ಡಾ.ರಾಜ್ ಕುಟುಂಬದಿಂದ ಮೊಟ್ಟ ಮೊದಲ ಬಾರಿಗೆ ಚಿತ್ರರಂಗಕ್ಕೆ ಹೀರೋಯಿನ್ ಬರುತ್ತಿದ್ದಾರೆ

0
490

ಕನ್ನಡ ಚಿತ್ರರಂಗದ ಹಿರಿಯ ನಟ ಕನ್ನಡಿಗರ ಕಣ್ಮಣಿ ರಾಜಕುಮಾರ ವಾರ ಕುಟುಂಬದಿಂದ ಈಗಾಗಲೇ ಹಲವಾರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ,ಅವರ ಮಕ್ಕಳಾದ ಶಿವಣ್ಣ ಪುನೀತ್ ರಾಘಣ್ಣ ಅವರನ್ನ ಹೊರತುಪಡಿಸಿದರೆ ಕಳೆದ ಎರಡು ವರ್ಷಗಳ ಹಿಂದೆ ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಮಗ ವಿನಯ್ ರಾಜಕುಮಾರ್ ಕೂಡಾ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ.ಸದ್ಯಕ್ಕಿರುವ ಮಾಹಿತಿ ಏನೆಂದರೆ ರಾಜಕುಮಾರ್ ಅವರ ಮೊಮ್ಮಗಳು ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿದ್ದು ಇದು ಮೊದಲ ಬಾರಿ ರಾಜ್ ಕುಟುಂಬದಿಂದ ನಟಿಯೊಬ್ಬರು ಬರುತ್ತಿದ್ದಾರೆ.ಇನ್ನು ಅಣ್ಣಾವ್ರ ಮಗಳು ಪುರ್ಣಿಮಾ ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಜ್​ಕುಮಾರ್ ‘ದಾರಿ ತಪ್ಪಿದ ಮಗ’ ಚಿತ್ರದೊಂದಿಗೆ ಸಿನಿರಂಗದಲ್ಲಿ ದಾರಿ ಹುಡುಕಲು ಹೊರಟಿದ್ದಾರೆ.ಹಾಗೆಯೇ ಶಿವರಾಜ್​ ಕುಮಾರ್ ಅವರ ಪುತ್ರಿ ನಿವೇದಿತಾ ಹೇಟ್ಯೂ ರೋಮಿಯೋ ಎಂಬ ವೆಬ್​ ಸಿರೀಸ್ ಮೂಲಕ ಬಣ್ಣದ ಲೋಕದಲ್ಲಿ ನಿರ್ಮಾಪಕಿಯಾಗಿ ಕಾಲಿರಿಸಿದ್ದಾರೆ.ಇವೆಲ್ಲದರ ಬೆನ್ನಲ್ಲೇ ಇದೀಗ ರಾಜ್​ ವಂಶದಿಂದ ನಾಯಕಿಯೊಬ್ಬರ ಎಂಟ್ರಿ ಸುದ್ದಿ ಎಲ್ಲರ ಗಮನ ಸೆಳೆದಿದೆ.

ಅಂದಹಾಗೆ ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ಶೀಘ್ರದಲ್ಲೇ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲಿದ್ದಾರೆ.ಪುರ್ಣಿಮಾ ಮತ್ತು ರಾಮ್ ಕುಮಾರ್ ಅವರ ಮಗಳಾದ ಧನ್ಯಾ ವರ್ಷಗಳ ಹಿಂದೆಯೇ ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ಇರುವುದಾಗಿ ತಿಳಿಸಿದ್ದರು.ಆದರೆ ಆ ಬಳಿಕ ಅಣ್ಣಾವ್ರ ಮೊಮ್ಮಗಳು ಎಲ್ಲೂ ಕಾಣಿಸಿಕೊಂಡಿರಲಿಲ್ಲ.ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಾಯಕ ಸೂರಜ್ ಗೌಡ ಅಭಿನಯಿಸುವ ಹೊಸ ಚಿತ್ರದಲ್ಲಿ ‘ರಸಿಕರ ರಾಜ’ ಅಲ್ಲಿ ಮೊಮ್ಮಗಳು ಬಣ್ಣ ಹಚ್ಚಲಿದ್ದಾಳೆ.

ಇನ್ನೂ ಹೆಸರಿಡದ ಸಿನಿಮಾಗೆ ಆಯಕ್ಷನ್ ಕಟ್ ಹೇಳುತ್ತಿರುವುದು ಕೂಡ ಹೊಸ ನಿರ್ದೇಶಕ ಸುಮನ್ ಜಾದುಗರ್.ಕನಡದ ಸಿಲಿಕಾನ್ ಸಿಟಿ ತಮಿಳಿನ ಉತ್ತಮ ವಿಲನ್ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಸುಮನ್,ಹೊಸ ಕಥೆಯೊಂದಿಗೆ ಡೈರೆಕ್ಟರ್ ಕ್ಯಾಪ್ ಧರಿಸಲು ಅಣಿಯಾಗುತ್ತಿದ್ದಾರೆ.ಸಧ್ಯದಲ್ಲೇ ಅಣ್ಣಾವ್ರ ಕುಟುಂಬದಿಂದ ಕನ್ನಡಕ್ಕೆ ಒಬ್ಬ ನಟಿ ತೆರೆ ಮೇಲೆ ಬರಲಿದ್ದಾರೆ ಮೂಲ ಸುದ್ದಿ ನ್ಯೂಸ್18 ಕನ್ನಡ.

LEAVE A REPLY

Please enter your comment!
Please enter your name here