ಬಿಯರ್ ಬಾಟಲ್ ತಲೆಗೆ ಬಿದ್ದು ಆಸ್ಪತ್ರೆ ಸೇರಿದ ಟಾಪ್ ನಟಿ ಯಾರು ಗೊತ್ತಾ ಆ ನಟಿ ನೋಡಿರಿ.

0
290

ಯಾವಾಗ ಏನಾಗುತ್ತದೆ ಎಂದು ಯಾರು ಕೂಡ ಊಹೆ ಮಾಡುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ನಡೆಯುವ ಘಟನೆಗಳು ಮನುಷ್ಯನ ಊಹೆಗೂ ಸಿಗುವುದಿಲ್ಲ, ಹೌದು… ಕಬಾಲಿ ಚಿತ್ರದಲ್ಲಿ ಸೂಪರ್​ ಸ್ಟರ್​ ರಜನಿಕಾಂತ್​ ಅವರ ಮಗಳಾಗಿ ನಟಿಸಿದ್ದ ಸಾಯಿ ಧನ್ಸಿಕಾ ಅವರು ಸಧ್ಯ ಕನ್ನಡದ ಚಿತ್ರಗಳಾದ ಉದ್ಘರ್ಷ ಮತ್ತು ಕಿತ್ನಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ತಮಿಳಿಸನ ಲೇಡಿ ಸೂಪರ್​ ಸ್ಟಾರ್​ ಆಗಿ ಬೆಳೆಯುತ್ತಿದ್ದ ಧನ್ಸಿಕ ಅಲ್ಲಿಯೂ ಕೆಲವು ಚಿತ್ರಗಳಲ್ಲಿ ಬ್ಯುಸಿ ಇದ್ದರು, ಆದರೆ ಈಗ ಆಕೆಗೆ ದೊಡ್ಡ ಆಘಾತವೇ ಎದುರಾಗಿದೆ. ತಮಿಳಿನ ಚಿತ್ರ ಯೋಗಿಡ ಚಿತ್ರದಲ್ಲಿ ನಟಿಸುತ್ತಿರುವ ಇವರು, ಡೂಪ್​ ಇಲ್ಲದೆಯೇ ಚಿತ್ರದಲ್ಲಿ ರಿಸ್ಕ್​ ಶಾಟ್​ ತೆಗೆಯುತ್ತಿರುವ ವೇಳೆ ಅವಘಡವೊಮದು ನಡೆದಿದೆ. ಇತ್ತೀಚೆಗೆ ಈ ಚಿತ್ರದ ಫೈಟ್​ ಸೀನ್​ಗಾಗಿ ಬಾರ್​ ಸೆಟ್​ ಹಾಕಿಕೊಂಡು ಶೂಟಿಂಗ್​ ಮಾಡುವ ವೇಳೆ ಭಾರೀ ಧುರಂತ ನಡೆದು ಹೋಗಿದೆ.

ಫೈಟ್​ ಭಾಗವಾಗಿ ಬಾರ್​ ನಲ್ಲಿ ರೌಡಿಗಳು ನಟಿ ಧನ್ಸಿಕಾ ಮೇಲೆ ಬಿಯರ್​ ಬಾಟಲಿ ಎಸೆಯುತ್ತಾರೆ, ಆದ್ರೆ ದುರಾದೃಷ್ಟವಶಾತ್​ ಒಂದು ಬಿಯರ್​ ಬಾಟೆಲ್​ ಧನ್ಸಿಕಾ ಮುಖಕ್ಕೆ ಜೋರಾಗಿ ಅಪ್ಪಳಿಸಿದೆ. ಇದರಿಂದ ಬಿಯರ್​ ಚೂರುಗಳು ಆಕೆಯ ತಲೆಗೆ ಮತ್ತು ಮುಖದಲ್ಲಿ ಚುಚ್ಚಿವೆ.

ಬಿಯರ್​ ಬಾಟಲ್​ ಚುಚ್ಚಿ ಧನ್ಸಿಕಾ ಮುಖ ಎಲ್ಲಾ ರಕ್ತ ಆಗಿದೆ, ಕಣ್ಣಿನ ಕೆಲಗೆ ಗ್ಲಾಸ್​ ಚೂರು ಚುಚ್ಚಿಕೊಂಡ ಕಾರಣ ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿನಿಮಾ ಶೂಟಿಂಗ್​ ನಲ್ಲಿ ನಟ ನಟಿಯರು ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ನಟಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here