ಕುರುಕ್ಷೇತ್ರ ಚಿತ್ರದ ಕಳಪೆ ಟ್ರೈಲರ್ ಬಗ್ಗೆ ಜನರು ಬೈದಿದ್ದಕ್ಕೆ ಚಿತ್ರತಂಡ ಏನ್ ಮಾಡಿದೆ ಗೊತ್ತೇ ನೋಡಿ ಇಲ್ಲಿ

0
180

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿರುವ ಕುರುಕ್ಷೇತ್ರ ಸಿನಿಮಾದ ಟ್ರೈಲರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ.ಸುಮಾರು ಎರಡು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಟ್ರೈಲರ್ ರಿಲೀಸ್ ಆಗುತ್ತಿರುವುದು ಭಾರಿ ಸಂತಸ ತಂದಿದ್ದು.ಡಿ ಬಾಸ್ ಅಭಿಮಾನಿಗಳಿಗಂತು ಕುರುಕ್ಷೇತ್ರ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗುತ್ತಿರುವುದು ದೊಡ್ಡ ಹಬ್ಬವಾಗಿತ್ತು.ಯಾಕಂದ್ರೆ ದರ್ಶನ್ ಅವರ 50ನೇ ಸಿನಿಮಾ ಇದಾಗಿದೆ,ಜೊತೆೆಗೆ ಇದೊಂದು ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾ ಹಾಗಾಗಿಯೆ ಸಜವಾಗಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿತ್ತು.ಅಭಿಮಾನಿಗಳ ಬಹು ದಿನಗಳ ಆಸೆಯಂತೆ ಕುರುಕ್ಷೇತ್ರ ಟ್ರೈಲರ್ ರಿಲೀಸ್ ಆಗಿದೆ.ಆದ್ರೀಗ ಈಟ್ರೈಲರ್ ದರ್ಶನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ಟ್ರೈಲರ್ ರಿಲೀಸ್ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಹೊಗಳಿಕೆಗಿಂತ ತೆಗಳಿಕೆಯೆ ಹೆಚ್ಚಾಗಿ ಬರುತ್ತಿವೆ.ಅಲ್ಲದೆ ಈಟ್ರೈಲರ್ ಈಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ.ಟ್ರೈಲರ್ ಅಂತ ಹೇಳಿ ಟೀಸರ್ ರಿಲೀಸ್ ಮಾಡಿದ್ದಾರೆ ಅಂತ ಹೇಳುತ್ತ ನಿರ್ಮಾಪಕ ಮುನಿರತ್ನ ಅವರಿಗೆ ಸರಿಯಾಗಿ ಮಂಗಳಾರತಿ ಮಾಡುತ್ತಿದ್ದಾರೆ.

ಇದನ್ನು ಗಮನಿಸಿದ ಚಿತ್ರತಂಡ ಈಗ ಯೂಟ್ಯೂಬ್ ನಲ್ಲಿ ಕಮೆಂಟ್ಸ್ ಬಾಕ್ಸ್ ಅನ್ನು ಹೈಡ್ ಮಾಡಿದೆ.ಕಮೆಂಟ್ ಬಾಕ್ಸ್ ನಲ್ಲಿ ಹೆಚ್ಚಾಗಿ ನೆಗೆಟಿವ್ ಕಮೆಟ್ಸ್ ಗಳೇ ಹರಿದು ಬರುತ್ತಿರುವ ಕಾರಣ ನೆಟ್ಟಿಗರು ಮಾಡಿರುವ ಕಮೆಂಟ್ಸ್ ಕಾಣದಂತೆ ಮಾಡಲಾಗಿದೆ.ಹಾಗಾಗಿ ಯೂಟ್ಯೂಬ್ ನಲ್ಲಿ ಯಾರಾದ್ರು ಕಮೆಂಟ್ಸ್ ಮಾಡಿದ್ರೆ ಅದೀಗ ಯಾರಿಗೂ ಕಾಣುತ್ತಿಲ್ಲ.

LEAVE A REPLY

Please enter your comment!
Please enter your name here