ಕಿಚ್ಚ ಸುದೀಪ್ ಅವರ ಜೊತೆ ಡಾನ್ಸ್ ಮಾಡಿದ್ದಕ್ಕೆ ಬೈಸಿಕೊಂಡ ಸಲ್ಮಾನ್ ಖಾನ್,ಕಾರಣ ಏನ್ ಗೊತ್ತೇ ನೋಡಿ

0
306

ನಟ ಸುದೀಪ್ ಡ್ಯಾನ್ಸ್ ಮಾಡುವುದು ತೀರ ಕಡಿಮೆ.ಅವರೇ ಅನೇಕ ಬಾರಿ ತಾವು ಡ್ಯಾನ್ಸ್ ನಲ್ಲಿ ವೀಕ್ ಅಂತ ಹೇಳುತ್ತಾರೆ.ಡ್ಯಾನ್ಸ್ ಬಗ್ಗೆ ಹೆಚ್ಚು ಆಸಕ್ತಿ ತೋರದ ಸುದೀಪ್ ಈಗ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.ಡ್ಯಾನ್ಸ್ ಕಿಂಗ್ ಪ್ರಭುದೇವ ಇದ್ದ ಮೇಲೆ ಡ್ಯಾನ್ಸ್ ಮಾಡಲು ಇನ್ನೆನ್ನು ಬೇಕು ಹೇಳಿ.ಸುದೀಪ್ ರನ್ನು ಈರೀತಿ ಕುಣಿಸಿರುವುದು ಪ್ರಭುದೇವ.ಜೊತೆಗೆ ಸಲ್ಮಾನ್ ಖಾನ್ ಸಹ ಸುದೀಪ್ ಗೆ ಸಾಥ್ ನೀಡಿದ್ದಾರೆ,ಸಲ್ಮಾನ್ ಜೊತೆಗೂಡಿ ಪ್ರಭುದೇವ ಸ್ಟೈಲ್ ನಲ್ಲಿ ಕಿಚ್ಚ ಡ್ಯಾನ್ಸ್ ಮಾಡಿದ್ದಾರೆ.ಪ್ರಭುದೇವ ಡ್ಯಾನ್ಸ್ ಶೈಲಿ ಸಖತ್ ಡಿಫರೆಂಟ್ ಆಗಿರುತ್ತದೆ.ತಮ್ಮ ಶೈಲಿಯನ್ನು ಸಲ್ಮಾನ್ ಹಾಗೂ ಸುದೀಪ್ ಗೆ ಪ್ರಭುದೇವ ಹೇಳಿ ಕೊಟ್ಟಿದ್ದಾರೆ.ಈವಿಡಿಯೋವನ್ನು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಸಲ್ಮಾನ್ ಖಾನ್ ನಟನೆಯ ದಬಾಂಗ್ ಮೂರನೇ ಅವತರಣಿಕೆಯಲ್ಲಿ ಸುದೀಪ್ ಅವರು ಇದ್ದಾರೆ.

ಈಚಿತ್ರದ ಒಂದು ಬಹು ಮುಖ್ಯ ಪಾತ್ರದಲ್ಲಿ ಕಿಚ್ಚ ಅಭಿನಯಿಸುತ್ತಿದ್ದಾರೆ.ಪ್ರಭುದೇವ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.ಈಗಾಗಲೇ ಬಾಲಿವುಡ್ ನಲ್ಲಿ ಸಿನಿಮಾ ಮಾಡಿರುವ ಕಿಚ್ಚ ಇದೇ ಮೊದಲ ಬಾರಿಗೆ ಸಲ್ಮಾನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.ದಬಾಂಗ್3 ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ,ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ಗೆ ಪ್ರಭುದೇವ ಊರ್ವಶಿ ಹಾಡಿಗೆ ನೃತ್ಯ ಹೇಳಿಕೊಡುತ್ತಿರುವ ತಮಾಷೆಯ ವಿಡಿಯೋವನ್ನು ಸಲ್ಮಾನ್ ತಮ್ಮ ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.ಈವಿಡಿಯೋ ನೋಡಿದ ಟ್ವಿಟರಿಗರು ಈಗ ಸಲ್ಮಾನ್ ರನ್ನು ಟ್ರೋಲ್ ಮಾಡಿದ್ದಾರೆ.ಸಲ್ಮಾನ್ ಖಾನ್ ಮೇಲಿನ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಜೈಲಿನಲ್ಲಿರಬೇಕಾಗಿದ್ದ ವ್ಯಕ್ತಿ ಇಲ್ಲಿ ಡ್ಯಾನ್ಸ್ ಮಾಡಿಕೊಂಡು ಮಜಾ ಮಾಡುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.

ಕಿಚ್ಚ ಸುದೀಪ್ ಇಂದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಾರೆ.ಈಬಗ್ಗೆ ನಿನ್ನೆ ಸಂಜೆ(ಜುಲೈ 9)ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಕಿಚ್ಚ ಸುದೀಪ್ ನಾಳೆ11 ಗಂಟೆಗೆ ಅಭಿಮಾನಿಗಳ ಜೊತೆ ಒಂದು ಸಂತೋಷದ ವಿಚಾರ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.ಅಭಿನಯ ಚಕ್ರವರ್ತಿ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.ಸುದೀಪ್ ಯಾವ ಸಂತಸದ ವಿಚಾರವನ್ನು ಹಂಚಿಕೊಳ್ಳಲಿದ್ದಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಸುದೀಪಿಯನ್ಸ್.ಮೊನ್ನೆ ಮೊನ್ನೆಯಷ್ಟೆ ಬಹುನಿರೀಕ್ಷೆಯ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು ಚಿತ್ರತಂಡ.

ಇವತ್ತು ಕಿಚ್ಚ ಹೇಳುತ್ತಿರುವ ಸಂತಸದ ವಿಚಾರ ಆಡಿಯೋ ರಿಲೀಸ್ ಗೆ ಸಂಬಂದಪಟ್ಟಿದ್ದ ಅಥವಾ ಪೈಲ್ವಾನ್ ಸಿನಿಮಾಗೆ ಸಂಬಂದಪಟ್ಟ ವಿಚಾರ ಇದ್ದರು ಇರಬಹುದು ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.ಅಲ್ಲದೆ ಆಡಿಯೋ ರಿಲೀಸ್ ಗೂ ಮುನ್ನವೆ ಪೈಲ್ವಾನ್ ಸಿನಿಮಾದ ಆಡಿಯೋ ಬಿಟ್ ಅನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದರು ಅಚ್ಚರಿ ಇಲ್ಲ.ಸುದೀಪ್ ಕಡೆಯಿಂದ ಯಾವ ಸುದ್ದಿ ಹೊರಬೀಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.ಅಲ್ಲದೆ ನಾಳೆ(ಜುಲೈ 11) ಪೈಲ್ವಾನ್ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲಿದೆ ಚಿತ್ರತಂಡ.ಒಟ್ನಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಗಳನ್ನು ನೀಡುತ್ತಿರುವ ಅಭಿಮಾನಿಯ ಚಕ್ರವರ್ತಿ ಇಂದು ನೀಡುವ ಸರ್ಪ್ರೈಸ್ ಏನಾಗಿರಲಿದೆ ಎನ್ನುವುದು 11ಗಂಟೆಗೆ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here