ಭಾರತದಲ್ಲಿ ‘ಟಿಕ್ ಟಾಕ್’ ಬ್ಯಾನ್ ಮಾಡಿದ್ದಕ್ಕೆ ಎಷ್ಟು ಕೋಟಿ ನಷ್ಟ ಆಗಿದೆ ಗೊತ್ತೇ ನೋಡಿ ಇಲ್ಲಿ.

0
414

ಇದು ಟಿಕ್ ಟಾಕ್ ಯುಗ ಪ್ರತಿಯೊಬ್ಬ ಕಾಲೇಜು ಯುವಕ ಯುವತಿಯರ ನೆಚ್ಚಿನ ಮೊಬೈಲ್ ಅಪ್ಲಿಕೇಶನ್ ಕೂಡಾ ಹೌದು,ಟಿಕ್ ಟಾಕ್ ಒಂದು ಮನರಂಜನೆಯ ಅಪ್ಲಿಕೇಶನ್ ಇದರಲ್ಲಿ ಜನರು ತಮ್ಮ ನಟನಾ ಪ್ರತಿಭೆಯನ್ನು ತೋರಿಸುತ್ತಾರೆ ಹೀಗಾಗಿ ಭಾರತದಲ್ಲಿ ಟಿಕ್ ಟಾಕ್ ತುಂಬಾ ಪ್ರಸಿದ್ದಿ ಪಡೆದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಇದರಿಂದ ತುಂಬಾ ಹಾನಿ ಆಗುತ್ತಿದ್ದು ಯುವಕ ಯುವತಿಯರು ಇದರಲ್ಲೇ ಜಾಸ್ತಿ ಸಮಯ ವ್ಯರ್ಥ ಮಾಡುತ್ತಿದ್ದು ಇದರಿಂದ ಕೆಲ ಪ್ರಾಣ ಹಾನಿಗಳು ಸಹ ಆಗಿವೆ,ಇದರಿಂದ ಸರ್ಕಾರವು ಕಳೆದ ವಾರ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ನಿಷೇಧ ಮಾಡಿತ್ತು.ಟಿಕ್ ಟಾಕ್ ಬ್ಯಾನ್ ಆಗಿದ್ದೆ ತಡ ಎಷ್ಟೋ ಜನರ ಮನರಂಜನೆಯನ್ನು ಕಟ್ಟಿ ಹಾಕಿದಂತಿತ್ತು.

ಬಳಿಕ ಟಿಕ್ ಟಾಕ್ ಕಂಪನಿ ಕೋರ್ಟ್ ಮೊರೆ ಹೋಗಿದ್ದು ತಮಗೆ ಪ್ರತಿದಿನ 3.5 ಕೋಟಿ ರೂಪಾಯಿಗಳಷ್ಟು ನಷ್ಟ ಆಗುತ್ತಿದೆ ಎಂದು ಹೇಳಿದೆ ಹಾಗು ಕೂಡಲೇ ಇದರ ಬಗ್ಗೆ ವಿಚಾರಿಸಿ ನಿಷೇಧವನ್ನು ತೆರವು ಗೊಳಿಸಬೇಕೆಂದು ಕೇಳಿಕೊಂಡಿದೆ.ನಷ್ಟವಲ್ಲದೆ ತಮ್ಮ ನೂರಾರು ಹುದ್ದೆಗಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿಕೊಂಡಿದೆ.

LEAVE A REPLY

Please enter your comment!
Please enter your name here