ಚಿತ್ರರಂಗಕ್ಕೆ ಕಾಲಿಟ್ಟರು ಉಪೇಂದ್ರ ಅವರು ಮಗಳು ಐಶ್ವರ್ಯ ಉಪೇಂದ್ರ,ಯಾವ ಚಿತ್ರ ಗೊತ್ತೇ ನೋಡಿರಿ

0
592

ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಟ ಮತ್ತು ನಿರ್ದೇಶಕ ರಿಯಲ್ ಸ್ಟಾರ್ ಅವರು ಮಗಳು ಐಶ್ವರ್ಯ ಉಪೇಂದ್ರ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ,ಹೌದು ಉಪೇಂದ್ರ ಅವರ ಮುದ್ದಿನ ಮಗಳ ಕನ್ನಡ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

‘ದೇವಕಿ’ ಎಂಬ ಕನ್ನಡ ಚಿತ್ರದಲ್ಲಿ ಐಶ್ವರ್ಯ ಅವರು ನಟಿಸಿದ್ದು ಅವರಷ್ಟೇ ಅಲ್ಲದೆ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಕೂಡಾ ನಟಿಸಿದ್ದಾರೆ.ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆ ಆಗಿದ್ದು ಟ್ರೈಲರ್ ಚೆನ್ನಾಗಿ ಮೂಡಿಬಂದಿದೆ,ಸ್ವತ ಉಪೇಂದ್ರ ಅವರೇ ಈ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದರು.

ದೇವಕಿ ಚಿತ್ರವನ್ನು ಲೋಹಿತ್ ನಿರ್ದೇಶನ ಮಾಡಿದ್ದು ಈ ಹಿಂದೆ ಅವರು ಮಮ್ಮಿ ಎಂಬ ಚಿತ್ರವನ್ನು ಮಾಡಿ ಗೆದ್ದಿದ್ದರು ಇನ್ನು ಈ ಚಿತ್ರ ಹುಡುಗಿಯರನ್ನು ಮಾರಾಟ ಮಾಡುವ ಜಾಲವನ್ನು ತಡೆಯುವ ಚಿತ್ರವಾಗಿದ್ದು ಒಳ್ಳೆಯ ಸಂದೇಶ ಇದೆ ಎಂದು ಹೇಳಿದ್ದಾರೆ ನಿರ್ದೇಶಕ ಲೋಹಿತ್ ಅವರು ಹಾಗು ಚಿತ್ರ ಸಧ್ಯದಲ್ಲೇ ಬರಲಿದೆ.

LEAVE A REPLY

Please enter your comment!
Please enter your name here