ಭಾರತೀಯ ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಗಳಿಸುತ್ತಿದೆ ಇಂಗ್ಲೀಷಿನ ಅವೆಂಜರ್ಸ್ ಚಿತ್ರ

0
79

ಸಾಮಾನ್ಯವಾಗಿ ಭಾರತದ ಮಾರುಕಟ್ಟೆಗಳಲ್ಲಿ ಹಾಲಿವುಡ್ ಚಿತ್ರಗಳಿಗೆ ಅಷ್ಟೇನು ಮಾರುಕಟ್ಟೆ ಇಲ್ಲ ಆದರೆ ಅವೆಂಜರ್ಸ್ ಎಂಬ ಹಾಲಿವುಡ್ಡಿನ ಈ ಚಿತ್ರ ಇದೆಲ್ಲವನ್ನು ಬದಲಿಸಿ ಬಿಟ್ಟಿದೆ,ಹಿಂದಿ ಚಿತ್ರಗಳಿಗಿಂತಲೂ ದುಪ್ಪಟ್ಟು ಗಳಿಕೆಯನ್ನು ಮಾಡುತ್ತಿದೆ.ಮಾರ್ವೆಲ್ ಸ್ಟುಡಿಯೊಸ್ ನಿರ್ಮಿಸಿರುವ ಅವೆಂಜರ್ಸ್ ಸರಣಿಯ ಕೊನೆಯ ಚಿತ್ರ ‘ಅವೆಂಜರ್ಸ್ ಎಂಡ್ ಗೇಮ್’ ಭಾರತದಲ್ಲೇ ಕಳೆದ ವಾರವಷ್ಟೇ ಸುಮಾರು ಮೂರು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು ಹಾಗು ಬಿಡುಗಡೆ ಆದ ಮೊದಲ ದಿನವೇ ಬರೋಬ್ಬರಿ 56ಕೋಟಿ ಗಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಇತಿಹಾಸವನ್ನೇ ನಿರ್ಮಿಸಿದೆ.

ಸರಿ ಸುಮಾರು ನಾಲ್ಕು ಸಾವಿರ ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಜಗತ್ತಿನಾದ್ಯಂತ ಮೊದಲ ದಿನವೇ ಬರೋಬ್ಬರಿ ಒಂದು ಸಾವಿರ ಕೋಟಿ ಗಳಿಸಿದೆ ಮತ್ತು ಭಾರತದಲ್ಲಿ ಇದುವರೆಗೆ 350ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ.

LEAVE A REPLY

Please enter your comment!
Please enter your name here