ್ಲದೇ ಮಲಗುವ ದಿನ ಬಂದಾಗ, ಮಲಗುವ ಮುನ್ನ ಕುತ್ತಿಗೆ ಹಾಗೂ ಬೆನ್ನಿನ ಸ್ನಾಯುಗಳಿಗೆ ಆರಾಮ ನೀಡುವ ಕೆಲವು ವ್ಯಾಯಾಮಗಳನ್ನು ಮಾಡಿ ಬಳಿಕವೇ ಪವಡಿಸಿ. ಇದರಿಂದ ತಲೆದಿಂಬಿಲ್ಲದೇ ಮಲಗಿದ ಮರುದಿನ ಎದುರಾಗಬಹುದಾಗ ಕುತ್ತಿಗೆ ನೋವಿನ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

source: boldsky.com

LEAVE A REPLY

Please enter your comment!
Please enter your name here