ಸುಮಲತಾ ಅಂಬರೀಷ್ ಅವರನ್ನ ಗೆಲ್ಲಿಸಲು ತಯಾರಾಗಿದ್ದಾರೆ ದರ್ಶನ್ ಮತ್ತು ಯಶ್.

0
294

ಸುಮಲತಾ ಅಂಬರೀಷ್ ಅವರ ರಾಜಕೀಯ ನಡೆ ಬಗ್ಗೆ ಇದ್ದ ಊಹೆಗಳಿಗೆಲ್ಲ ಈಗ ಸಂಪೂರ್ಣ ತೆರೆ ಬಿದ್ದಿದ್ದು ಸುಮಲತಾ ಅವರು ಈಗ ರಾಜಕೀಯಕ್ಕೆ ಬರಲು ಸಜ್ಜಾಗಿದ್ದಾರೆ.ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರು ಕಣಕ್ಕೆ ಇಳಿದು ಸ್ಪರ್ಧಿಸಲಿದ್ದಾರೆ.

ಈಗ ಸುಮಲತಾ ಅಂಬರೀಷ್ ಅವರಿಗೆ ಕನ್ನಡದ ಇಬ್ಬರು ಟಾಪ್ ನಟರು ಬೆಂಬಲ ನೀಡುತ್ತಿದ್ದಾರೆ,ಹೌದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಗೆಲುವಿಗಾಗಿ ಬಹಳ ಶ್ರಮಿಸುತ್ತಿದ್ದಾರೆ.ಬಹಳ ವರ್ಷಗಳಿಂದಲೂ ಅಂಬಿ ಕುಟುಂಬಕ್ಕೆ ಆಪ್ತರಾಗಿರುವ ದರ್ಶನ್ ಅವರು ಇವರ ಪರ ಪ್ರಚಾರ ಮಾಡುತ್ತಿದ್ದಾರೆ.ಇವರಷ್ಟೇ ಅಲ್ಲದೆ ಸುಮಲತಾ ಅವರಿಗೆ ನಟ ದೊಡ್ಡಣ್ಣ ಅವರು ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕೂಡಾ ಪ್ರಚಾರ ಮಾಡಲು ಮುಂದಾಗಿದ್ದಾರೆ,ಒಟ್ಟಿನಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ನಿಂತಿರುವ ಸುಮಲತಾ ಅಂಬರೀಷ್ ಅವರಿಗೆ ದೊಡ್ಡ ಮಟ್ಟದ ಬೆಂಬಲವೇ ಇದೆ.

LEAVE A REPLY

Please enter your comment!
Please enter your name here