ಮೀ-ಟೂ ಕೇಸ್ ಶ್ರುತಿ ಹರಿಹರನ್ ಗೆ ದೊಡ್ಡ ಆಘಾತ! ಏನ್ ಆಗಿದೆ ಗೊತ್ತಾ??

0
662

ನಿಮಗೆ ಎಲ್ಲಾ ಗೊತ್ತಿರುವ ಹಾಗೆ ಸುಮಾರು ಒಂದು ತಿಂಗಳು ಹಿಂದೆ ಕನ್ನಡದಲ್ಲಿ ಮೀ-ಟೂ ಹಾವಳಿ ಬಹಳ ಜಾಸ್ತಿ ಆಗಿತ್ತು. ಕನ್ನಡದ ಖ್ಯಾತ ನಟಿ ಶ್ರುತಿ ಹರಿಹರನ್ ಅವರು ದಕ್ಷಿಣ ಭಾರತದ ಸೂಪರ್ ಸ್ಟಾರ್ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯ ದ ಕೇಸ್ ಹಾಕಿದ್ದರು. ಶ್ರುತಿ ಹರಿಹರನ್ ಹಾಗು ಅರ್ಜುನ್ ಸರ್ಜಾ ಅವರನ್ನ ಸಂಧಾನ ಮಾಡಲು ನಮ್ಮ ಚಿತ್ರರಂಗದ ಹಿರಿಯರೆಲ್ಲಾ ಬಂದಿದ್ದರು.

ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಇವರಿಬ್ಬರ ಹತ್ತಿರ ಮಾತನಾಡಿ ಕೊನೆಗೆ ಈ ಕೇಸ್ ಅನ್ನು ಕೋರ್ಟ್ ಗೆ ಹಾಕಲಾಯಿತು. ಈಗ ಬಲ್ಲ ಮೂಲಗಳ ಪ್ರಕಾರ ಈ ಕೇಸ್ ನಲ್ಲಿ ಶ್ರುತಿ ಹರಿಹರನ್ ಅವರಿಗೆ ಭಾರಿ ಮುಖಬಂಗವಾಗಿದೆ ಎಂದು ತಿಳಿದು ಬಂದಿದೆ. ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ದೂರು ಕೊಟ್ಟಿರುದು ನಿಜ.

ಪೊಲೀಸ್ ರು ಈ ವಿಷಯದ ಬಗ್ಗೆ ಸಾಕ್ಷಿ ಇಲ್ಲದ ಕಾರಣ ಈಗ ಬಿ ರಿಪೋರ್ಟ್ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಈಗ ಶ್ರುತಿ ಹರಿಹರನ್ ಅವರು ತಮ್ಮ ಬಳಿ ಎಲ್ಲಾ ಸಾಕ್ಷಿಗಳು ಇವೆ, ವಿಡಿಯೋ ಇದೆ, ಸಿನಿಮಾ ಸೆಟ್ ನಲ್ಲಿ ಇದ್ದ ಬೇರೆ ತಂತ್ರಜ್ಞರು ಇದನ್ನ ನೋಡಿದ್ದಾರೆ ಎಂದು ಎಲ್ಲಾ ಹೇಳಿದ್ದರು. ಆದರೆ ಪೊಲೀಸ್ ರು ಕೇಳಿದಾಗ ಶ್ರುತಿ ಹರಿಹರನ್ ಹತ್ತಿರ ಯಾವುದೇ ಸಾಕ್ಷಿ ಆಧಾರಗಳು ಇರಲಿಲ್ಲ.

ಅದಲ್ಲದೆ ಅರ್ಜುನ್ ಸರ್ಜಾ ಅವರು ಕೂಡ ಕನ್ನಡ ಚಿತ್ರರಂಗದ ಗಣ್ಯರ ಮುಂದೆ ಏನೇ ಆಗಲಿ ನಾನು ತಪ್ಪು ಮಾಡಿಲ್ಲ, ಯಾವ ಸಾಕ್ಷಿಯನ್ನಾದರೂ ಕೇಳಿ, ಯಾರನ್ನಾದರೂ ಕೇಳಿ, ನಾನು ಕೋರ್ಟ್ ಗೆ ಹೋಗೆ ಹೋಗುತ್ತೇನೆ ಎಂದು ಬಹಳ ಕಾಂಫಿಡೆಂಟ್ ನಿಂದ ಹೇಳಿದ್ದರು. ಈಗ ಇದೆ ರೀತಿ ಈಗ ಸಧ್ಯ ಪೊಲೀಸ್ ರು ಈ ಕೇಸ್ ನ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.

ಇಷ್ಟೇ ಅಲ್ಲದೆ ಈ ಹಿಂದೆ ವಾರಕ್ಕೆ ಎರಡು ಮೂರೂ ಚಿತ್ರಗಳ ಆಫರ್ ಬರುತ್ತಿದ್ದ ಶ್ರುತಿಗೆ ಈಗ ತಿಂಗಳಿಗೆ ಒಂದು ಬರುವುದು ಕೂಡ ಕಷ್ಟವಾಗಿದೆ. ಇತ್ತ ಕೋರ್ಟ್ ಕೇಸ್ ನ ಸೋಲು, ಅತ್ತ ಚಿತ್ರಗಳಲ್ಲಿ ಅವಕಾಶ ಇಲ್ಲ. ಎಲ್ಲಾ ಬೆಳವಣಿಗೆಯಿಂದ ಶ್ರುತಿ ಅವರು ಆಘಾತಗೊಂಡಿದ್ದಾರೆ.

ಶ್ರುತಿ ಅವರು ಈ ಎಲ್ಲ ವಿಚಾರಗಳನ್ನು ತಮ್ಮ ಪರಿಚಯಸ್ಥರ ಬಳಿ ಹೇಳಿಕೊಂಡು ತುಂಬಾ ಅತ್ತಿದ್ದಾರೆ,ನೊಂದಿದ್ದಾರೆ. ಎಂದು ತಿಳಿದು ಬಂದಿದೆ. ಈ ಎಲ್ಲಾ ಬೆಳವಣಿಗೆಯಿಂದ ತುಂಬಾ ಘಾಸಿಗೊಂಡು ಬಹಳ ಆಘಾತಗೊಂಡಿದ್ದಾರಂತೆ ಶ್ರುತಿ ಹರಿಹರನ್.

ಕೇಸ್ ಏನಾದರು ಉಲ್ಟಾ ಹೊಡೆದರೆ ಅರ್ಜುನ್ ಸರ್ಜಾ ಅವರು ಮಾನನಷ್ಟ ಮೊಕದ್ದಮೆ ಹಾಕಬಹುದು, ಆಗ ಶ್ರುತಿ ಅವರು ಜೈಲಿಗೆ ಹೋಗುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಕನ್ನಡದಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆಯುವ ಎಲ್ಲ ಲಕ್ಷಣಗಳು ಇದ್ದ ಶ್ರುತಿ ಅವರು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗದು.

LEAVE A REPLY

Please enter your comment!
Please enter your name here