ಮತ್ತೆ ಹೊಸ ತಂತ್ರಜ್ನ್ಯಾನದೊಂದಿಗೆ ಶುರು ಆಗುತ್ತಿದೆ ಶಂಕರ್ ನಾಗ್ ಚಿತ್ರಮಂದಿರ

0
50

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಶಂಕರ್ ನಾಗ್ ಚಿತ್ರಮಂದಿರ ಎರಡು ವರ್ಷಗಳ ಹಿಂದೆ ಮುಚ್ಚಿಹೋಗಿತ್ತು ಇದು ಶಂಕರ್ ನಾಗ್ ಅವರ ಅಭಿಮಾನಿಗಳಲ್ಲಿ ತುಂಬಾ ನಿರಾಶೆ ಕೂಡಾ ಮಾಡಿತ್ತು,ಆದರೆ ಈಗ ಅಭಿಮಾನಿಗಳಲ್ಲಿ ಸಂತೋಷದ ವಿಷಯ ಏನೆಂದರೆ ಈ ಚಿತ್ರಮಂದಿರವನ್ನು ಮತ್ತೆ ಶುರು ಮಾಡಲಿದ್ದಾರೆ ಅದು ಕೂಡಾ ಹೊಸ ತಂತ್ರಜ್ಞಾನದೊಂದಿಗೆ.

ಈ ಚಿತ್ರಮಂದಿರಕ್ಕೆ ಶಂಕರ್ನಾಗ್ ಸ್ವಾಗತ್ ಓನಿಕ್ಸ್ ಎಂದು ಮರುನಾಮಕರಣ ಮಾಡಿದ್ದು ಈ ಚಿತ್ರಮಂದಿರದಲ್ಲಿ ಹದಿನಾಲ್ಕು ಮೀಟರ್ ಉದ್ದದ ಹೊಸ ಪರದೆ ಇರಲಿದ್ದು ಇದು ತ್ರಿಡಿ ತಂತಜ್ಞಾನವನ್ನು ಸಹ ಹೊಂದಿರುತ್ತದೆ.ಈ ಪರದೆ ಭಾರತದಲ್ಲೇ ಮೊದಲಾಗಿದ್ದು ನಮ್ಮ ಶಂಕರ್ ನಾಗ್ ಅವರ ಚಿತ್ರಮಂದಿರಕ್ಕೆ ಬಂದಿದೆ ಎನ್ನುವುದು ಖುಷಿಯ ವಿಷಯ,ಈ ಚಿತ್ರಮಂದಿರದಲ್ಲಿ ಬರೋಬ್ಬರಿ 560 ಆಸನಗಳು ಇದ್ದು ಮೂವತ್ತೆಂಟು ವರ್ಷಗಳ ಕಾಲ ಜನರಿಗೆ ಮನರಂಜನೆ ನೀಡಿದೆ.

LEAVE A REPLY

Please enter your comment!
Please enter your name here