ಈ ತರಕಾರಿಗಳನ್ನು ತಿನ್ನುವದರಿಂದ ನಿಮ್ಮ ಕಿಡ್ನಿಯನ್ನು ಸಂಪೂರ್ಣವಾಗಿ ಆರೋಗ್ಯವಾಗಿರಿಸಬಹುದು..! ಯಾವ ತರಕಾರಿಗಳು ಗೊತ್ತೇ ನೋಡಿರಿ

0
4817

ರಕ್ತದಲ್ಲಿರುವಂತಹ ಕಲ್ಮಶವನ್ನು ಹೊರಹಾಕಿ ದೇಹವು ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವಂತಹ ಕೆಲಸ ಮಾಡುವ ಅಂಗವೇ ಕಿಡ್ನಿ. ನಮ್ಮ ಕಣ್ಣಿಗೆ ಕಾಣುವಂತಹ ಅಂಗಗಳ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಿದರೂ ದೇಹದ ಒಳಗೆ ಇರುವಂತಹ ಕೆಲವು ಅಂಗಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ನಮ್ಮ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದ ಕಿಡ್ನಿ ಮೇಲೆ ಒತ್ತಡ ಬೀಳುವುದು.

ಇದಕ್ಕಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ತರಕಾರಿಗಳನ್ನು ಸೇರಿಸಿಕೊಂಡರೆ ಅದರಿಂದ ಕಿಡ್ನಿಯು ಆರೋಗ್ಯವಾಗಿರುವುದು. ಕೊಬ್ಬು, ಹೆಚ್ಚು ಸೋಡಿಯಂ ಇರುವಂತಹ ಅತಿಯಾಗಿ ಸಂಸ್ಕರಿತ ಆಹಾರ, ಪರಿಷ್ಕರಿಸಿದ ಕೊಬ್ಬು ಇತ್ಯಾದಿಗಳನ್ನು ತ್ಯಜಿಸಬೇಕು. ಕೆಲವೊಂದು ತರಕಾರಿಗಳು ಕಿಡ್ನಿಯು ತುಂಬಾ ಆರೋಗ್ಯಕರವಾಗಿ ಶುದ್ಧೀಕರಿಸಲು, ರಕ್ಷಿಸಲು ಮತ್ತು ಕಾರ್ಯನಿರ್ವಹಿಸಲು ನೆರವಾಗುವುದು. ಈ ತರಕಾರಿಗಳು ಯಾವುದು ಎಂದು ತಿಳಿಯಿರಿ.

ದೊಣ್ಣೆ ಮೆಣಸು:

ಇದರಲ್ಲಿ ಕಡಿಮೆ ಪೊಟಾಶಿಯಂನಿಂದಾಗಿ ಇದು ಕಿಡ್ನಿ ಸ್ನೇಹಿ ತರಕಾರಿಯೆಂದು ಪರಿಗಣಿಸಲಾಗಿದೆ. ಅಧಿಕ ಮಟ್ಟ ಪೊಟಾಶಿಯಂ ಇದ್ದರೆ ಅದರಿಂದ ಕಿಡ್ನಿಗೆ ಅದನ್ನು ಹೊರಹಾಕಲು ತುಂಬಾ ಕಷ್ಟವಾಗುವುದು. ಇದರಿಂದ ಕಿಡ್ನಿ ಸಮಸ್ಯೆ ಬರಬಹುದು. ಕೆಂಪು ದೊಣ್ಣೆ ಮೆಣಸಿನಲ್ಲಿ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳಾದ ವಿಟಮಿನ್ ಸಿ, ಇ ಮತ್ತು ಬಿ6 ಮತ್ತು ಇತರ ಕೆಲವು ಪೋಷಕಾಂಶಗಳಾದ ಫಾಲಿಕ್ ಆಮ್ಲ ಮತ್ತು ನಾರಿನಾಂಶವಿದೆ. ಇದನ್ನು ಸಲಾಡ್ ಗೆ ಹಾಕಿ. ಅಥವಾ ಹಸಿಯಾಗಿಯೇ ತಿನ್ನಬಹುದು. ಅಲ್ಲದೆ ಕೆಂಪು ದೊಣ್ಣೆ ಮೆಣಸನ್ನು ಅಡುಗೆಯನ್ನು ಬಳಸಿ ಕಿಡ್ನಿ ಸಮಸ್ಯೆ ನಿವಾರಿಸಿ.

Bell Pepper

ಎಲೆಕೋಸು:

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಎಲೆಕೋಸು ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ವಿಟಮಿನ್ ಕೆ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಅದರಲ್ಲಿಯೂ ಕಿಡ್ನಿಯ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ತರಕಾರಿಯಾಗಿದೆ, ಇನ್ನು ಎಲೆಕೋಸಿನಲ್ಲಿ ಪೊಟಾಶಿಯಂ ಅಂಶವಿಲ್ಲ. ಇದು ನಿಮ್ಮ ಯಕೃತ್ ಮತ್ತು ಕಿಡ್ನಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಉನ್ನತ ಮಟ್ಟದ ಫೈಥೋಕೆಮಿಕಲ್ ಇದ್ದು, ಇದು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಎಲೆಕೋಸಿನಲ್ಲಿ ಕೆಲವು ಪ್ರಮುಖ ಪೋಷಕಾಂಶಗಳಾದ ನಾರಿನಾಂಶ, ವಿಟಮಿನ್ ಬಿ6, ಕೆ, ಸಿ ಮತ್ತು ಫಾಲಿಕ್ ಆಮ್ಲವಿದೆ. ಇದು ಕಿಡ್ನಿಸ್ನೇಹಿ ಆಹಾರದಲ್ಲಿ ತುಂಬಾ ಅಗ್ಗವಾಗಿ ಸಿಗುವ ತರಕಾರಿ.

ಬೆಳ್ಳುಳ್ಳಿ:

ಬೆಳ್ಳುಳ್ಳಿಯನ್ನ ಖಾದ್ಯಗಳಲ್ಲಿ ಬಳಸಿ ಅಥವಾ ಹಸಿಯಾಗಿಯೇ ತಿನ್ನಬಹುದು. ಇದರಲ್ಲಿರುವಂತಹ ಮೂತ್ರವರ್ಧಕ ಗುಣದಿಂದಾಗಿ ಇದು ಕಿಡ್ನಿಯ ಸಂಪೂರ್ಣ ಆರೋಗ್ಯ ಕಾಪಾಡುವುದು. ಮೂತ್ರವರ್ಧಕದಿಂದಾಗಿ ಹೆಚ್ಚುವರಿ ಸೋಡಿಯಂ ಮತ್ತು ನೀರು ದೇಹದಿಂದ ಹೊರಹಾಕಲು ಕಿಡ್ನಿಗೆ ನೆರವಾಗುವುದು ಮತ್ತು ಮೂತ್ರದ ಮೂಲಕ ಸೋಡಿಯಂ ಹೊರಹೋಗುವುದು. ಲೆಡ್ ನಂತಹ ಹಾನಿಕಾರಕ ಖನಿಜದಿಂದ ಕಿಡ್ನಿಯನ್ನು ರಕ್ಷಿಸುವ ಕಾರ್ಯವು ಬೆಳ್ಳುಳ್ಳಿಯು ಮಾಡುವುದು. ಇದು ಉರಿಯೂತ, ಸೋಂಕು ನಿವಾರಣೆ ಮಾಡುವುದು ಮತ್ತು ದೇಹವನ್ನು ಶುದ್ಧೀಕರಿಸುವುದು. ಕೊಲೆಸ್ಟ್ರಾಲ್ ತಗ್ಗಿಸಿ, ನೈಸರ್ಗಿಕ ಆ್ಯಂಟಿಬಯೋಟಿಕ್ ರೀತಿ ಕೆಲಸ ಮಾಡುವುದು.

ಹೂಕೋಸು:

ಹೂಕೋಸು, ಕ್ಯಾಬೇಜ್‌ನ೦ತಹ ತರಕಾರಿಗಳ ಕುಟು೦ಬ ವರ್ಗಕ್ಕೆ ಸೇರಿದುದಾಗಿದ್ದು, ಇದು ತನ್ನಲ್ಲಿ ವಿಟಮಿನ್, ಪೋಷಕಾ೦ಶಗಳು, ಆ೦ಟಿ ಆಕ್ಸಿಡೆ೦ಟ್‌ಗಳು, ಫೈಟೋನ್ಯೂಟ್ರಿಯೆ೦ಟ್ಸ್‌ಗಳು ಹಾಗೂ ಇನ್ನೂ ಅನೇಕ ಉಪಯುಕ್ತ ಘಟಕಗಳನ್ನು ಮೆಚ್ಚತಕ್ಕ ಪ್ರಮಾಣಗಳಲ್ಲಿ ಒಳಗೊ೦ಡಿದೆ. ಹೀಗಾಗಿ, ಹೂಕೋಸಿನ ಸಲಾಡ್‌ಗಳನ್ನು ತಯಾರಿಸಲಾರ೦ಭಿಸಿರಿ, ಅಡುಗೆಯ ತಯಾರಿಕೆಯಲ್ಲಿ ಹೂಕೋಸನ್ನು ಬಳಸಲಾರ೦ಭಿಸಿರಿ ಅಥವಾ ಅದನ್ನು ಹಸಿಯಾಗಿ ಹಾಗೆಯೇ ಸೇವಿಸಲೂ ಬಹುದು. ಇನ್ನು ಹೂಕೋಸು ಮತ್ತೊಂದು ಕಿಡ್ನಿ ಸ್ನೇಹಿಯಾಗಿರುವಂತಹ ತರಕಾರಿಯಾಗಿದೆ. ಈ ತರಕಾರಿಯಲ್ಲಿ ಫಾಲಿಕ್ ಆಮ್ಲ ಮತ್ತು ನಾರಿನಾಂಶವು ಸಮೃದ್ಧವಾಗಿದೆ. ಇದು ಕಿಡ್ನಿಯನ್ನು ಶುದ್ಧೀಕರಿಸಿ, ಅದನ್ನು ಬಲಗೊಳಿಸುವುದು. ಪೊಟಾಶಿಯಂ ಪ್ರಮಾಣ ಕಡಿಮೆ ಇರುವಂತಹ ತರಕಾರಿಯನ್ನು ದೀರ್ಘಕಾಲದ ಕಿಡ್ನಿ ಸಮಸ್ಯೆ ಇರುವಂತಹವರು ಬಳಸಬಹುದು.

ಬಟಾಣಿ:

ಪೊಟಾಶಿಯಂ ಕಡಿಮೆ ಇರುವಂತಹ ಈ ಎರಡು ಹಸಿರು ತರಕಾರಿಗಳಲ್ಲಿ ನಾರಿನಾಂಶವು ಅಧಿಕವಾಗಿದೆ. ನಾರಿನಾಂಶವು ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಅತೀ ಅಗತ್ಯವಾಗಿ ಬೇಕು ಮತ್ತು ಅಧಿಕ ತೂಕ ಮತ್ತು ಮಧುಮೇಹ ನಿಯಂತ್ರಿಸುವುದು. ಇವೆರಡು ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಈ ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಮಡರೆ ಅದರಿಂದ ನಿಮ್ಮ ಕಿಡ್ನಿಯು ಆರೋಗ್ಯವಾಗಿರುವುದು.

ಮೂಲಂಗಿ:

ಹೋಟೆಲುಗಳಲ್ಲಿ ಮಾಡುವ ಸಾಂಬಾರ್‌ನಲ್ಲಿ ಅತ್ಯಂತ ಸಾಮಾನ್ಯವಾದ ತರಕಾರಿ ಎಂದರೆ ಮೂಲಂಗಿ. ಏಕೆಂದರೆ ಮೂಲಂಗಿ ಅಗ್ಗವೂ, ಸ್ವಚ್ಛಗೊಳಿಸಲು ಹೆಚ್ಚು ಶ್ರಮ ತೆಗೆದುಕೊಳ್ಳದಂತಹದ್ದೂ, ತುಂಡುಮಾಡಲು ಸುಲಭವೂ, ಬೇಗನೇ ಬೇಯುವಂತಹದ್ದೂ, ಸಾಂಬಾರಿನ ರುಚಿ ಹೆಚ್ಚಿಸುವಂತಹದ್ದೂ ಆಗಿದ್ದು ಈ ಕಾರಣಗಳಿಂದಾಗಿ ಹೋಟೆಲಿನವರಿಗೆ ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಮನೆಗಳಲ್ಲಿಯೂ ಮೂಲಂಗಿಯನ್ನು ಸಾಂಬಾರ್, ಪಲ್ಯಗಳನ್ನು ಮಾಡಲು ಉಪಯೋಗಿಸುತ್ತಾರೆ. ಇದು ಬಿಳಿ, ಕೆಂಪು ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿರುವ ಕಾರಣ ಖಾದ್ಯದಲ್ಲಿ ಕೊಂಚ ವೈವಿಧ್ಯತೆಯನ್ನೂ ಪಡೆಯಬಹುದು.

ಇದು ಕೊಂಚ ಖಾರವಾಗಿದ್ದರೂ ಹಸಿಯಾಗಿ ತಿನ್ನಬಹುದಾದ ತರಕಾರಿಯಾಗಿದ್ದು ನಿತ್ಯವೂ ಸಾಲಾಡ್‌‌ ನಲ್ಲಿ ಸೇರಿಸಿಕೊಳ್ಳಬಹುದು. ಇನ್ನು ಗರಿಮುರಿಯಾದ ಈ ತರಕಾರಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಹಾಗೂ ಪೋಷಕಾಂಶಗಳು ಹೆಚ್ಚಾಗಿರುತ್ತವೆ ಹಾಗೂ ಪೊಟ್ಯಾಶಿಯಂ, ಗಂಧಕ ಅತಿ ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಈ ಆಹಾರ ಮೂತ್ರಪಿಂಡಗಳಿಗೆ ಸೂಕ್ತವಾಆಹಾರವಾಗಿದೆ. ಮೂಲಂಗಿ ಹಸಿಯಾಗಿ ಸೇವಿಸಲು ನವಿರು ಖಾರವಾಗಿದ್ದು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡುವ ಉಪ್ಪಿಲ್ಲದ ಆಹಾರದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾಗಿದೆ.

LEAVE A REPLY

Please enter your comment!
Please enter your name here