ಶಿವರಾಜಕುಮಾರ್ ಚಿತ್ರದ ಶೂಟಿಂಗ್ ವೇಳೆ ಊರಿನ ಜನರಿಂದ ಆಕ್ರೋಶ, ಕಾರಣ್ ನೋಡಿ ಇಲ್ಲಿ

0
275

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಈಗ ಸುದ್ಧಿಯಲ್ಲಿದ್ದಾರೆ ಕಾರಣ ಅವರ ಶೂಟಿಂಗ್ ಸಮಯದಲ್ಲಿ ಸ್ವಲ್ಪ ಅಡಚಣೆ ಉಂಟಾಗಿದ್ದು,ಸಧ್ಯ ಅವರು ‘ಆನಂದ್’ ಎಂಬ ಮುಂದಿನ ಚಿತ್ರೀಕರಣದಲ್ಲಿ ತೊಡಗಿದ್ದಾರೆ.ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್ ಅವರ ಆನಂದ್ ಸಿನಿಮಾ ಬಹಳಷ್ಟು ಹಿಟ್ ಆದ ಸಿನಿಮಾ.ಜೊತೆಗೆ ಶಿವರಾಜ್ ಕುಮಾರ್ ಅವರಿಗೆ ಸಿನಿ ರಂಗ ಪ್ರವೇಶಕ್ಕೆ ದಾರಿ ಮಾಡಿ ಕೊಟ್ಟ ಸಿನಿಮಾ.ಸದ್ಯ ಈಆನಂದ್ ಹೆಸರಿನಲ್ಲಿಯೇ ಮತ್ತೆ ಇದೀಗ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ.ನಟ ಶಿವರಾಜ್‌ಕುಮಾರ್ ಅವರ ನಟನೆಯಲ್ಲಿಯೇ ಈ ಸಿನಿಮಾ ಬರುತ್ತಿದ್ದು,ಸದ್ಯ ಚಿತ್ರೀಕರಣ ಕೂಡ ಮುಂದುವರೆದಿದೆ.ಆದರೆ ಈ ಸಿನಿಮಾ ಶೂಟಿಂಗ್‌ನಿಂದ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪಿ.ವಾಸು ಕಾಂಬಿನೇಷನ್‌ ನಲ್ಲಿ ಮೂಡಿ ಬರುತ್ತಿದೆ ಆನಂದ್ ಸಿನಿಮಾ.ಸದ್ಯ ಆನಂದ್ ಸಿನಿಮಾ ಶೂಟಿಂಗ್,ದಕ್ಷಿಣ ಕನ್ನಡ ಜಿಲ್ಲೆ ಆಸುಪಾಸು ನಡೆಯುತ್ತಿದೆ.ಸದ್ಯ ಇತ್ತೀಚೆಗೆ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಸಿನಿಮಾ ಶೂಟಿಂಗ್ ನಡೆದಿದೆ.ಆದರೆ ಶೂಟಿಂಗ್ ವೇಳೆ ಸಿನಿಮಾ ತಂಡ ಧಾರ್ಮಿಕ ಭಾವನೆಗೆ ದಕ್ಕೆ ಮಾಡಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಸಿನಿಮಾಗಾಗಿ ಕೋಲಾ ಕುಣಿತದ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ ಚಿತ್ರತಂಡ.ನೈಜ ದೈವ ಸೇವೆ ಮಾಡುವ ವೇಳೆ ಧಾರ್ಮಿಕ ವಿಧಿ ವಿಧಾನ ಅನುಸರಿಸದೇ ಇಲ್ಲಿನ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗಿದೆ ಅನ್ನೋದು ಸ್ಥಳೀಯರ ವಾದವಾಗಿದೆ.ತುಳುನಾಡಿನ ಆರಾದ್ಯ ದೈವ ಕೋಲ.ಇದರ ಸೇವೆ ಮಾಡಬೇಕೆಂದರೆ ಕೆಲವೊಂದು ರೀತಿ ರಿವಾಜು ಇರಬೇಕು.ಆದರೆ ಇದೀಗ ಅದ್ಯಾವುದನ್ನೂ ಸಿನಿಮಾ ತಂಡ ಪಾಲಿಸಿಲ್ಲವಂತೆ. ಹಾಗಾಗಿ ಸ್ಥಳೀಯರಿಗೆ ಇದು ಕೋಪ ತರಿಸಿದೆ ಎಂದು ಹೇಳಲಾಗುತ್ತಿದೆ.ಏನೇ ಆಗಲಿ ಬೇಗ ಚಿತ್ರತಂಡ ಈ ಇದನ್ನು ಬಗೆಹರಿಸಿಕೊಂಡು ಶೂಟಿಂಗ್ ಅನ್ನು ಮುಂದುವರಿಸಲಿ ಎಂಬುದು ಅಭಿಮಾನಿಗಳ ಆಸೆ ಸುದ್ದಿ ಕೃಪೆ ಬಾಲ್ಕನಿ ನ್ಯೂಸ್ ಕನ್ನಡ.

LEAVE A REPLY

Please enter your comment!
Please enter your name here